ನಾಡಿನ ಸಮಸ್ತ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಈದ್ ಮೀಲಾದ್ ಹಬ್ಬದ ಶುಭಾಶಯಗಳು.

Spread the love

ನಾಡಿನ ಸಮಸ್ತ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಈದ್ ಮೀಲಾದ್ ಹಬ್ಬದ ಶುಭಾಶಯಗಳು.

ಶ್ರೀ ಮಹರ್ಷಿ ವಾಲ್ಮೀಕಿಯವರ ಕೀರು ಪರಿಚೆಯ :- ಭಾರತ ದೇಶ ಹಲವು ಕಾರಣಗಳಿಂದ ವಿಶ್ವದಲ್ಲಿಯೇ ಅತ್ಯಂತ ಪ್ರಸಿದ್ಥವಾದದ್ದು. ಇಂತಹ ಪ್ರಸಿದ್ಥ ಭೂಮಿಯಲ್ಲಿ ಅನೇಕ ಋಷಿ ಮುನಿಗಳು, ಶರಣರು, ದಾರ್ಶನಿಕರು, ದಾಸಶ್ರೇಷ್ಠರು ಸಮಾಜ ಸುಧಾರಕರು ಮತ್ತು ಮಹಾನ್ ಸಾಧಕರು ಜನ್ಮ ತಾಳಿದ್ದಾರೆ. ಇಂತಹ ಪುಣ್ಯ ಭೂಮಿ ಈ ನಮ್ಮ ಭಾರತ.ಮಹಾಕಾವ್ಯ ರಾಮಾಯಣದ ಸಂಯೋಜಕರಾದ ಮಹರ್ಷಿ ವಾಲ್ಮೀಕಿಯನ್ನು ಈ ದಿನ ನೆನೆಯಲಾಗುತ್ತದೆ. ಆ ಹಿನ್ನಲೆಯಲ್ಲಿ ತೇತ್ರಾಯುಗದ ಆದಿಯಲ್ಲಿ ಮೂಲತಃ ಬೇಟೆಗಾರನಾದ ರತ್ನಾಕರ (ಮಹರ್ಷಿ ವಾಲ್ಮೀಕಿಯವರ ಪುರ್ವಾಶ್ರಮದ ಹೆಸರು) ತನ್ನ ಬದುಕಿನಲ್ಲಿ ಬದಲಾವಣೆಯಾಗಿ ಪ್ರತಿನಿತ್ಯ “ರಾಮತಾರಕ” ಮಂತ್ರವನ್ನು ಸ್ಮರಿಸುತ್ತಾ ಸಿದ್ದಿಪುರುಷರಾದರು. ನಂತರದ ದಿನಗಳಲ್ಲಿ ಲೋಕಲ್ಯಾಣಾರ್ಥವಾಗಿ ಒಂದು ಭಾರತೀಯ ಸಮಾಜದ ಸಾಮಾಜಿಕ ವ್ಯವಸ್ಥೆ ಕುಟುಂಬದ ಸಂಬಂಧಗಳು ಸಕಲ ಪ್ರಾಣಿ-ಪಕ್ಷಿಗಳ ಬಗ್ಗೆ ದಯೆ ಬೌಗೋಳಿಕವಾಗಿ ಭಾರತದ ಗಡಿಭಾಗಗಳು ಪುಣ್ಯಕ್ಷೇತ್ರಗಳ ಕುರುಹುಗಳು ಹೀಗೆ ಭಾರತದ ಹಿರಿಮೆ-ಗರಿಮೆಗಳನ್ನು ತಮ್ಮ “ರಾಮಾಯಣ ಮಹಾಕಾವ್ಯ”ದಲ್ಲಿ ಮಾರ್ಗದರ್ಶನ ನೀಡಿದ್ದಾರೆ. ಆದ್ದರಿಂದ ನಮ್ಮ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮ ಮದ್ಯೆ ಅನೇಕ ಸಮುದಾಯಗಳು ಇದ್ದಾವೆ. ಹಾಗಾಗಿ ಪ್ರತಿಯೊಂದು ಸಮುದಾಯದವರು ತಮ್ಮ ತಮ್ಮ ಸಮುದಾಯದ “ಸಾಂಸೃತಿಕ ನಾಯಕರ” ಹೆಸರಿನಲ್ಲಿ ಮಠ-ಮಾನ್ಯಗಳನ್ನು ಗರು-ಪೀಠಗಳನ್ನು ಸ್ಥಾಪಿಸಿಕೊಂಡು ತಮ್ಮ ಸಮುದಾಯದ ಎಲ್ಲಾ ರಂಗಗಳಲ್ಲಿ ಬೆಳಸಿಕೊಳ್ಳುವಂತಹ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಈ ನಾಡಿನ ಬ್ರಾಹ್ಮಣ ಸಮುದಾಯದವರು ಆದಿ ಜಗದ್ಗುರು ಶಂಕರಾಚಾರ್ಯರು, ಮದ್ವಾಚಾರ್ಯರು, ರಾಮಾನುಜಾಚಾರ್ಯರ ಹೆಸರಿನಲ್ಲಿ ಲಿಂಗಾಯತರು ಬಸವಣ್ಣನವರ ಹೆಸರಿನಲ್ಲಿ ವಿರಕ್ತ-ಪೀಠಗಳನ್ನು ಮಾಡಿಕೊಂಡು ಅವರ ಸಮುದಾಯವನ್ನು ಬೆಳಸಿಕೊಳ್ಳುವಂತಹ ಪ್ರಯತ್ನ ಮಾಡುತ್ತಿದ್ದಾರ.  ಈ ಹಿನ್ನಲೆಯಲ್ಲಿ ನಮ್ಮ ಸಮುದಾಯದ ಅನೇಕ ಸಾಂಸೃತಿಕ ನಾಯಕರು ಆದಿಯಲ್ಲಿ ಮಹರ್ಷಿ ವಾಲ್ಮೀಕಿಯವರು, ಏಕಲವ್ಯ, ಬೇಡರ ಕಣ್ಣಪ್ಪ, ಶಬರಿ ಹಕ್ಕ-ಬುಕ್ಕರು, ಗಂಡುಗಲಿ ಕುಮಾರ ರಾಮ, ಚಿತ್ರದುರ್ಗವನ್ನೊಳಗೊಂಡಂತೆ 77 ಪಾಳೇಗಾರರು ಹಡಗಲಿ ಬೇಡರು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವರೆಲ್ಲರೂ ಈ ನಾಡು-ನುಡಿಗೆ ರಾಷ್ಟ್ರಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಹಾಗಾಗಿ ನಾವು ಸಹ ನಮ್ಮ ಸಾಂಸೃತಿಕ ನಾಯಕರ ಹೆಸರಿನಲ್ಲಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಆಧ್ಯಾತ್ಮಿಕವಾಗಿ ಸಾಂಸೃತಿಕವಾಗಿ ರಾಜಕೀಯವಾಗಿ ಸಮುದಾಯದ ಎಲ್ಲಾ ರಂಗಗಳಲ್ಲಿ ಬೆಳೆಯಬೇಕೆಂಬ ಸತ್-ಸಂಕಲ್ಪ ಮಾಡಿಕೊಂಡ ಅನೇಕ ಮಹನೀಯರು  ಇನ್ನೂ ಅನೇಕ ಅನೇಕ ಸಮಾಜದ, ರಾಜ್ಯಾದ, ಜಿಲ್ಲಾ, ತಾಲ್ಲೂಕು, ಮುಖಂಡರುಗಳು, ಹೋರಾಟಗಾರರು, ಸಾಹಿತಿಗಳು, ಬುದ್ದಿಜೀವಿಗಳು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಅಧಿಕಾರಿಗಳು, ನೌಕರರು ಹಾಗೂ ಸಮಾಜದ ಎಲ್ಲಾ ಬಂಧುಗಳು ಸತ್-ಸಂಕಲ್ಪ ದಿಂದಾಗಿ ಬೆಂಗಳೂರು ಕೈಲಾಸ ಶ್ರಮದ ಪುಜ್ಯರಾದ ಶ್ರೀ ಶ್ರೀ ಶ್ರೀ ತಿರುಚಿ ಮಹಾಸ್ವಾಮಿಯವರ ಆಶೀವಾದ ಹಾಗೂ ಮಾರ್ಗದರ   ಈ ಕಾರ್ಯಕ್ರಮದಲ್ಲಿ ನಮ್ಮ ಸಮುದಾಯದ ವಿವಿಧ ಬೇಡಿಕೆಗಳನ್ನು ಒತ್ತಾಯಿಸುವ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭ ಯಶಸ್ವಿಯಾಗಲು ನಾಡಿನ ಸªÀÄಸ್ತ ವಾಲ್ಮೀಕಿ-ನಾಯಕ ಬಂಧುಗಳು ಸಹಸ್ರ-ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ವಿನಂತಿ ಪುರ್ವಕವಾಗಿ ಕೋರಿ ಕೊಳ್ಳುತ್ತೇವೆ.