ದೇಶ ಕಂಡ ಅಪರೂಪದ ಭಾರತರತ್ನ : ಡಾಕ್ಟರ್ ಬಾಬು ಜಗಜೀವನ್ ರಾವ್…
ಸ್ವತಂತ್ರ ಪೂರ್ವ ಹಾಗೂ ಸ್ವತಂತ್ರ ನಂತರದ ದೇಶ ಪ್ರೇಮದ ಕಟ್ಟಾಳು ಹಸಿರು ಕ್ರಾಂತಿ ಹರಿಕಾರ ಶ್ರೀ ಬಾಬು ಜಗಜೀವನ್ ರಾವ್ ಅವರ ಪುಣ್ಯ ಜಯಂತಿಯನ್ನು ಪ್ರತಿ ವರ್ಷ ಜುಲೈ 6 ನೇ ತಾರೀಕು ಭಾರತದಾದ್ಯಂತ ಆಚರಿಸಲಾಗುತ್ತದೆ. ಭಾರತ ದೇಶವನ್ನು ಬ್ರಿಟಿಷ್ ಕೈವಶ ದಿಂದ ಬಿಡಿಸಲು ಭಾರತಕ್ಕೆ ಸ್ವತಂತ್ರ ಕೊಡಿಸಲು ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ. ಭಾರತ ಸ್ವತಂತ್ರಕ್ಕಾಗಿ ಹಲವು ತ್ಯಾಗಗಳನ್ನು ಮಾಡಿದ್ದಾರೆ. 1936 ಡಿಸೆಂಬರ್ 10ನೇ ತಾರೀಕು ಶಹಬಾದ್ ಕ್ಷೇತ್ರದಿಂದ ಇವರು ಅವಿರೋಧವಾಗಿ ಆಯ್ಕೆಯಾಗುತ್ತಾರೆ. ಬಾಬು ಜಗಜೀವನ್ ರಾವ್ ವರ್ಚಸ್ಸಿನಿಂದ ಉಳಿದೆಲ್ಲಾ 18 ಉಮೇದುವಾರರು ಜಯಗಳಿಸುತ್ತಾರೆ ಬಾಬು ಜಗಜೀವನ್ ರಾವ್ ರವರ ರಾಜಕೀಯ ರಣನೀತಿ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತ್ತು, ರಣ್ಣನೀತಿಯನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟಸಾಧ್ಯ ಎನ್ನುತ್ತಿದ್ದರು. ನಂತರ ಬಾಬು ಜಗಜೀವನ್ ರವರು ಕಾಂಗ್ರೆಸ್ ಸದಸ್ಯತ್ವವನ್ನು ಸ್ವೀಕಾರ ಮಾಡಿದರು. ಬ್ರಿಟಿಷ್ ಸರ್ಕಾರವು ಪ್ರತಿಯೊಂದು ರಾಜ್ಯದಲ್ಲಿ ಅಣುಕು ಮಂತ್ರಿಮಂಡಲವನ್ನು ಮಾಡುವ ಪ್ರಯತ್ನ ಮಾಡುತ್ತಿತ್ತು. ಇದಕ್ಕೆ ಶಾಸಕರ ಬೆಂಬಲ ಬೇಕಾಗಿದ್ದ ಕಾರಣ ಅವರಿಗೆ ಮಂತ್ರಿಮಂಡಲ ಮಂತ್ರಿಗಿರಿ ಇನ್ನಿತರ ಹುದ್ದೆಗಳನ್ನು ಆಸೆಯನ್ನು ತೋರಿಸುತ್ತಿತ್ತು. ಯುವ ರಾಜಕಾರಣಿಗಳು ಯುವ ಮುಖಂಡರಿಗೆ ಬ್ರಿಟಿಷ್ ಸರ್ಕಾರ ಕೈತುಂಬಾ ಸಂಬಳ ಮತ್ತು ಐಷಾರಾಮಿ ಬಂಗಲೆಗಳನ್ನು, ಸುಖ ಸೌಕರ್ಯಗಳನ್ನು ಇತ್ಯಾದಿಗಳನ್ನು ಒದಗಿಸುವ ಭರವಸೆಯನ್ನು