ಪಟ್ಟಣ ಹಾಗೂ ವಿವಿದ ಗ್ರಾಮಗಳಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿ ಆಚರಣೆ…..
ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಇಂದು ವಾಲ್ಮೀಕಿ (ನಾಯಕ) ಸಮಾಜದ ಬಂದುಗಳು ಹಾಗೂ ಯುವ ಮಿತ್ರರು ಪಾಲುಗೊಂಡು. ಇಂದು ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದ ಶ್ರೀ ಮಹರ್ಷಿ ವಾಲ್ಮೀಕಿ ಭಾವ ಚಿತ್ರಕ್ಕೆ ಪುಸ್ಫರ್ಚಣೆ ಮಾಡಿ, ಬಂದು ಮಿತ್ರರ ನಡುವೆ ಭಕ್ತಿಯಿಂದ ಪೂಜಗೈದರು. ಸಂದರ್ಭದಲ್ಲಿ ಶ್ರಿಯುತ ಅಮಾರೇಗೌಡ ಎಲ್ ಬಯ್ಯಾಪುರ ಕುಷ್ಟಗಿ ಶಾಸಕರು. ಹಾಗೂ ಚಂದ್ರುಶೇಖರ ನಾಲತವಾಡ. ವಿರೇಶ ತಾಳಿಕೋಟಿ,ಅಮಾರೇಶ ಗಾಂಜಿ, ದುರಗೇಶ ನಾರಿನಾಳ, ಯಮನೂರಪ್ಪ ಬಿಳೆಗುಡ್ಡ ಹಾಗೂ ಹಿರಿಯಮುಖಂಡರು ಹಾಗೂ ಸಂಘ ಸಂಸ್ಥೆಯ ಮುಖ್ಯಸ್ಥರು, ಹಾಗೂ ಪಟ್ಟಣ ಪಂಚಾಯತಿಯ ಅಧಿಕಾರಿ ವರ್ಗ, ಸದಸ್ಯರ ವರ್ಗ, ಜೊತೆಗೆ ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಸಮಾಜದ ಹಿರಿಯ ಮುಖಂಡರು, ಮತ್ತು ಯುವ ಮಿತ್ರರು ಪಾಲುಗೊಂಡು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದರು.
ಇದೇ ರೀತಿ ತಾವರಗೇರಾ ಹೋಬಳಿಯ ವ್ಯಾಪ್ತಿಗೆ ಬರುವ ಸಂಗನಾಳ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಇಂದು ಶ್ರೀ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಪ್ರಥಮದಲ್ಲಿ ಗ್ರಾಮದ ಸಂಗನಬಸಯ್ಯ ಸ್ವಾಮಿಗಳಿಂದ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪಾರ್ಪಣೆ ಮಾಡುವ ಮುಖಾಂತರ ಭಕ್ತಿಯಿಂದ ಜಯಂತಿ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತ ಅಧ್ಯಕ್ಷರಾದ ಶ್ರೀ ಮತಿ ಯಮನಮ್ಮ. ಉಪಾಧ್ಯಕ್ಷರಾದ ಶ್ರೀ ಶರಣಪ್ಪ ಹಂಚಿನಾಳ. ಸದಸ್ಯರಾದ ಮಹೇಶ ಪಾಟೀಲ. ರಾಜಪ್ಪ ಗುಡುದೂರ. ಸಂಗಣ್ಣ ಹವಲ್ದಾರ. ನಾಗರಾಜ. ಹಾಗೂ ಗ್ರಾಮದ ಪ್ರಮುಖರಾದ ಮುದಕಪ್ಪ. ಚಿದಾನಂದಗೌಡ. ಬಸವನಗೌಡ. ಬಸವರಾಜ. ಬಾಳಪ್ಪ ಪೂಜಾರಿ. ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಗುರಪ್ಪ ನಾಯಕ. ಹಾಗೂ ಪಂಚಾಯತಿ ಸಿಬ್ಬಂದಿ ಮತ್ತು ಗ್ರಾಮದ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ವರದಿ – ಸಂಪಾದಕೀಯಾ