್ಶನದಿಂದ ಈಗಿನ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ “ಸುಕ್ಷೇತ್ರ ರಾಜನಹಳ್ಳಿ” ಯಲ್ಲಿ “ಮಹರ್ಷಿ ವಾಲ್ಮೀಕಿ ಗುರುಪೀಠವನ್ನು ಪೆಬ್ರವರಿ 09-1998 ರಲ್ಲಿ ಸ್ಥಾಪಿಸಲಾಯಿತು.  ಶ್ರೀ ಮಠದ ಮೊದಲನೆಯ ಜಗದ್ಗುರು ಲಿಂಗೈಕ್ಯ ಶ್ರೀ ಶ್ರೀ ಶ್ರೀ ಪುಣ್ಯಾನಂದ ಶ್ರೀಗಳ ಒಂದು ಅಸಂಘಟಿತ ಸಮುದಾಯವಾದ ಈ ವಾಲ್ಮೀಕಿ, ಬೇಡ, ನಾಯಕ ಜನಾಂಗ ಪ್ರಾದೇಶಿಕವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಈ ಸಮುದಾಯವನ್ನು ಧಾರ್ಮಿಕ ತಳಹದಿಯ ಮೇಲೆ ಸಂಘಟಿಸಿದರು. ಹೀಗೆ ನಿರಂತರವಾಗಿ 9 ವರ್ಷಗಳ ಕಾಲ “ಹಳ್ಳಿಗೆ ಏಕ ರಾತ್ರಿ ಪಟ್ಟಣಕ್ಕೆ ಪಂಚರಾತ್ರಿ” ಎಂಬ ಗಾದೆಯಂತೆ ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಭಕ್ತಿ ಮನೋಲಾಷೆಗಳನ್ನು ನೆರವೇರಿಸುತ್ತಾ ಸಮಾಜದಲ್ಲಿರುವ ಮೌಡ್ಯತೆ, ಕಂದಾಚಾರ, ಮೂಢನಂಬಿಕೆಗಳನ್ನು ದೂರಮಾಡಿ ನಮ್ಮ ಸಮುದಾಯದ ಬಡಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಅವರ ಬಾಳಿಗೆ ಬೆಳಕಾಗಿದ್ದಾರೆ. ಹೀಗೆ ಸಂಚಾರದಲ್ಲಿರುವಾಗ ದಾವಣಗೆರೆ ಹತ್ತಿರ ಕರೂರು ರೈಲ್ವೆ ಗೇಟ್ ಬಳಿ ಏಪ್ರಿಲ್ 13 2007 ರಲ್ಲಿ ಲಿಂಗೈಕ್ಯರಾದರು. ತದನಂತರದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳೆ ನೇತೃತ್ವದಲ್ಲಿ ಶ್ರೀ ಮಠದ ಧರ್ಮದರ್ಶಿಗಳು ಹಾಗೂ ಸಮಾಜದ ಎಲ್ಲಾ ಮುಖಂಡರು 2007 ಸೆಪ್ಟೆಂಬರ್ 6 ರಂದು ಈಗಿನ ಜಗದ್ಗುರು ಪರಮ ಪುಜ್ಯ ಶ್ರೀ ಶ್ರೀ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳನ್ನು ಹಂಗಾಮಿ ಪೀಠಾದಿಪತಿಗಳನ್ನಾಗಿ ನೇಮಕ ಮಾಡಲಾಯಿತು. ನಂತರ 14-10-2008 ರಂದು ಪುಜ್ಯರಿಗೆ ನಾಡಿನ ಸಮಸ್ತ ಗೌರವಾನ್ವಿತ ಮಠಾದೀಶರು, ಜನಪ್ರತಿನಿಧಿಗಳು ಹಾಗೂ ಸಮಾಜದ ಎಲ್ಲಾ ಬಂಧುಗಳ ಸಮಕ್ಷಮದಲ್ಲಿ “ಪಟ್ಟಾಭಿಷೇಕ” ಮಾಡಲಾಯಿತು. ಇದು ಶ್ರೀ ವಾಲ್ಮೀಕಿ ಮಹರ್ಷಿಯವರ ಕೀರು ಪರಿಚೆಯ.

