ಸ್ವಚ್ಚತೆ ಸಾರ್ವಜನಿಕರ ಜೀವನ ಶೈಲಿ ಆಗಬೇಕು:ಇಒ ಚಂದ್ರಶೇಖರ.

Spread the love

ಸ್ವಚ್ಚತೆ ಸಾರ್ವಜನಿಕರ ಜೀವನ ಶೈಲಿ ಆಗಬೇಕು:ಇಒ ಚಂದ್ರಶೇಖರ.

ಕನಕಗಿರಿ: ಪ್ರತಿ ವ್ಯಕ್ತಿ ಮತ್ತು ಕುಟುಂಬ ತಮ್ಮ ಮನೆ ಸುತ್ತ ಮುತ್ತ ಅಲ್ಲದೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂಬ ಸಂಕಲ್ಪದೊಂದಿಗೆ ಸಾರ್ವಜನಿಕರು ಸ್ವಚ್ಚತೆಯನ್ನು ತಮ್ಮ ಜೀವನ ಶೈಲಿಯಾಗಿ ಅಳವಡಿಸಿಕೊಂಡಾಗ ಮಾತ್ರ ದೇಶವನ್ನು ನೈರ್ಮಲ್ಯ ಮುಕ್ತ ಗೊಳಿಸಬಹುದು ಎಂದು ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರು ಹೇಳಿದರು. ಅವರು ತಾಲೂಕಿನ ಗೌರಿಪುರ ಸರಕಾರಿ ಪ್ರಾಥಮಿಕ ಶಾಲೆ ಆವರಣ ಮತ್ತು  ಗ್ರಾಮದ ದ್ಯಾಮಮ್ಮ  ದೇವಾಲಯ ಆವರಣದಲ್ಲಿ ಸ್ವಚ್ಛ ಶುಕ್ರವಾರ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮ ಉದ್ದೇಶಿಸಿ  ಮಾತನಾಡಿ ಪ್ರತಿಯೊಬ್ಬರು ತಮ್ಮ ಮನೆ ಸ್ವಚ್ಛವಾಗಿಟ್ಟುಕೊಳ್ಳುವ ಜತೆಗೆ ಅಂಗಳ, ಮನೆಯ ಹಿತ್ತಲ, ಓಣಿ  ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಾಗೇ ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಮಾಡಬೇಕು ಆಗ ಮಾತ್ರ ಗ್ರಾಮ ನೈರ್ಮಲ್ಯದಿಂದಿರಲು ಹಾಗೂ ಗ್ರಾಮಸ್ಥರು ಆರೋಗ್ಯದಿಂದ ಇರಲು ಸಾಧ್ಯ ಎಂದರು. ಪ್ರಾಥಮಿಕ ಶಾಲಾ ತಡೆಗೋಡೆ ಗೆ ಬಣ್ಣ ಹಚ್ಚುವ ಮೂಲಕ ತಡೆಗೋಡೆ ಸುಂದರ ಕಾಣುವಂತೆ ಮಾಡಲಾಯಿತು. ನಂತರ  ದ್ಯಾಮಮ್ಮ ದೇವಾಲಯ ಆವರಣದಲ್ಲಿ  ಸ್ವಚ್ಛತಾ ಶ್ರಮದಾನ ಮಾಡ  ಆವರಣವನ್ನು ಸ್ವಚ್ಛಗೊಳಿಸಲಾಯಿತು. ಹಾಗೂ ಶಾಲಾ ಆವರಣದಲ್ಲಿ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮಾಡಲಾಯಿತು. ಈ ವೇಳೆ ಪಿಡಿಓ ನಾಗಲಿಂಗಪ್ಪ ,ಗ್ರಾಮ ಪಂಚಾಯತಿ ಅಧ್ಯಕ್ಷೆ ಸರಸ್ವತಿ  ಹನುಮಂತಪ್ಪ ಚವಾಣ್ , ಉಪಾಧ್ಯಕ್ಷೆ ಬಾಲವ್ವ  ತೊಂಡೆಪ್ಪ ,  ಸದಸ್ಯರಾದ, ಕೃಷ್ಣ , ವೆಂಕಟೇಶ್ , ಅಮರಮ್ಮ  ಮರುತೇಶ , ಲಕ್ಷ್ಮಿಬಾಯಿ  ಚಂದ್ರಪ್ಪ , ಬಾಲಮ್ಮಾ ,ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಶಿವಪ್ಪ ಚವಾಣ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಾದ ಕಸ್ತುರೆಮ್ಮ,ಲಕ್ಷ್ಮಿ ,ಹನುಮಮ್ಮ,ಕನ್ಯಾಕುಮಾರಿ,ಈರಮ್ಮ ಸ್ವಸಹಾಯ ಸಂಘದ ಸದಸ್ಯರಾದ ಗಿರಿಯಮ್ಮ,ಹುಲಿಗೆಮ್ಮ,ಶರಣಮ್ಮ, ಐ ಇ ಸಿ ಸಂಯೋಜಕ ಚಂದ್ರಶೇಖರ್, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಮೋಹನ್ , ವಿಜಯ್ , ದ್ಯಾಮಣ್ಣ ಇತರರು ಇದ್ದರು. ಕನಕಗಿರಿ: ತಾಲೂಕಿನ ಗೌರಿಪುರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಸ್ವಚ್ಚತಾ ಅಭಿಯಾನ ಉದ್ದೇಶಿಸಿ ತಾ.ಪಂ.ಇಒ . ಚಂದ್ರಶೇಖರ ಬಿ ಕಂದಕೂರು ಮಾತನಾಡಿದರು. ವರದಿ – ಆದಪ್ಪ ಮಾಲಿ ಪಾಟೀಲ್.

Leave a Reply

Your email address will not be published. Required fields are marked *