ತಾವರಗೇರಾ ನ್ಯೂಸ್ ಪತ್ರಿಕೆ ಹಾಗೂ ವೆಬ್ ಬಳಗದವತಿಯಿಂದ ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ……
ಎದೆ ಬಗೆದರೂ ಇರಲಿ ಕನ್ನಡ, ಹೃದಯ ಬಡೆದರು ಬರಲಿ ಕನ್ನಡ, ಗರ್ವದಿಂದ ಹೇಳು ನನ್ನ ಭಾಷೆ ಕನ್ನಡ, ಹೇಮ್ಮೆಯಿಂದ ಹೇಳು ನಾನು ಕನ್ನಡಿಗ ಎಂಬ ವಾಣಿಯಂತೆ ಕನ್ನಡವನ್ನು ಗೌರವಿಸುವ ನನ್ನ ಎಲ್ಲ ಕನ್ನಡಾಭಿಮಾನಿಗಳಿಗೆ ೬೬ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು… ಇಂದು ಕರುನಾಡು ಕನ್ನಡಿಗರ ಹೆಮ್ಮೆಯ ದಿನ, ಹಲವಾರು ಮಹನೀಯರ ಹೋರಾಟ, ತ್ಯಾಗ, ಬಲಿದಾನದಿಂದ ನಮ್ಮ ಚೆಲುವ ಕನ್ನಡ ನಾಡು ಉದಯವಾದ, ಕನ್ನಡ ನಾಡು, ಕರ್ನಾಟಕ ಏಕೀಕರಣಕ್ಕಾಗಿ ನಡೆದ ಚಳುವಳಿಯ ಕಾವು ಹೆಚ್ಚಾದಾಗ ೧೯೫೬ರ ನವೆಂಬರ್ ೧ ರಂದು ಮದ್ರಾಸ್, ಮುಂಬಯಿ, ಹೈದ್ರಾಬಾದ್ ಪ್ರಾಂತ್ಯದಲ್ಲಿರುವ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸಿ, ಅಖಂಡ ಮೈಸೂರು ರಾಜ್ಯ ಉದಯವಾಯಿತು. ಉತ್ತರ ಕರ್ನಾಟಕ ಭಾಗದ ಜನತೆಯ ಮಾನ್ಯತೆಗಾಗಿ ರಾಜ್ಯದ ಹೆಸರನ್ನು ಮೈಸೂರು ಬದಲಾಗಿ, “ಕರ್ನಾಟಕ” ಎಂದು ಮರುನಾಮಕರಣ ಮಾಡಬೇಕು ಎಂದು ೧೯೭೨ರ ಜುಲೈನಲ್ಲಿ ಚಳುವಳಿ ನಡೆದು ಈ ದೀರ್ಘಾವಧಿಯ ಕಾಲದ ಚರ್ಚೆಗಳ ನಂತರ ೧೯೭೩ರ ನವೆಂಬರ್ ೧ ರಂದು ರಾಜ್ಯ ವಿಧಾನಸಭೆಯಲ್ಲಿ ಇದಕ್ಕೆ ಸರ್ವಾನುಮತ ದಿಂದ ಅನುಮತಿ ಪಡೆದು, ಮೈಸೂರು ರಾಜ್ಯವನ್ನು “ಕರ್ನಾಟಕ” ರಾಜ್ಯವೆಂದು ಮರುನಾಮಕರಣ ಮಾಡಲಾಯಿತು. ಪವಿತ್ರವಾದ ನಾಡ ಹಬ್ಬದ ಆಚರಣೆಯ ಈ ಶುಭ ಸಂದರ್ಭದಲ್ಲಿ ತಾಯಿ ಭುವನೇಶ್ವರಿ ಎಲ್ಲರನ್ನೂ ಕಾಪಾಡಲಿ ಎಂದು ಪ್ರಾರ್ಥಿಸುತ್ತಾ ಮತ್ತೊಮ್ಮೆ ನಾಡಿನ ಜನತೆಗೆ, ಕನ್ನಡ ರಾಜ್ಯೋತ್ಸವದ ನಾಡಹಬ್ಬದ ಈ ಶುಭ ದಿನದಂದು ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇವೆ #ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ವೆಬ್ ಬಳಗದವತಿಯಿಂದ#
ವರದಿ – ಸಂಪಾದಕೀಯ