ಈದ್ ಮೀಲಾದ್ ಹಬ್ಬದ ಕುರಿತು ಕೀರು ಪರಿಚೆಯ :-

ಈದ್ ಮಿಲಾದ್… ಇಸ್ಲಾಂ ಧರ್ಮೀಯರ ಪಾಲಿಗೆ ಮಹತ್ವದ ದಿನ. ಪ್ರವಾದಿ ಮಹಮ್ಮದ್ ಅವರ ಜನ್ಮದಿನವನ್ನಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಹೀಗಾಗಿ, ಈದ್ ಮಿಲಾದ್ ಇಸ್ಲಾಂ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಇಸ್ಲಾಮಿಕ್ ಕ್ಯಾಲೆಂಡರಿನ ರಬೀ ವುಲ್ ಅವ್ವಲ್ ಎಂಬ ತಿಂಗಳಿನಲ್ಲಿ ಈದ್ ಮಿಲಾದ್ ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಮುಸ್ಲಿಂ ಧರ್ಮೀಯರು ಶ್ರದ್ಧಾಭಕ್ತಿಯಿಂದ ಈ ಪವಿತ್ರ ದಿನವನ್ನು ಆಚರಿಸುತ್ತಾರೆ.
ಈ ಪವಿತ್ರ ದಿನದಂದು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ. ಇಸ್ಲಾಂನ ಪವಿತ್ರ ಗ್ರಂಥ ಕುರಾನ್‌ನ ಪಠಣ, ಮೆರವಣಿಗೆ ನಡೆಯುತ್ತದೆ. ಧರ್ಮಗುರುಗಳು ಪ್ರವಾದಿ ಮಹಮ್ಮದ್ ಅವರ ಸಂದೇಶಗಳನ್ನು ತಿಳಿಸಿಕೊಡುತ್ತಾರೆ. ಇನ್ನು ಇಸ್ಲಾಂ ಧರ್ಮೀಯರು ಹೊಸಬಟ್ಟೆಯುಟ್ಟು ಪ್ರೀತಿಪಾತ್ರರೊಂದಿಗೆ ಉಡುಗೊರೆಗಳ ವಿನಿಮಯ ಮಾಡಿಕೊಳ್ಳುತ್ತಾರೆ. ಜೊತೆಗೆ ಮದ್ರಸಾ ವಿದ್ಯಾರ್ಥಿಗಳಿಗಾಗಿ ಹಾಡು, ಭಾಷಣ, ಸಮೂಹ ಹಾಡು ಹೀಗೆ ವಿವಿಧ ಸ್ಪರ್ಧೆಗಳನ್ನು ಕೂಡಾ ಆಯೋಜಿಸಲಾಗುತ್ತದೆ. ಹೀಗೆ ಎಲ್ಲರೂ ಈ ಪವಿತ್ರ ದಿನವನ್ನು ಶ್ರದ್ಧೆಯಿಂದ ಆಚರಿಸುತ್ತಾರೆ.
ಇಂತಹ ಶುಭ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರುವ ಕೆಲವು ಸಂದೇಶಗಳು ಇಲ್ಲಿವೆ.
