ಹಣದ ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್, ಡ್ರೈವರ್.. ಎರಡು ಲಕ್ಷ ರೂ. ವಾಪಸ್!
ಗಂಗಾವತಿಯಲ್ಲಿ ಹಣ ತುಂಬಿದ ಬ್ಯಾಗ್ ಬಿಟ್ಟು ಬಸ್ನಿಂದ ಇಳಿದಿದ್ದ ಪ್ರಯಾಣಿಕನಿಗೆ ಬ್ಯಾಗ್ ಹಿಂದಿರುಗಿಸುವ ಮೂಲಕ ಬಸ್ ಚಾಲಕ ಮತ್ತು ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ. ಗಂಗಾವತಿ: ಪ್ರಯಾಣಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಹಣ ತುಂಬಿದ್ದ ಬ್ಯಾಗ್ ಬಿಟ್ಟು ಇಳಿದಿದ್ದ ಪ್ರಯಾಣಿಕನಿಗೆ ಮರೆತುಹೋಗಿದ್ದ ಬ್ಯಾಗ್ಅನ್ನು ತಲುಪಿಸುವ ಮೂಲಕ ಬಸ್ ಚಾಲಕ ಮತ್ತು ನಿರ್ವಾಹಕ ಪ್ರಾಮಾಣಿಕತೆ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಸಾರಿಗೆ ಘಟಕದ ಚಾಲಕ ಹನುಮಸಾಗರದ ಮಡಿವಾಳ ಯಮನೂರ ಹಾಗೂ ನಿರ್ವಾಹಕ ರುದ್ರಪ್ಪ ಎಂಬುವರು ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮಾನವೀಯತೆ ಮೆರೆದ ಸಿಬ್ಬಂದಿಯಾಗಿದ್ದಾರೆ. ರಾಯಚೂರಿನಿಂದ ಗಂಗಾವತಿಗೆ ಬರುತ್ತಿದ್ದ ಬಸ್ನಲ್ಲಿ ಸಂಚರಿಸುತ್ತಿದ್ದ ಗಾವುಲ ನರಸಿಂಹ ಎಂಬ ಪ್ರಯಾಣಿಕರೋರ್ವರು ಮಾರ್ಗ ಮಧ್ಯೆ ಸಿಂಧನೂರಿನಲ್ಲಿ ಹಣದ ಬ್ಯಾಗ್ನ್ನು ಬಸ್ನಲ್ಲಿ ಬಿಟ್ಟು ಇಳಿದುಕೊಂಡಿದ್ದರು. ಬಳಿಕ ಬ್ಯಾಗ್ ಬಿಟ್ಟು ಬಂದಿರುವುದಾಗಿ ತಿಳಿದ ಪ್ರಯಾಣಿಕ ಪುನಃ ಬೇರೊಂದು ಬಸ್ ಹತ್ತಿ ಗಂಗಾವತಿಗೆ ತೆರಳಿದ್ದರು. ಈ ವೇಳೆ ಬಸ್ ಚಾಲಕ ಮತ್ತು ನಿರ್ವಾಹಕ ಡಿಪೋ ಮ್ಯಾನೇಜರ್ ಮೂಲಕ ಹಣದ ಬ್ಯಾಗ್ ಅನ್ನು ಪ್ರಯಾಣಿಕ ನರಸಿಂಹ ಅವರಿಗೆ ತಲುಪಿಸಿದ್ದಾರೆ. ಈ ಇವರಿಬ್ಬರು ಸಾರಿಗೆ ಇಲಾಖೆ ಸಿಬ್ಬಂದಿಗೆ ಮಾದರಿಯಾಗಿದ್ದಾರೆ. ಇವರ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. .
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