ಸಂಕನೂರ್ ಹಳ್ಳದಲ್ಲಿ ನಾಲ್ವರು ನೀರು ಪಾಲು ಸೇತುವೆ ಇದ್ದಿದ್ದರೆ ನಾಲ್ವರೂ ಜೀವ ಕಳೆದುಕೊಳ್ಳುತ್ತಿರಲಿಲ್ಲ.
ಕೊಪ್ಪಳ: ಅವರು ಸ್ವಲ್ಪ ಸಮಯದಲ್ಲಿಯೇ ಮನೆ ಸೇರುವವರಿದ್ದರು. ಆದರೆ ವಿಧಿ ಅವರನ್ನು ಕರೆದುಕೊಂಡು ಹೋಗಿದೆ. ಯಲಬುರ್ಗಾ ತಾಲೂಕಿನ ಸಂಕನೂರಿನಲ್ಲಿ ಶನಿವಾರ ರಾತ್ರಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಒಂದೇ ಊರಲ್ಲಿ ನಾಲ್ಕು ಮನೆಗಳ ಹೆಣ್ಣುಮಕ್ಕಳು ಜೀವ ಕಳೆದುಕೊಂಡಿದ್ದಾರೆ. ಇಡೀ ಗ್ರಾಮ ದುಃಖದಲ್ಲಿ ಮುಳುಗಿದೆ. ಯಾರನ್ನು ಯಾರು ಸಂತೈಸುವುದು ? ಶನಿವಾರ ಸಂಜೆ ಯಲಬುರ್ಗಾ ತಾಲೂಕಿನ ಸಂಕನೂರಿನಿಂದ ಸುಮಾರು 20 ಜನ ಸಂಕನೂರು ಕ್ರಾಸ್ ಹತ್ತಿರದ ಹತ್ತಿ ಬೀಜ ಸಂಸ್ಕರಣೆ ಕೆಲಸಕ್ಕೆ ಹೋಗಿದ್ದರು. ಸಂಜೆ ವಾಪಸ್ ಮನೆಗೆ ಬರುವಾಗ ಸಂಕನೂರು ಹಳ್ಳ ರಭಸವಾಗಿ ಹರಿಯುತ್ತಿತ್ತು. ಅದಕ್ಕೆ ಕೂಲಿಕಾರರನ್ನು ಕರೆದುಕೊಂಡು ಹೋಗಿದ್ದ ವಾಹನ ಚಾಲಕ ರಸ್ತೆ ದಾಟಲು ಅಸಾಧ್ಯ ಅಂತ ಅಲ್ಲಿಯೇ ಇಳಿಸಿದ ಕೆಲ ಕೂಲಿಕಾರರು ಹೇಗೊ ಹಳ್ಳ ದಾಟಿದರು. ಆದರೆ ಭುವನೇಶರಿ ಪಾಟೀಲ (42) 6ರಿಜಾ ಮಾಲಿ ಪಾಟೀಲ ಕೆಲ ಕೂಲಿಕಾರರು ಹೇಗೊ ಹಳ್ಳ ದಾಟಿದರು. ಆದರೆ ಭುವನೇಶ್ವರಿ ಪಾಟೀಲ (42), ಗಿರಿಜಾ ಮಾಲಿಪಾಟೀಲ ( 32), ಪವಿತ್ರಾ ಪೊಲೀಸ್ ಪಾಟೀಲ (45) ಹಾಗು ವೀಣಾ ಪಾಟೀಲರು ಹಳ್ಳ ದಾಟಲು ಆಗದೆ ನೀರಿನಲ್ಲಿ ಕೊಚ್ಚಿಕೊಂಡು ಹೋದರು. ಈ ಸಂದರ್ಭದಲ್ಲಿ ಭುವನೇಶ್ವರಿ ಹಾಗು ಗಿರಿಜಾ ಹಳ್ಳದಲ್ಲಿ ಬೇಲಿಯಲ್ಲಿ ಸುಮಾರು 2 ಗಂಟೆ ನಿಂತುಕೊಂಡಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಅವರನ್ನು ರಕ್ಷಣೆ ಮಾಡಲು ಯತ್ನಿಸಿದರೂ ಸಫಲವಾಗಲಿಲ್ಲ. ಯಲಬುರ್ಗಾ ತಾಲೂಕಿನಲ್ಲಿ ಒಂದೇ ತಿಂಗಳಲ್ಲಿ ಎರಡು ಘಟನೆಯಲ್ಲಿ ಆರು ಜನ ಹಳ್ಳದಲ್ಲಿ ತೇಲಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ. ಹಳ್ಳಗಳು ನೆಲ ಮಟ್ಟಕ್ಕಿಂತ ಕೆಳಹಂತದಲ್ಲಿರುತ್ತವೆ. ಹಳ್ಳದಲ್ಲಿ ಅದೇ ಮಟ್ಟದಲ್ಲಿ ರಸ್ತೆಗಳು ಇರುವುದರಿಂದ ಮಳೆಗಾಲದಲ್ಲಿ ದುರಂತ ಸಂಭವಿಸುತ್ತಿವೆ. ನೆಲಮಟ್ಟದ ಹಳ್ಳಗಳಿಗೆ ಸೇತುವೆ ನಿರ್ಮಿಸಿಲ್ಲ. ಹೀಗಾಗಿ ಹಳ್ಳದಲ್ಲಿ ಜನ ತೇಲಿ ಹೋಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ನಾಲ್ವರು ಜೀವ ಕಳೆದುಕೊಂಡ ಸ್ಥಳಕ್ಕೆ ಆಗಮಿಸಿದ ಸಚಿವ ಹಾಲಪ್ಪ ಆಚಾರರನ್ನು ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಹಿಂದೆ ಬಸವರಾಜ ರಾಯರಡ್ಡಿ ಸಚಿವರಿದ್ದಾಗ ಮತ್ತು ಈಗ ಹಾಲಪ್ಪ ಆಚಾರ್ ಸಚಿವರಾದ ಮೇಲೆ ಸಂಕನೂರ ಹಳ್ಳಕ್ಕೆ ಸೇತುವೆ ನಿರ್ಮಿಸುತ್ತವಂತೆ ಮನವಿ ಮಾಡಿದರೂ ಸೇತುವೆ ಕಟ್ಟಲಿಲ್ಲ. ಸೇತುವೆ ಇದ್ದಿದ್ದರೆ ಈ ನಾಲ್ವರೂ ಜೀವ ಕಳೆದುಕೊಳ್ಳುತ್ತಿರಲಿಲ್ಲ. ದೊಡ್ಡ ಕಟ್ಟಡಗಳನ್ನು ಕಟ್ಟಿದ್ದು ಮಾತ್ರ ಅಭಿವೃದ್ಧಿ ಅಲ್ಲ ಬಡವರಿಗೆ, ಹಳ್ಳಿ ಜನರಿಗೆ ಉಪಯೋಗವಿಲ್ಲದ ಅಭಿವೃದ್ಧಿ ಬೇಕಾ ? ಎಂಬ ಪ್ರಶ್ನೆ ಈಗ ಮತ್ತೇ ಚರ್ಚೆಯಲ್ಲಿದೆ. ಗ್ರಾಮಕ್ಕೆ ಸರ್ವ ಋತು ಸಂಪರ್ಕ ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಇದರಿಂದ ಗ್ರಾಮಸ್ಥರಲ್ಲಿ ಆಕ್ರೋಶ ಭುಗಿಲೆದ್ದಿದೆ. ಸರಕಾರದಿಂದ ಎನ್ ಡಿಆರ್ ಎಫ್ ನಿಯಮಾವಳಿ ಪ್ರಕಾರ ತಲಾ 5 ಲಕ್ಷ ರೂಪಾಯಿ ನೀಡಲಾಗುವುದು. ಗ್ರಾಮಕ್ಕೆ ಸೇತುವೆ ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸೇತುವೆ ನಿರ್ಮಿಸಲಾಗುವುದು ಎಂದು ಹಾಲಪ್ಪ ಆಚಾರ ಭರವಸೆ ನೀಡಿದರು.
ವರದಿ – ಹುಸೇನಬಾಷ ಮೋತೆಖಾನ್