ಕರೋನ ರೋಗದ ವಿರುದ್ಧ ಶ್ರಮಿಸುತ್ತಿರುವ ಕಿಲಾರಹಟ್ಟಿ ಗ್ರಾಮ ಪಂಚಾಯಿತಿ ಇಲಾಖೆ
ಕರ್ನಾಟಕ ರಾಜ್ಯಾದಂತ ಈಗಾಗಲೇ ಮನೆ ಮಾಡಿಕೊಂಡಿರುವ ಕರೋನ ರೋಗದ ವಿರುದ್ಧ ಸರ್ಕಾರ ಮುಂಜಾಗ್ರತೆ ನಿಯಮದಂತೆ ಕುಷ್ಟಗಿ ತಾಲ್ಲೂಕಿನ ಕಿಲಾರಹಟ್ಟಿ ದ ಗ್ರಾಮ ಪಂಚಾಯಿತಿ ಪ್ರತಿ ಹಳ್ಳಿಗಳ ಸಾರ್ವಜನಿಕ ಸಂಪರ್ಕ ಇರುವ ಜಾಗದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶ್ರೀ ಮಾನ್ಯ ಚಂದ್ರಶೇಖರ್ ಬಿ ಕಂದಕೂರ ಪಂಚಾಯಿತಿ ಕಾರ್ಯದರ್ಶಿಗಳಾದ ಶ್ರೀ ಗುರಪ್ಪ ನಾಯಕ ಹಾಗೂ ಚುನಾಯಿತ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಗಳ ಜತೆಗೂಡಿ ಸಾನಿಟೈಜರ್ ಸಿಂಪರಣೆ ಮಾಡಿದರು. ತದನಂತರದಲ್ಲಿ ಅಭಿವೃದ್ಧಿ ಅಧಿಕಾರಿಗಳು ಕರೋನ ಮುಂಜಾಗ್ರತೆ ಗಾಗಿ ಪ್ರತಿ ಹಳ್ಳಿಗಳ ಸಾರ್ವಜನಿಕರಿಗೆ ಪ್ರತಿ ಒಬ್ಬರು ಮಾಸ್ಕ ಧರಿಸಿ ನಿಮ್ಮ ಸುತ್ತ ಮುತ್ತಲಿನ ಜಾಗವನ್ನು ಸ್ವಚ್ಛತೆ ಯಿಂದ ಇಡಿ ಬಿಸಿ ನೀರು ಸೇವಿಸಬೇಕು ಏನಾದರೂ ಜ್ವರ ಕಾಣಿಸಿಕೊಂಡರೆ ಸರ್ಕಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಕ್ಷಿಸಿ ಕೊಳ್ಳಿ ಎಂದರು.
ತದನಂತರದಲ್ಲಿ ಕೊರೋನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಾನುಸಾರ ಮಾಡುವ ಮದುವೆ ಕಾರ್ಯಕ್ರಮಕ್ಕೆ ಬೇಟಿ ಕೊಟ್ಟು ವಧು ವರರಿಗೆ ಆಶಿರ್ವದಿಸಿ. ಹಾಗೆ ಸರ್ಕಾರ ನಿಯಮದಂತೆ ಮದುವೆ ಮನೆಯಲ್ಲಿ 40 ಕ್ಕಿಂತ ಹೆಚ್ಚು ಜನ ಸೇರಲೆಬಾರದು ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡಿ ನಿಮ್ಮ ಜೀವ ಉಳಿಸಿಕೊಳ್ಳಿ ಜೀವನ ಕ್ಕಿಂತ ಜೀವ ಮುಖ್ಯ ಎಂದು ಮದುವೆ ಮನೆಯವರಿಗೆ ಮನವಿ ಮಾಡಿದರು.
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ್