ಗಜೇಂದ್ರಗಡ ಆನೇಕಲ್ ದೊಡ್ಡಯ್ಯನವರ ನೇತೃದಲ್ಲಿ ಆಮ್ ಆದ್ಮಿ ಪಕ್ಷದ ಕಛೇರಿಯ ಉದ್ಘಾಟನೆ ಕಾರ್ಯಕ್ರಮ ರಾಜ್ಯಧ್ಯಕ್ಷರ ಹಸ್ತದಿಂದ ಜರುಗಿತು.
ಆಮ್ ಆದ್ಮಿ ಪಕ್ಷದ ರಾಜ್ಯ ಅಧ್ಯಕ್ಷರಾದ ಪೃಥ್ವಿ ರೆಡ್ಡಿಯವರು ಗಜೇಂದ್ರಗಡ ನಗರದಲ್ಲಿ ಅನೇಕಲ್ ದೊಡ್ಡಯ್ಯರವರ ಎಎಪಿ ಕಛೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ, ಕುಷ್ಟಗಿ ನಗರದ ಮುಖಾಂತರ ತೆರಳುವ ಸಂದರ್ಭದಲ್ಲಿ ಅವರನ್ನ ಬೇಟಿಯಾಗಿ ಅತಿಥಿ ಸತ್ಕಾರ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸ್ವಯಂ ಪ್ರೇರಿತವಾಗಿ ಕುಷ್ಟಗಿ ನಗರದ ಯುವ ಸಾಮಾಜಿಕ ಚಿಂತಕರಾದ ಸುಭಾಷ ಕರಿಗಾರ, ಹಾಗೂ ಶರಣಪ್ಪ ಸಜ್ಜನ, ಸುಲೇಮಾನ್ ಕಾಯಿಗಡ್ಡಿ, ಹಾಗೂ ಇನ್ನಿತರರು ರಾಜ್ಯ ಅಧ್ಯಕ್ಷರ ಸಮ್ಮುಖದಲ್ಲಿ ಎಎಪಿ ಪಕ್ಷ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಎಎಪಿ ಯುವ ಮುಖಂಡರಾದ ಹೊಳಿಯಪ್ಪ ಬಿ.ಕುರಿ, ಅಬ್ದುಲ್ ರಜಾಕ್ ಸುಳ್ಳದ, ಚನ್ನಪ್ಪ ನಾಲಗಾರ, ಹುಲಗಪ್ಪ ಡಿ.ಚೂರಿ ವಕೀಲರು ಉಪಸ್ಥಿತರಿದ್ದರು . ಜೊತೆಗೆ ಗಜೇಂದ್ರಗಡ ಆನೇಕಲ್ ದೊಡ್ಡಯ್ಯನವರ ನೇತೃತ್ವದಲ್ಲಿ ಎಎಪಿ ರಾಜ್ಯಧ್ಯಕ್ಷರಾದ ಪೃತ್ವಿರೆಡ್ಡಿಯವರ ಹಸ್ತದಿಂದ ಎಎಪಿ ಪಕ್ಷದ ಕಚೇರಿಯ ಉದ್ಘಾಟನೆ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು.
ವರದಿ – ಸಂಪಾದಕೀಯಾ