ಈದ್ ಮಿಲಾದ್ ಶುಭಾಶಯಗಳು :
* ಈದ್ ಇ ಮಿಲಾದ್‌ನ ಈ ಶುಭ ಸಂದರ್ಭದಲ್ಲಿ ಅಲ್ಲಾಹ್ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ತನ್ನ ಆಶೀರ್ವಾದದ ಮಳೆ ಸುರಿಸಲಿ. ಶಾಶ್ವತ ಖುಷಿ, ನೆಮ್ಮದಿ ನಿಮ್ಮದಾಗಲಿ. ನಿಮಗೆ ಈದ್ ಮಿಲಾದ್ ಶುಭಾಶಯಗಳು
* ನಿಮಗೆ ಈದ್ ಮಿಲಾದ್ ಅನ್ ನಬಿಯ ಶುಭಾಶಯಗಳು. ಈ ಸುಂದರ ಸಮಯದಲ್ಲಿ ನಿಮ್ಮ ಬದುಕಿನ ಎಲ್ಲಾ ಕನಸುಗಳು ಶೀಘ್ರದಲ್ಲೇ ನನಸಾಗಲಿ, ನಿಮ್ಮ ಪ್ರಾಮಾಣಿಕ ಪ್ರಾರ್ಥನೆಯನ್ನು ಅಲ್ಲಾಹ್ ಆಲಿಸಲಿ ಎಂದು ನಾನು ಬಯಸುತ್ತೇನೆ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು
* ಕರುಣಾಳು ಅಲ್ಲಾಹ್ ನಿಮಗೆ ಉತ್ತಮ ಆರೋಗ್ಯ, ಸಂಪತ್ತು, ಸಮೃದ್ಧಿಯನ್ನು ನೀಡಲಿ. ನಿಮ್ಮ ಬದುಕು ಸದಾ ಖುಷಿಯಿಂದ ಕೂಡಿರಲಿ. ಈದ್ ಮುಬಾರಕ್
* ನಿಮ್ಮ ಜೀವನದ ಎಲ್ಲಾ ಕಷ್ಟಗಳು ದೂರವಾಗಿ, ನಿಮ್ಮ ಕನಸುಗಳನ್ನು ದೇವರು ಈಡೇರಿಸಲಿ ಎಂದು ಈದ್ ಇ ಮಿಲಾದ್ ಅನ್ ನಬಿಯ ಈ ಪವಿತ್ರ ಸಂದರ್ಭದಲ್ಲಿ ನಾನು ಪ್ರಾರ್ಥಿಸುತ್ತೇನೆ. ಈದ್ ಮಿಲಾದ್ ಹಬ್ಬದ ಶುಭಾಶಯಗಳು
* ನಮ್ಮ ಜೀವನದಲ್ಲಿ ಈ ಪವಿತ್ರ ದಿನವನ್ನು ಆಚರಿಸಲು ಮತ್ತೊಮ್ಮೆ ಅವಕಾಶ ನೀಡಿದ್ದಕ್ಕೆ ನಾನು ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಈದ್ ಮುಬಾರಕ್
* ಅಲ್ಲಾಹ್‌ನ ಆಶೀರ್ವಾದದ ಬೆಳಕಿನಲ್ಲಿ ನಿಮ್ಮ ಬದುಕು ಸದಾ ಖುಷಿಯಿಂದ ಹೊಳೆಯುತ್ತಿರಲಿ. ಸುಖ, ಶಾಂತಿ ನೆಮ್ಮದಿ ನಿಮ್ಮದಾಗಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು.
* ಅಲ್ಲಾಹ್ ನಿಮಗೆ ಯಶಸ್ಸು, ಸಮೃದ್ಧಿ, ಸಂತೋಷವನ್ನು ನೀಡಲಿ. ಆರೋಗ್ಯಕರ ಜೀವನವನ್ನು ದೇವರು ಕರುಣಿಸಲಿ. ನಾಡಿನ ಸಮಸ್ತ ಜನತೆಗೆ ತಾವರಗೇರಾ ನ್ಯೂಸ್ ಪತ್ರಿಕ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಹಾಗೂ ಈದ್ ಮಿಲಾದ್ ಹಬ್ಬದ ಶುಭಾಶಯಗಳು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *