ಯಲ್ಗಟ್ಟ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಎಸ್ಎಫ್ಐ ತಾಲೂಕ್ ಸಮಿತಿ ಆಗ್ರಿಸಲಾಯಿತು.

Spread the love

ಲಿಂಗಸುಗೂರು ತಾಲೂಕು ವ್ಯಾಪ್ತಿಯಲ್ಲಿ ಬರುವಂತಹ ಯಲ್ಗಟ್ಟ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮೂಲಭೂತ ಸೌಕರ್ಯವಾದ  ಶೌಚಾಲಯ ಇಲ್ಲದಿರುವ ಕಾರಣ ಬಯಲು ಶೌಚಾಲಕ್ಕೆ ಹೋಗುವಂತಾಗಿದೆ ಇದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರದಾಡುವಂತೆ ಆಗಿದೆ ಹಾಗಾಗಿ ಆದಷ್ಟು ಬೇಗ ಶೌಚಾಲಯ ನಿರ್ಮಾಣವಾಗಬೇಕು ಮತ್ತು ನೀರಿನ ವ್ಯವಸ್ಥೆ ಇಲ್ಲದೆ ಹಲವು ಬಾರಿ ರಸ್ತೆ ದಾಟಿ ದೂರವಿರುವ ಬಾವಿಯ ನೀರನ್ನು ಕುಡಿಯಲು ಹೋಗುವಂತ ಪರಿಸ್ಥಿತಿ ಇದೆ ಹಾಗಾಗಿ ಶಾಲೆಗೆ ಪ್ರತ್ಯೇಕವಾದ ನೀರಿನ ವ್ಯವಸ್ಥೆ ಮಾಡಿಸಿ ಫಿಲ್ಟರ್ ಅಳವಡಿಸಬೇಕು  ಈ ಮೇಲಿನ ಮೂಲಭೂತ ಸೌಕರ್ಯಗಳು ಕೊರತೆ ಉಂಟಾಗಲು ಅಲ್ಲಿನ ಮುಖ್ಯ ಗುರುಗಳಾದ ನಾಗನಗೌಡ ಅವರೇ ಮುಖ್ಯ ಕಾರಣ ಏಕೆಂದರೆ ಅವರು ಶಾಲೆಗೆ ಸರಿಯಾಗಿ ಭೇಟಿ ನೀಡುತ್ತಿಲ್ಲ ಅಲ್ಲಿನ ಕುಂದು ಕೊರತೆಯ ಕುರಿತು ಈ ಮುಂಚೆ ವರದಿ ನೀಡಿದ್ದರೆ ಅದರ ಪ್ರತಿ ನಮಗೆ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯ ಕಾರ್ಯಾಲಯದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು  ಆದಷ್ಟು ಬೇಗ ಈ ಮೇಲಿನ ಸಮಸ್ಯೆಗಳನ್ನು ಬಗೆಹರಿಸಬೇಕು ಇಲ್ಲದಿದ್ದಲ್ಲಿ ತೀವ್ರವಾದ ಹೋರಾಟವನ್ನು ಕೈಗೊಳ್ಳಲಾಗುವುದೆಂದು ಎಸ್ಎಫ್ಐ ತಾಲೂಕ್ ಸಮಿತಿ ಆಗ್ರಿಸಲಾಯಿತು. ಈ ಸಂದರ್ಭದಲ್ಲಿ  ಎಸ್ ಎಫ್ ತಾಲೂಕ ಮುಖಂಡರಾದ ವಿಶ್ವ ಅಂಗಡಿ ,ತಾಲೂಕ ಕಾರ್ಯದರ್ಶಿ ಪವನ್ ಕಮದಳ್ ಮತ್ತು ತಾಲೂಕು ಸಮಿತಿ ಸದಸ್ಯರಾದ ಅಜ್ಮೀರ್ ಮತ್ತು ಸಿದ್ದಾರ್ಥ್ ಉಪಸ್ಥಿತರಿದ್ದರು.

ವರದಿ-ಉಪಳೇಶ ವಿ.ನಾರಿನಾಳ.

Leave a Reply

Your email address will not be published. Required fields are marked *