ಕ್ಷಮಿಸು ಬಿಡು ಕಂದಾ……

Spread the love

ಕ್ಷಮಿಸು ಬಿಡು ಕಂದಾ……

ಕ್ಷಮಿಸು ಬಿಡು ಕಂದಾ……

ಹೆಚ್ಚೇನೂ ಹೇಳಲಾರೆ

ಈ ಕಲುಷಿತ ಕಾಮ‌ ಪ್ರಪಂಚದಲ್ಲಿ

ಗೋ ಮುಖ ವ್ಯಾಘ್ರಗಳೇ ತುಂಬಿರುವ

ಪಾಪಿಗಳ ಲೋಕದಲ್ಲಿ

ವಿದ್ಯೆ ಕಲಿಸ ಬೇಕಾದವನು ಎಳೆ ಮನಸ್ಸಿನ ಮೇಲೆ

ಮಾಡಿದ ಗಾಯ

ಘೋರಿಯೋಳಗೂ ಅದ್ಯಾವ ಪರಿ ಪರಿಣಾಮ ಬೀರಬಹುದು ಎಂಬ ಅರಿವು ನಮಗ್ಯಾರಿಗೂ ಇಲ್ಲ

ಅರಿವಾಗವುದು ಇಲ್ಲಾ  ಏಕೆಂದರೆ ನಾವು ಹೃದಯದ ಮಾತು ಕೇಳುವುದ ಮರೆತ್ತಿದ್ದೆವೇ

ಮನಃಸಾಕ್ಷಿಯ ಹಣಕ್ಕೆ ಹೆಣದಂತೆ ಮಾರಿಕೊಂಡಿದ್ದೆವೇ

ಮಾನವಿಯ ಮಿಡಿತ ತುಡಿತಗಳು  ಮನಸ್ಸಿನ ಗಡಿದಾಟಿ ಮಸಣದ ಮಣ್ಣಿನಲ್ಲಿ  ಜೀವಂತ‌ ಸಮಾದಿ ಮಾಡಿದ್ದವೇ

ಆ ಸಮಾದಿಯ ಸೌದ ನೋಡಲು ಇಂದು ನಿನ್ನನ್ನು  ಕಳುಹಿಸಿ ಕೊಟ್ಟಿದ್ದೆವೇ

ಸತ್ತ ಮನಸ್ಸುಗಳ ಪಿಸುಗುಟ್ಟುವ ಮಾತುಗಳು ಗೊರಿಯಾಳದಲ್ಲಿ ಕೇಳಿದರೆ

ಗಟ್ಟಿಯಾಗಿ ಹೇಳು ಕಂದ.   ಸತ್ತಂತೆ ಬದುಕಿದ್ದವರು ಎಚ್ಚರವಾಗಲಿ

ನಿಸರ್ಗದಲ್ಲಿ ಬೆತ್ತಲಾಗಿ ಸಾಯುವುದಕ್ಕಿಂತ

ಅಮ್ಮನ  ಗರ್ಭದಲ್ಲೇ ಗೋರಿ ಕಂಡಿದ್ದರೆ

ಚೆಂದ‌ ಎಂಬ ನಗ್ನ ಸತ್ಯದ  ಮಾತುಗಳು

✍️ ಗಣೇಶ್ ಕೆ (ದಾವಣಗೆರೆ) ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ.

ವರದಿ – ಉಪ್ಪಳೇಶ ವಿ.ನಾರಿನಾಳ

One thought on “ಕ್ಷಮಿಸು ಬಿಡು ಕಂದಾ……

Leave a Reply

Your email address will not be published. Required fields are marked *