Blog
ಡಾ: ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನಾ ಸಭೆಗೆ ಹೋಗಲು ಮುಸ್ಲಿಮರು ಬೆಂಬಲಿಸಿದ್ದರು – ಎಸ್.ಎ.ಗಫಾರ್.
ಡಾ: ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನಾ ಸಭೆಗೆ ಹೋಗಲು ಮುಸ್ಲಿಮರು ಬೆಂಬಲಿಸಿದ್ದರು – ಎಸ್.ಎ.ಗಫಾರ್.
ಕೊಪ್ಪಳ : ಡಾ: ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಗೆ ಹೋಗಲು ಪಶ್ಚಿಮ ಬಂಗಾಳದಿಂದ ಮುಸ್ಲಿಮ್ ಲೀಗ್ ಮೂಲಕ ಮುಸ್ಲಿಮರು ಬೆಂಬಲಿಸಿ ಗೆಲ್ಲಿಸಿದ್ದರು ಎಂದು ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಹೇಳಿದರು.
ನಗರದ ಡಾ:ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಭ್ರಾತೃತ್ವ ಸಮಿತಿಯಿಂದ ಹಮ್ಮಿಕೊಂಡಿದ್ದ ಡಾ: ಬಿ.ಆರ್. ಅಂಬೇಡ್ಕರ್ ಅವರ 134 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಸ್.ಎ.ಗಫಾರ್ ಮುಂದುವರೆದು ಮಾತನಾಡಿ ಸಂವಿಧಾನ ಸಭೆಗೆ ಕಳುಹಿಸುವ ಮೂಲಕ ದಲಿತರು ಮುಸ್ಲಿಮರು ಅಂದಿನಿಂದಲೂ ಒಳನಾಟ ಹೊಂದಿದ್ದರು. ನಂತರದ ದಿನಗಳಲ್ಲಿ ಒಗ್ಗಟ್ಟಾಗಿದ್ದ ದಲಿತ ಮುಸ್ಲಿಮರನ್ನು ಕೆಲ ಶಕ್ತಿಗಳು ಬೇರ್ಪಡಿಸುವ ಕಾರ್ಯದಲ್ಲಿ ನಿರತರಾಗಿದ್ದು ಎಚ್ಚರದಿಂದಿರಬೇಕು,ದೇಶದ ಎಲ್ಲ ಜಾತಿ ಜನಾಂಗದವರಿಗೆ ಅನುಕೂಲವಾಗುವಂತೆ ಸಂವಿಧಾನ ಡಾ: ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ್ದಾರೆ.ಎಲ್ಲಾ ಜನಾಂಗದವರು ಒಕ್ಕಟ್ಟಾಗಿ ಸಂವಿಧಾನವನ್ನು ಉಳಿಸಿಕೊಳ್ಳುವಂತೆ ಕೋರಿದರು.
ಭ್ರಾತೃತ್ವ ಸಮಿತಿಯ ಸಂಸ್ಥಾಪಕ ಹೈಕೋರ್ಟ್ ನ್ಯಾಯವಾದಿ ಮಂಜುನಾಥ್ ಬಾಗೇಪಲ್ಲಿ ಮಾತನಾಡಿ ಆಗ ರಾಮ ಸೀತೆಗೆ ಕಾಡಿಗೆ ಕಳುಹಿಸಿದರೆ ಡಾ: ಬಿ.ಆರ್.ಅಂಬೇಡ್ಕರ್ ಅವರು ಮಹಿಳೆಯನ್ನು ಲೋಕ ಸಭೆಗೆ ಕಳುಹಿಸಿದರು ಎಂದು ನುಡಿದರು.
ದಲಿತ ಸಂಘರ್ಷ ಸಮಿತಿ (ಭೀಮಾ ವಾದ) ರಾಜ್ಯ ಸಂಘಟನಾ ಸಂಚಾಲಕ ರಾಮಣ್ಣ ಚೌಡಕಿ ಮಾತನಾಡಿ ಡಾ: ಬಿ.ಆರ್. ಅಂಬೇಡ್ಕರ್ ಅವರು ವಿಶ್ವದಲ್ಲೇ ಭಾರತಕ್ಕೆ ಅತ್ಯುತ್ತಮ ಸಂವಿಧಾನವನ್ನು ರಚಿಸಿದ್ದಾರೆ, ಎಲ್ಲಾ ಸಮಾಜದವರು, ನಾಯಕರು.ಯುವಕರು, ಅಕ್ಕ ತಂಗಿಯರು ಕೂಡಿ ಡಾ: ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ವಿಜ್ರಂಭಣೆಯಿಂದ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಮುದುಕಪ್ಪ ಹೊಸಮನಿ ಮಾತನಾಡಿ ರಾತ್ರಿ ಒಂದು ಗಂಟೆಗೂ ಮಹಿಳೆಯರು ಓಡಾಡುತ್ತಾರೆ ಎಂದರೆ ಅದು ಅಂಬೇಡ್ಕರ್ ಅವರು ಬರೆದ ಸಂವಿಧಾನ ಉಳಿದರೆ ನಾವೆಲ್ಲರೂ ಉಳಿಯುತ್ತವೆ, ಇಲ್ಲದ್ದರೆ ನಾವು ಯಾರೂ ಉಳಿಯುವುದಿಲ್ಲ. ಹಳ್ಳಿ ಹಳ್ಳಿಗಳಲ್ಲಿ ಸಂವಿಧಾನ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಭ್ರಾತೃತ್ವ ಸಮಿತಿಯ ಮುಖಂಡ ಫಾದರ್ ಚನ್ನಬಸಪ್ಪ ಅಪ್ಪಣ್ಣವರ್ ಮಾತನಾಡಿ ಡಾ: ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದತ್ತ ಸಮಾನತೆ ನಾವು ನಮ್ಮ ಮನೆಗಳಿಂದ ಪ್ರಾರಂಭಿಸೋಣ ಎಂದು ಹೇಳಿದರು.
ಭ್ರಾತೃತ್ವ ಸಮಿತಿಯ ಕಾರ್ಯಕರ್ತ ಸುಂಕಪ್ಪ ಮೀಸಿ. ಜನಪರ ಸಂಘಟನೆಗಳ ಒಕ್ಕೂಟದ ಮುಖಂಡ ಗೌಸ್ ನೀಲಿ.ಗವಿಸಿದ್ದಪ್ಪ ಹಲಗಿ, ಗಾಳೆಪ್ಪ ಮುಂತಾದವರು ಭಾಗವಹಿಸಿದ್ದರು.