ಕಲಾಂ ನಿಮಗೊಂದು ಸಲಾಮ್..!

Spread the love

ಕಲಾಂ ನಿಮಗೊಂದು ಸಲಾಮ್..!

ನಮ್ಮ ಭಾರತ ದೇಶದಲ್ಲಿ ಸಾಮಾನ್ಯ ಪ್ರಜೆಯೂ ಕೂಡ ಈ ದೇಶದ ಪ್ರಥಮ ಪ್ರಜೆಯಾಗಬಹುದು. ಅಷ್ಟೊಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ನೀಡಲಾಗಿದೆ. ಅದಕ್ಕೊಂದು ತಾಜಾ ಉದಾಹರಣೆ ಎಂಬಂಥೆ ಭಾರತದ ಅಣು ವಿಜ್ಞಾನಿ ಡಾ.ಎಪಿಜೆ ಅಬ್ದುಲ್ ಕಲಾಂ. ಅವರನ್ನು ಈ ದಿನ ನೆನೆಯಲೇಬೇಕಾದ ದಿನ. ಏಕೆಂದರೆ..? ವಿದ್ಯಾರ್ಥಿಗಳಿಗೆ ಎಂಥ ಶಿಕ್ಷಣವನ್ನು ಬೋಧಿಸಬೇಕು ಎಂಬ ತಾತ್ವಿಕ ನೆಲಯನ್ನು ಡಾ.ಕಾಲಂ ಹೊಂದಿದ್ದರು.

ಹೀಗಾಗಿ ಇಂದು ವಿದ್ಯಾರ್ಥಿಗಳ ದಿನವನ್ನಾಗಿ ಡಾ.ಕಲಾಂ ಅವರ ದಿನವಾಗಿಯೂ ಆಚರಿಸಲಾಗುತ್ತದೆ. ೧೯೩೧ ರ ದಿನದಂದು ಜನಿಸಿದ ಮಾಜಿ ಭಾರತೀಯ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಗೌರವಾರ್ಥವಾಗಿ ವಿಶ್ವಸಂಸ್ಥೆಯು 2010 ರಲ್ಲಿ ಪ್ರತಿ ವರ್ಷ ಅಕ್ಟೋಬರ್ 15 ಅನ್ನು ವಿಶ್ವ ವಿದ್ಯಾರ್ಥಿಗಳ ದಿನವೆಂದು ಘೋಷಿಸಿದೆ.

