ವಿಶ್ವಬಂಧು ಪರಿಸರ ಬಳಗದಿಂದ ಹಮ್ಮಿಕೊಂಡ ಪರಿಸರದ ಜಾಗೃತಿ ಆಂದೋಲನದ ಐದನೇಯ ವಾರದ ಸಸಿ ನೆಡುವ ಕಾರ್ಯಕ್ರಮ ಜರುಗಿತು.
ಸಿಂದಗಿ; ಪರಿಸರದ ಕಾರ್ಯ ಪರಮಾತ್ಮನ ಕಾರ್ಯವಿದ್ದಂತೆ ಪರಿಸರ ಪ್ರೀತಿಸಿದರೆ ಪರಮಾತ್ಮನ ಕೃಪೆಗೆ ಪಾತ್ರರಾದಂತೆ ಕಾರಣ ನಾವೆಲ್ಲರೂ ಪರಿಸರದ ಪ್ರೀತಿಯ ಜೊತೆಗೆ ರಕ್ಷಣೆಯ ಹೊಣೆ ಹೊತ್ತುಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಶಂಕರ ಮಳ್ಳಿ ಹೇಳಿದರು. ಪಟ್ಟಣದ ಸಂತ ಸೇವಾಲಾಲ ದೇವಸ್ಥಾನದ ಆವರಣದಲ್ಲಿ ವಿಶ್ವಬಂಧು ಪರಿಸರ ಬಳಗದಿಂದ ಹಮ್ಮಿಕೊಂಡ ಪರಿಸರದ ಜಾಗೃತಿ ಆಂದೋಲನದ ಐದನೇಯ ವಾರದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾÀಡಿದರು. ಪರಿಸರದ ಅವನತಿಯಿಂದ ಅಗುವ ಅನಾಹುತಗಳೇನೆಂಬುದನ್ನು ನಾವು ಕರೋನಾ ಮಹಾಮಾರಿಯ ಹಾವಳಿಯ ಸಂದರ್ಭದಲ್ಲಿ ಅನುಭವಿಸಿದ್ದೇವೆ ಹಾಗೂ ಪ್ರಾಣವಾಯು ಆಮ್ಲಜನಕದ ಅವಶ್ಯಕತೆಯ ಮಹತ್ವವನ್ನು ಅರಿತ್ತಿದ್ದೇವೆ ಎಂದರು.ಶಿಕ್ಷಕ ವೈ.ಎಂ.ಬಿರಾದಾರ ಮಾತನಾಡಿ, ವಿಜ್ಞಾನದ ನಾಗಾಲೋಟದ ನಾಗರೀಕರಣದ ಭರದಲ್ಲಿ ನಾವು ಸಾಕಷ್ಟು ಪರಿಸರ ನಾಶಕ್ಕೆ ಕಾರಣೀಭೂತರಾಗಿದ್ದೇವೆ ನಾವು ಇಂದೇ ಪರಿಸರ ರಕ್ಷಣೆಗಾಗಿ ಗಿಡಮರಗಳನ್ನು ನೆಟ್ಟು ಬೆಳೆಸಿದರೆ ನಮ್ಮ ಮುಂದಿನ ಪೀಳಿಗೆ ಉಳಿಯಲು ಸಾಧ್ಯ ಎಂದು ಕಾಳಜಿ ವ್ಯಕ್ತಪಡಿಸಿದರು. ವಿಶ್ವಬಂಧು ಪರಿಸರ ಬಳಗದ ಸಂಚಾಲಕ ಕಸಾಪ ಅದ್ಯಕ್ಷ ಸಿದ್ದಲಿಂಗ ಚೌಧರಿ, ಇನ್ನೋರ್ವ ಸಂಚಾಲಕ ಪತ್ರಕರ್ತರ ಸಂಘದ ಅದ್ಯಕ್ಷ ಆನಂದ ಶಾಬಾದಿ, ನಿವೃತ್ತ ಶಿಕ್ಷಕ ಎಂ.ಜೆ.ನಾಯಕ ಮಾತನಾಡಿ, ಸೇವಾಲಾಲ ಮಂದಿರದ ಪರಿಸರ ಅತ್ಯಂತ ಪ್ರಶ್ಯಸ್ತ ಹಾಗೂ ಶಾಂತಿಯಿAದ ಕೂಡಿದ್ದು ದೇವಾಲಯದ ಆಧ್ಯಾತೀಕ ಸಿರಿವಂತಿಕೆಗೆ ಧಕ್ಕೆ ಬಾರದಂತೆ ದೇವಾಲಯವನ್ನು ಅಭಿವೃದ್ಧಿಗೊಳಿಸುವಂತೆ ಸಲಹೆ ನೀಡಿದರು. ಶ್ರೀ ಸಂತ ಸೇವಾಲಾಲ ಶ್ರೀ ಜಗದಂಬಾ ದೇವಸ್ಥಾನದ ಅರ್ಚಕ ವಸಂತ ಮಹಾರಾಜ ಆಶಿರ್ವಚನ ನೀಡಿದರು. ಈ ಸಂದರ್ಭದಲ್ಲಿ ಡಾ. ಅನೀಲ ನಾಯಕ, ದೇವರ ಹಿಪ್ಪರಗಿ ಎನ್‌ಪಿಎಸ್ ಅಧ್ಯಕ್ಷ ಶಿವುಕುಮಾರ ಕಲ್ಲೂರ, ಇಂಡಿ ದೈಹಿಕ ಶಿಕ್ಷಣಾಧಿಕಾರಿ ಸಂಗನಗೌಡ ಹಚಡದ, ಪತ್ರಕರ್ತ ಪಂಡಿತ ಯಂಪೂರೆ, ಸಾವಿತ್ರಿಬಾಯಿ ಫುಲೆ ಸಂಘದ ಅದ್ಯಕ್ಷೆ ಎಸ್.ಎಂ.ಮಸಳಿ, ಅಂಗವೀಕಲ ಐಕ್ಯತಾ ವೇದಿಕೆಯ ಅಧ್ಯಕ್ಷೆ ಸಬಿಯಾ ಮರ್ತೂರ, ಶಿಕ್ಷಕ ಎಂ.ಆರ್.ಡೋಣಿ, ಜಗದೀಶ ಕಾಕಂಡಕಿ, ಜನಸ್ಪಂದನ ಟ್ರಸ್ಟನ ಜಿಲ್ಲಾದ್ಯಕ್ಷ ಮಹಾಂತೇಶ ನೂಲಾನವರ, ಎಸ್.ಆರ್.ಪಾಟೀಲ, ಸಾಯಬಣ್ಣ ದೇವರಮನಿ, ಬಾಗಣ್ಣ ತಮದಡ್ಡಿ, ರವಿ ಮಣ್ಣೂರ, ಧರ್ಮರಾಜ ಪುರದಾಳ ಸೇರಿಂದಂತೆ ಅನೇಕರಿದ್ದರು.
ವರದಿ: ಮಹೇಶ ಶರ್ಮಾ