ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ರೈತ ಸಂಪರ್ಕಕ್ಕೆ ಬಿತ್ತನೆ ಬಿಜ ಹಾಗೂ ರಸಗೊಬ್ಬರ ಖರೀದಿಗೆ ಮುಗಿ ಬಿದ್ದ ರೈತರು..
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಹಾಗೂ ತಾವರಗೇರಾ ಹೋಬಳಿಯ ರೈತರು ಈ ಮುಂಗಾರು ಬೆಳೆಗೆ (ರೋಹಿಣಿ ಮಳೆ)ಯಿಂದ ರೈತರು ತಾವರಗೇರಾ ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸುತ್ತಿದ್ದು ರೈತರು ಮತ್ತು ದುಡಿಯುವ ವರ್ಗದ ಜನರು ಹಳ್ಳಿ/ಹಳ್ಳಿಗಳಿಂದ ಸಿಟಿಗಳಿಗೆ ದುಡಿಯಲು ಹೋಗಿದ್ದು, ಸದ್ಯ ಈ ಕೊರೊನಾ ಮಹಾಮಾರಿಯಿಂದ ತಮ್ಮ ಹಳ್ಳಿಗಳತ್ತ ಚಿತ್ತ ಮಾಡಿ ಬಂದಿರುವ ರೈತರು ಹಾಗೂ ದುಡಿಯುವ ವರ್ಗದ ಜನರು ತಮ್ಮ ತಮ್ಮ ಹೊಲ ಗದ್ದೆಗಳಲ್ಲಿ ಬಿತ್ತನೆಗೆ ಮುಂದಾಗಿದ್ದು ವಿಶೇಷವಾಗಿದೆ, ಈ ಕೊರೊನಾ ಮಾಹಮಾರಿ ಖಾಯಿಲೆ ಬಂದಾಗಿನಿಂದ ಸಾವು ನೋವುಗಳು ಹಾಗಿದ್ದಾವೆ, ಆದರೂ ಇದರ ಜೊತೆ ಜೊತೆಗೆ ಕೆಲವರಿಗೆ ತಕ್ಕ ಪಾಠ ಕಲಿಸಿರುವುದಂತ್ತು ಸತ್ಯ. ಏನೇ ಇರಲಿ ಒಟ್ಟಿನಲ್ಲಿ ಹಳ್ಳಿ ಜನರು ತಮ್ಮ ಕುಟುಂಬದ ಜೊತೆಗೆ ನೆಮ್ಮದಿಯ ಜೀವನ ಸಾಗಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಹಳ್ಳಿ ಜನರು ತಮ್ಮ ರೈತಾಪಿ ಕೆಲಸಕ್ಕೆ ಮರಳಿ ಸಾಗಿರುವುದು ಇದೊಂದು ಹೆಮ್ಮೆಯ ವಿಷಯವಾಗಿದೆ. ಸದ್ಯ ಮಳೆರಾಯನ ಕೃಪೆಯಿಂದ ಭೂಮಿ ತಾಯಿಯ ಒಡಲು ತುಂಬಿದೆ. ಹಾಗಾಗಿ ರೈತರು ಬಿತ್ತನೆ ಬಿಜಕ್ಕಾಗಿ ಹಾಗೂ ರಸಗೊಬ್ಬರ ಸಲುವಾಗಿ ತಾವರಗೇರಾ ಪಟ್ಟಣದಲ್ಲಿ ರೈತ ಸಂಪರ್ಕ ಕೇಂದ್ರದ ಮುಂದೆ ಸಾಲು ಸಾಲಾಗಿ ನಿಂತ್ತಿರುವ ದೃಶ್ಯ ಕಂಡು ಬಂತ್ತು, ಆರೋಗ್ಯವೇ ಭಾಗ್ಯ ಎನ್ನುವಂತೆ ಹಿರಿಯರು ಹೇಳಿದಂತೆ ಮೊದಲು ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು, ಜನರಿಂದ ಸಮಾಜಿಕ ಅಂತರ ಇರಬೇಕು, ಚಾಚು ತಪ್ಪದೆ ಮಾಸ್ಕ ಖಡಾಯವಾಗಿ ಧರಿಸಬೇಕು,ಸ್ಯಾನಿಟೈಜರ ಇಲ್ಲದಿದ್ದರು ಮನೆಯಲ್ಲಿರುವ ಸಾಬೂನಿನಿಂದ ಸ್ವಚ್ಚವಾಗಿ ತೊಳೆದುಕೊಳ್ಳಬೇಕು ಇದರಿಂದ ಮಾತ್ರ ನಾವುಗಳು ಈ ಮಾಹಮಾರಿ ಕೊರೊನಾ ರೋಗದಿಂದ ತಡೆಗಟ್ಟಲು ಸ್ವಲ್ಪ ಸಾಧ್ಯವಾಗುತ್ತೆ ಇಲ್ಲದಿದ್ದರೆ ಪ್ರತಿಯೊಂದು ತಪ್ಪು/ಒಪ್ಪುಗಳಿಗೆ ನಾವೇ ಜವಬ್ದಾರರು,
ವರದಿ – ಸೋಮನಾಥ ಹೆಚ್. ಸಂಗನಾಳ.