ಕೊಡುತ್ತಿತ್ತು. ಎಷ್ಟು ಸಾಧ್ಯವೋ ಅಷ್ಟು ಶೀಘ್ರದಲ್ಲಿ ಅಣುಕು ಮಂತ್ರಿಮಂಡಲವನ್ನು ಸ್ಥಾಪನೆ ಮಾಡಲು ಬ್ರಿಟಿಷ್ ಸರ್ಕಾರ ತುದಿಗಾಲ ಮೇಲೆ ನಿಂತಿತ್ತು. ಅದೇ ತಾನೆ ಬಿಹಾರದ ಶಹಾಬಾದ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಬಾಬು ಜಗಜೀವನ್ ರವರಿಗೆ ಬ್ರಿಟಿಷ್ ಸರ್ಕಾರ ಮಂತ್ರಿಗಿರಿ ಕೊಡುವ ಭರವಸೆಯನ್ನು ಕೊಟ್ಟಿತ್ತು ಆದರೆ ಬಾಬು ಜಗಜೀವನ್ ರವರು ನನಗೆ ಮಂತ್ರಿಸ್ಥಾನ ಬೇಡ ನನಗೆ ಕೊಡುವುದಾದರೆ ಭಾರತಕ್ಕೆ ಸ್ವತಂತ್ರ ಕೊಡಿ ಎಂದು ಎಲ್ಲಾ ಬೇಡಿಕೆಗಳನ್ನು ತಿರಸ್ಕಾರ ಮಾಡಿದ್ದರು. ತಮ್ಮ ವೈಯಕ್ತಿಕ ಬದುಕನ್ನು ಕಟ್ಟಿಕೊಳ್ಳುವ ಬದಲು ಭಾರತ ದೇಶವನ್ನು ಸ್ವತಂತ್ರಗೊಳಿಸುವ ಕನಸನ್ನು ಸಹಕಾರ ಗೊಳಿಸಲು ಎಂತಹ ತ್ಯಾಗಕ್ಕೂ ಸಿದ್ಧರಾಗಿದ್ದರು ಎಂಬುದಕ್ಕೆ ಇದು ಒಂದು ಸಣ್ಣ ಉದಾಹರಣೆ. ಬ್ರಿಟಿಷ್ ಸರ್ಕಾರದ ಪ್ರಸ್ತಾವನೆಯನ್ನು ಬಾಬು ಜಗಜೀವನರಾವ್ ತಿರಸ್ಕಾರ ಮಾಡಿದ್ದು ಭಾರತದಂತಹ ದೊಡ್ಡ ಸಂಚಲನ ಸೃಷ್ಟಿಸಿತ್ತು, ಇವರ ನಿರ್ಣಯಕ್ಕೆ ಘಟಾನುಘಟಿ ನಾಯಕರು ಸ್ವತಂತ್ರ ಹೋರಾಟಗಾರರು ಆಶ್ಚರ್ಯಚಕಿತರಾಗಿ ಬಿಟ್ಟಿದ್ದರು, ಒಬ್ಬ ಅಸ್ಪೃಶ್ಯ ಜನಾಂಗದ, ಸಣ್ಣ ಸಾಧಾರಣ ಕೃಷಿಕ ಕುಟುಂಬದ ಯುವಕ ಇಷ್ಟು ದೊಡ್ಡ ತ್ಯಾಗ ಮಾಡುವುದೆಂದು ಅಂದಾಜು ಯಾರಿಗೂ ಇರಲಿಲ್ಲ. ದೇಶದ ಮೂಲೆ ಮೂಲೆಯಿಂದ ನಾಯಕರುಗಳು ಬಗೆಬಗೆಯ ವಿಶ್ಲೇಷಣೆಗಳಿಂದ ಇವರನ್ನು ಅಲಂಕಾರವಾಗಿ ಮಾಡಿಬಿಟ್ಟಿದ್ದರು ಗಾಂಧೀಜಿಯವರು ಇವರಿಗೆ ಬೆಂಕಿಯಲ್ಲಿ ಪುಟವಿಟ್ಟ ಅಪ್ಪಟ ಬಂಗಾರ ಎಂದು ಹೇಳಿಬಿಟ್ಟರು. ಬಾಬೂಜಿಯವರ ಒಂದು ನಿರ್ಧಾರದಿಂದ ಬಿಹಾರದಲ್ಲಿ ಬಿಟಿಷರು ಉದ್ದೇಶಿಸಿದ ಅಣುಕು ಮಂತ್ರಿಮಂಡಲ ಯಶಸ್ವಿ ಕಾಣಲಿಲ್ಲ ವಿಫಲಗೊಂಡಿತ್ತು. ಇವರ ನಿರ್ಧಾರದಿಂದ ಬಿಹಾರದಲ್ಲಿ ಕಾಂಗ್ರೆಸ್ ಮಂತ್ರಿಮಂಡಲ ರಚನೆಗೊಂಡು ಇದು ಬಿಹಾರದಲ್ಲಿ ಕಾಂಗ್ರೆಸ್ ಮೊದಲು ಮತ್ತು ಅತಿದೊಡ್ಡ ಗೆಲುವಾಗಿತ್ತು. ಇದೇ ಸಂದರ್ಭದಲ್ಲಿ ಸ್ವತಂತ್ರ ಹೋರಾಟದ ಕಿಚ್ಚು ಅಸಹಕಾರ ಚಳುವಳಿಗೆ ಮಿಂಚಿನ ವೇಗ ದೊರಕಿತು ಭಾರತದ್ಯಾಂತ ಸ್ವತಂತ್ರ ಸಂಗ್ರಾಮದಲ್ಲಿ ದೊಡ್ಡಪ್ರಮಾಣದಲ್ಲಿ ಜನಸಾಮಾನ್ಯರು ಪಾಲ್ಗೊಳ್ಳಲು ಪ್ರಾರಂಭ ಮಾಡಿದರು. ಡಾಕ್ಟರ್ ಬಾಬು ಜಗಜೀವನ್ ರಾಮ್ ಅವರು ಭಾರತದ ಅತ್ಯಂತ ಹಿರಿಯ ರಾಜಕಾರಣಿ ಪಟುಗಳಲ್ಲಿ ಒಬ್ಬರು ಸ್ವತಂತ್ರ ಹೋರಾಟಗಾರರು ಸಮಾಜ ಸುಧಾರಕರು ಪರಿಶಿಷ್ಟ ಜಾತಿ ಸಮುದಾಯಗಳ ಸಶಕ್ತ ಧ್ವನಿಯಾಗಿದ್ದರು ನಾಡಿಗೆ ಸಲ್ಲಿಸಿದ ಸೇವೆ ಅನುಪಮವಾದದ್ದು ಅತ್ಯಂತ ದೀರ್ಘಕಾಲ ಪಾರ್ಮೆಟ್ ಸದಸ್ಯರಾಗಿ ದುಡಿದ ಅಪಾರ ರಾಜಕೀಯ ಅನುಭವ ಗಳಿಸಿದವರು. ರಾಷ್ಟ್ರದ ಭವಿಷ್ಯವನ್ನು ರೂಪಿಸಿದ ಹಿರಿಯ ಚೇತನ ಗಳಲ್ಲಿ ಒಬ್ಬರಾದ ಅವರು ಮುಂದೆ ಭಾರತದ ಉಪ ಪ್ರಧಾನಮಂತ್ರಿ ಹಾಗೂ ಮಹತ್ವದ ಸ್ಥಾನವನ್ನು ಅಲಂಕರಿಸಿದರು. ಈ ಅವಧಿಯಲ್ಲಿ ಅವರು ಕಾರ್ಮಿಕ ಸಚಿವರಾಗಿ, ಸಾರಿಗೆ ಸಚಿವರಾಗಿ, ಸಂಪರ್ಕ ಸಚಿವರಾಗಿ, ರೈಲ್ವೆ ಸಚಿವರಾಗಿ, ಆಹಾರ ಸಚಿವರಾಗಿ ಹಾಗೂ ಕೃಷಿ ಮತ್ತು ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದರು. ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಪ್ರತಿಪಾದನೆ ಕಟ್ಟಾಳಾಗಿ ಸಂಸತ್ತಿನಲ್ಲಿ ಅವರು ವಹಿಸಿದ ನೇತೃತ್ವ ಅವಿಸ್ಮರಣೀಯವಾದದ್ದು ದೇಶ ಕಂಡ ಅಪರೂಪದ ಭಾರತರತ್ನ ಡಾಕ್ಟರ್ ಬಾಬು ಜಗಜೀವನ್ ರಾವ್. ಕೃಪೆ: ನೆನಪು ಸಂಜೀವಿನಿ, ಇಂದ್ರಾಣಿ ಜಗಜೀವನರಾಂ ಅವರ ಪುಸ್ತಕದಿಂದ. ವರದಿ – ಸಂಗ್ರಹಗಾರರು ನಾಗಲಿಂಗ ಮಳೆಕೊಪ್ಪ, ಕೊಪ್ಪಳ.
ವರದಿ – ಸಂಪಾದಕೀಯ