ತಾವರಗೇರಾ ಪಟ್ಟಣದಲ್ಲಿಂದು ಕ.ನ.ಸೇ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಸರಳವಾಗಿ ಆಚರಿಸಲಾಯಿತು……
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿಂದು ಕರ್ನಾಟಕ ನವ ನಿರ್ಮಾಣವತಿಯಿಂದ ಇಂದು ತಾವರಗೇರಾ ಪಟ್ಟಣದ ಕ.ನ.ಸೇ ಕಾರ್ಯಲಯದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವದ ಉತ್ಸವವನ್ನು ಸರ್ಕಾರದ ನಿಯಮಗಳಿಗೆ ಬದ್ದತ್ತೆಯಿಂದ ಭಾರತಾಂಬೆಗೆ ದೀಪ ಬೆಳಗುವುದರ ಮೂಲಕ ಸರಳವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು, ಈ ಸಂದರ್ಭದಲ್ಲಿ ಶಂಬುಗೌಡ ಪೋಲಿಸ್ ಪಾಟೀಲ್ ರವರು ಭಾರತಾಂಬೆಯ ಭಾವಚಿತ್ರಕ್ಕೆ ದೀಪ ಬೆಳಗುವುದರ ಮೂಲಕ ಕನ್ನಡದ ನಾಡು,ನುಡಿಗಾಗಿ, ನೇಲ,ಜಲಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಶ್ರಮಿಸುತ್ತ ಅವರ ಹಾಧಿಯಲ್ಲಿ ಯುವಕರ ಸಾಗಬೇಕು, ಎಂದರು. ಎದೆ ಬಗೆದರೂ ಇರಲಿ ಕನ್ನಡ, ಹೃದಯ ಬಡೆದರು ಬರಲಿ ಕನ್ನಡ, ಗರ್ವದಿಂದ ಹೇಳು ನನ್ನ ಭಾಷೆ ಕನ್ನಡ, ಹೇಮ್ಮೆಯಿಂದ ಹೇಳು ನಾನು ಕನ್ನಡಿಗ, ಕನ್ನಡವನ್ನು ಗೌರವಿಸುವ ನನ್ನ ಎಲ್ಲ ಕನ್ನಡಾಭಿಮಾನಿಗಳಿಗೆ ೬೬ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ತಿಳಿಸುತ್ತ,
ಕರುನಾಡು ಕನ್ನಡಿಗರ ಹೆಮ್ಮೆಯ ದಿನ, ಹಲವಾರು ಮಹನೀಯರ ಹೋರಾಟ, ತ್ಯಾಗ, ಬಲಿದಾನದಿಂದ ನಮ್ಮ ಚೆಲುವ ಕನ್ನಡ ನಾಡು ಉದಯವಾಯಿತು. ಪವಿತ್ರವಾದ ನಾಡ ಹಬ್ಬದ ಆಚರಣೆಯ ಈ ಶುಭ ಸಂದರ್ಭದಲ್ಲಿ ತಾಯಿ ಭುವನೇಶ್ವರಿ ಎಲ್ಲರನ್ನೂ ಕಾಪಾಡಲಿ ಎಂದು ಪ್ರಾರ್ಥಿಸುತ್ತಾ ಮತ್ತೊಮ್ಮೆ ನಾಡಿನ ಜನತೆಗೆ, ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು.. ಈ ಸಂದರ್ಭದಲ್ಲಿ ಕರ್ನಾಟಕ ನವನಿರ್ಮಾಣ ಸೇನೆಯ ಹೋಬಳಿ ಘಟಕದ ಅಧ್ಯಕ್ಷರಾದ ಸಿದ್ಧನಗೌಡ ಪುಂಡ ಗೌಡ್ರು. ನಗರ ಘಟಕದ ಅಧ್ಯಕ್ಷರಾದ ನಬೀಸಾಬ್ ಎಲಿಗಾರ್. ರಾಜಾ ನಾಯಕ್ ವೆಲ್ಫೇರ್ ಪಾರ್ಟಿ. ಮುಜಾಫರ್ ನಾಯಕ್ ಸಲೀಂ ನಾಯಕ್. ಜಗ್ಗು ಬಿಳೆಗುಡ್ಡ .ಶಾಮೂರ್ತಿ ಅಂಚಿ, ಕುಮಾರ. ಪರಶುರಾಮ್. ನಾಗರಾಜ್ ಹನುಮೇಶ. ಶರಣು ಸಂತೋಷ ಹಾಗೂ ಸರ್ವ ಸದ್ಯಸರು. ಜೊತೆಗೆ ಕನ್ನಡದ ಕಲಾಭಿಮಾನಿಗಳು ಪಾಲುಗೊಂಡಿದ್ದರು.
ವರದಿ – ಉಪ-ಸಂಪಾದಕೀಯ