ಶಿರ್ಷಿಕೆ- ಹೋರಾಟದ ಹೊಳೆಗೆ ಹಲವು ತೊರೆಗಳು…

Spread the love

ಶಿರ್ಷಿಕೆ- ಹೋರಾಟದ ಹೊಳೆಗೆ ಹಲವು ತೊರೆಗಳು…


ಬದುಕಿನ ವೈಶಿಷ್ಟ್ಯ ಹಾಗೆ, ಮನದ ಗರ್ಭಗುಡಿಯ ಅಂತರಾಳವನ್ನು ಅರಿಯುವುದು ಕಷ್ಟ. ಹರಿಯುವ ನದಿಯ ಕಥೆ ನಮ್ಮ ಕಥೆ ಎರಡು ಭಿನ್ನವೆನಿಸುವುದಿಲ್ಲ. ನದಿಯು ತನ್ನ ಉಗಮ ಸ್ಥಾನದಿಂದಲೆ ಹೋರಾಟ ಮಾಡುತ್ತಾ ಹುಟ್ಟಿ ಸಾಗರ ಸಮುದ್ರವನ್ನು ಸೇರುವ ತನಕ ಅದರದ್ದು ಒಂದು ರೀತಿಯ ಹೋರಾಟದ ಬದುಕು, ನೆಮ್ಮದಿ ಕೂಡ ಹಾಗೆ ಅಲ್ಲವೇ, ಹುಟ್ಟಿನಿಂದಲೇ ಎಲ್ಲದಕ್ಕೂ ಹೋರಾಟ ಮಾಡುತ್ತಲೇ ಬರಬೇಕು. ಎಷ್ಟೋ ಪರಿಶ್ರಮ ಪ್ರಯತ್ನವಿದ್ದರೂ ದುರಾದೃಷ್ಟ ಎಂಬ ಪೆಡಂಭೂತ ನಮ್ಮನ್ನು ಬಿಡದಿದ್ದರೆ, ಯಶಸ್ಸು ಎಂಬುದು ನಮಗೆ ಮರೀಚಿಕೆ ಆಗುತ್ತದೆ. ಇಲ್ಲಿ ಸೋಲಿಗೆ ಕಾರಣಗಳು ಯಾರಿಗೂ ಬೇಕಿಲ್ಲ, ಗೆಲುವಿನ ಕಥೆಗಳು ಅಷ್ಟೇ ಬೇಕು.
ಪ್ರತಿ ಬಾರಿಯೂ ನಾವು ಊಹಿಸಿದ ರೀತಿಯಲ್ಲಿ ಫಲಿತಾಂಶ ಬಾರದಿದ್ದರೆ ಮನಸ್ಸು ಸಹಜವಾಗಿ ಘಾಸಿಗೊಳುತ್ತದೆ.
ನಿತ್ಯ ಅಫೀಮು ತೆಗೆದುಕೊಳ್ಳುವವರಿಗೆ ಸಾರಾಯಿಯ ನಶೆ ಏರುವುದಿಲ್ಲ ಎನ್ನುವ ಕಾರಂತರ ಮಾತಿನಂತೆ, ಪ್ರತಿದಿನ ಒಂದಲ್ಲೊಂದು ಆಘಾತವನ್ನು ಎದುರಿಸುವವರಿಗೆ ಹೊಸದೊಂದು ಹತಾಶೆಯು ಯಾವ ಪರಿಣಾಮವನ್ನು ಬೀರುವುದಿಲ್ಲ.
ಮತ್ತೆ ನಾವು ಬದುಕಿನ ಅನಿವಾರ್ಯಗಳಿಗೆ ಅವಶ್ಯಕತೆಗಳಿಗೆ ಒಗಿಕೊಳ್ಳುತ್ತೇವೆ. ಈ ಪರಿಸ್ಥಿತಿಯಲ್ಲಿ ನಾವೆಲ್ಲರೂ ಸಮಾನ ದುಃಖಿಗಳು.
ಸೃಷ್ಟಿಯ ವಿಚಿತ್ರವೇ ಹಾಗೆ ಇಲ್ಲಿ ಪ್ರತಿದಿನ ಕೊಲೆ ಸುಲಿಗೆ ದರೋಡೆ ಅತ್ಯಾಚಾರ ಅನಾಚಾರ ಮಾನವೀಯತೆ ನ್ಯಾಯ ನೀತಿ ಪ್ರಾಮಾಣಿಕತೆ ಹೀಗೆ ಎಲ್ಲ ರೀತಿಯ ಕೋನಗಳು ನಮಗೆ ದೊರಕುತ್ತವೆ. ಅದರಲ್ಲಿ ನಮಗೆ ಒಳಿತಾಗುವ ಅಂಶಗಳನ್ನು ಅಷ್ಟೇ ತೆಗೆದುಕೊಂಡು ಈ ಹೋರಾಟದ ಹೊಳೆಯ ಬದುಕಿಗೆ ಒಂದು ಅರ್ಥ ಆಯಾಮವನ್ನು ಕೊಡೋಣ….
ಇಂತಿ ನಿಮ್ಮವ ಚೇತನ್ ಗೌಡ.

Leave a Reply

Your email address will not be published. Required fields are marked *