ನಡೆದ ತುಮಕೂರು ಜಿಲ್ಲಾ ಆಮ್ ಆದ್ಮಿ ಪಾರ್ಟಿಯ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರು ಭಾಸ್ಕರ್ ರಾವ್,
ಸುಪ್ರೀಂ ಕೋರ್ಟ್ ವಕೀಲರು ಹಿರಿಯ ಮುಖಂಡರು ಬ್ರಿಜೇಶ್ ಕಾಳಪ್ಪ, ಜಿಲ್ಲಾ ಅಧ್ಯಕ್ಷರು ಡಾ. ವಿಶ್ವನಾಥ್, ಜಯರಾಮ್,ತುಮಕೂರು ಗ್ರಾಮಾಂತರ ಅಭ್ಯರ್ಥಿ ಪ್ರಭಲ ಆಕಾಂಕ್ಷಿ, ವಕೀಲರು, ಚಲನಚಿತ್ರ ನಿರ್ದೇಶಕರು ಆದ ದಿನೇಶ್ ಕುಮಾರ್. ಬಿ. ರುದ್ರೇಶ್. ಜಿ, ಭಾಗವಹಿಸಿದ್ದರು, ದೆಹಲಿ ಪಂಜಾಬ್ ಅಧಿಕಾರ ನಡೆಸುತ್ತಿದ್ದೂ ಜನ ಸಾಮಾನ್ಯರಿಗೆ ಎಲ್ಲಾ ರೀತಿಯ ಅನುಕೂಲ ಮಾಡಿ ಕೊಟ್ಟಿದೆ. ಅದೇ ರೀತಿ ಗುಜರಾತ್ ನಲ್ಲಿ ಕೂಡ ಆಮ್ ಆದ್ಮಿ ಪಕ್ಷ ಸರ್ಕಾರ ರಚನೆ ಮಾಡುತ್ತೆ. ಗುಜರಾತ್ ನಂತರ ಕರ್ನಾಟಕದಲ್ಲಿ ಶ್ರೀ ಸಾಮಾನ್ಯರಿಗೆ ಅಧಿಕಾರ ಸಿಗುವುದರಲ್ಲಿ ಸಂದೇಹ ಇಲ್ಲ ಎಂದು ಹೇಳಿದರು. ಸಮಾನತೆ ಶಿಕ್ಷಣ ಉಚಿತ ನೀರು ವಿದ್ಯುತ್ ಮಹಿಳೆಯರಿಗೆ ಉಚಿತ ಬಸ್ ಹಾಗೂ ಆಸ್ಪತ್ರೆಗಳ ಸೇವೆಯನ್ನು ನೀಡುವುದು ನಮ್ಮ ಗುರಿ, ತೆರಿಗೆ ಹಣ ಜನರಿಗೆ ಹೇಗೆ ಬಳಕೆಯಾಗಬೇಕು ಎನ್ನುವುದನ್ನ ತಿಳಿಸಿಕೊಟ್ಟರು. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಕೆಜೆಪಿ, ಎಲ್ಲಾ ಪಕ್ಷಗಳು ಕೂಡ ಗೆದ್ದು ಜನರಿಗೆ ಕೊಡಬೇಕಾದ ಮಾಹಿತಿ ಹಾಗೂ ಸಿಗಬೇಕಾದ ಸವಲತ್ತುಗಳು ಸಿಗದೇ ಬಡವರು ಬಡವರೇ ಹಾಗಿದ್ದಾರೆ, ರಾಜಕೀಯ ಮುಖಂಡರು ಮಾತ್ರ ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯವಾಗುತ್ತಿದೆ. ನೀರಿನ ಸವಲತ್ತು ಕಡಿಮೆಯಾಗಿ ರೈತರ ಆದಾಯ ಕುಂಟಿತವಾಗಿದ್ದು ಮುಂದೆ ರೈತರ ನೆರವಿಗೆ ಬರಲು ಪಕ್ಷ ಸಂಘಟನೆ ಆಗಬೇಕಿದೆ. ಕ್ಷೇತ್ರದಲ್ಲಿ ಎಲ್ಲಾ ಜಾತಿ ಧರ್ಮದ ಜನರಿದ್ದು ಅತೀ ಹೆಚ್ಚು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರೇ ಇದ್ದು ಹಣ ಹೆಂಡ ಆಮಿಷ ಒಡ್ಡಿ ಓಟ್ ಬ್ಯಾಂಕ್ ಮಾಡಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಆದರೆ ಎಲ್ಲಾ ಜಾತಿಯಲ್ಲು ಬಡವರಿದ್ದು ಎಲ್ಲರಿಗೂ ಶಿಕ್ಷಣ ಅರೋಗ್ಯ ಉದ್ಯೋಗ ಸೃಷ್ಟಿ ಹಿರಿಯರಿಗೆ ಸಿಗಬೇಕಾದ ಸವಲತ್ತುಗಳು ಹಾಗೂ ಸಮಾಜದಲ್ಲಿ ಶಾಂತಿ ಕಾಪಾಡಲು ಶ್ರಮಿಸುವುದಾಗಿ, ಅನ್ಯಾಯದ ವಿರುದ್ದ ಹೋರಾಡುವುದಾಗಿ ದಿನೇಶ್ ಕುಮಾರ್. ಬಿ. ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ವರದಿ – ಸಂಪಾದಕೀಯಾ