ಶಿಕ್ಷಣ ಮತ್ತು ವಿದ್ಯಾರ್ಥಿಗಳ ಕಡೆಗೆ ಕಲಾಂ ಅವರ ಪ್ರಯತ್ನಗಳನ್ನು ಗುರುತಿಸುವ ಗುರಿಯನ್ನು ಈ ದಿನ ಹೊಂದಿದೆ. ಇದಕ್ಕಾಗಿ ಇಲ್ಲಿ ಕೆಲವು ಸಂಗತಿಗಳನ್ನು ಹೇಳಲು ಬಯಸುತ್ತೇನೆ “ಮಿಸೈಲ್ ಮ್ಯಾನ್’ ಎಂದೇ ಖ್ಯಾತರಾಗಿದ್ದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ,  ಇನ್ನು ಮುಂದೆ ಯಾವಾಗಲೂ ನೆನಪು ಮಾತ್ರ ಆದರೆ ಅವರು ಮಾಡಿದ ಸಾಧನೆ ಮಾತ್ರ ಅಪಾರವಾದದ್ದು,  ಅವರ ಸರಳತೆ ಇಂದಿನ ಯುವ ಪೀಳಿಗೆಗೆ ಆದರ್ಶವಾಗಿದೆ. ಅವರ ಜೀವನದ ಬಗ್ಗೆ ಹೇಳಬೇಕಾದರೆ ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ತಮಿಳುನಾಡು ರಾಜ್ಯದ ರಾಮೇಶ್ವರಂನಲ್ಲಿ, ೧೫ ಅಕ್ಟೋಬರ್  ೧೯೩೧ ರಂದು  ತಮಿಳು  ಮುಸ್ಲಿಂ  ಕುಟುಂಬದಲ್ಲಿ ಜನಿಸಿದರು. ತಂದೆಯ ಹೆಸರು ಜೈನುಲಾಬ್ದೀನ್ ,  ಸ್ಥಳೀಯ ಮಸೀದಿಯಲ್ಲಿ ದೋಣಿಯ ಮಾಲೀಕರಾಗಿದ್ದರು. ಧನುಷ್ಕೋಡಿ ಮತ್ತು ರಾಮೇಶ್ವರಂ ನಡುವೆ ತಮ್ಮ ದೋಣಿಯಲ್ಲಿ ಹಿಂದು  ಭಕ್ತರನ್ನು ಸೇರಿದಂತೆ ಹಲವು ಧರ್ಮಿಯರನ್ನು ಕರೆದುಕೊಂಡು ಹೋಗುತ್ತಿದ್ದರುˌ  ತಾಯಿಯ ಹೆಸರು ಆಶಿಯಮ್ಮ, ಗೃಹಿಣಿ, ಅವರಿಗೆ ಇನ್ನೂ ನಾಲ್ವರು ಒಡಹುಟ್ಟಿದವರಿದ್ದರು. ಐವರಲ್ಲಿ ಕಲಾಂ ಅವರೇ ಕಿರಿಯವರಾಗಿದ್ದಾರೆ. ಮೊಹಮ್ಮದ್ ಮುತ್ತು ಮೀರಾ ಲೆಬ್ಬಾಯಿ ಮರೈಕಾಯರ್, ಮುಸ್ತಫಾ ಕಲಾಂ, ಕಾಸಿಂ ಮೊಹಮ್ಮದ್ ಮತ್ತು ಅಸಿಮ್ ಜೋಹ್ರಾ ಎಂಬ ಸಹೋದರಿ ಇದ್ದರು.ಅವರ ಪೂರ್ವಜರು ಬಹಳಷ್ಟು ಸಂಪತ್ತು ಮತ್ತು ಬಹಳಷ್ಟು ಆಸ್ತಿಗಳನ್ನು ಹೊಂದಿದ್ದರು. ಕುಟುಂಬವು ಮುಖ್ಯವಾಗಿ ಶ್ರೀಲಂಕಾದ ಮುಖ್ಯ ಭೂಭಾಗದಿಂದ ಪಂಬನ್ ದ್ವೀಪದಂತಹ ಇತರ ದ್ವೀಪಗಳ ನಡುವೆ  ವ್ಯಾಪಾರ ಮಾಡುತ್ತಿದ್ದರು  ಆದ್ದರಿಂದ ಅವರ ಕುಟುಂಬಕ್ಕೆ “ಮಾರಾ ಕಾಲಮ್ ಇಯಕ್ಕಿವರ್” ಮತ್ತು “ಮಾರಾಕಿಯರ್” ಎಂಬ ಬಿರುದನ್ನು ನೀಡಲಾಯಿತು. ಆದರೆ 1920ರಲ್ಲಿ ವ್ಯವಹಾರವು ವಿಫಲವಾಗಿ ಹೆಚ್ಚಿನ ಸಂಪತ್ತನ್ನು ಕಳೆದುಕೊಂಡರು. ಅಬ್ದುಲ್ ಕಲಾಂ ಹುಟ್ಟುವ ಹೊತ್ತಿಗೆ ಅವರ ಕುಟುಂಬ ತುಂಬಾ ಕೆಟ್ಟ ಸ್ಥಿತಿಯಲ್ಲಿತ್ತು. ಅಂದರೆ ಬಡತನದ ಹಂತ ತಲುಪಿದರು ಇದರಿಂದಾಗಿ ಜೀವನದಲ್ಲಿ ಕುಗ್ಗದೆ ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಲಿಸುವ ಸಲುವಾಗಿ, ಕಿರಿಯ ವಯಸ್ಸಿನಲ್ಲೇ ಕೆಲಸವನ್ನು ಆರಂಭಿಸಿದರು ಅಲ್ಲದೆ ಅವರು ಶಾಲೆಯನ್ನು ಬಿಟ್ಟ ನಂತರ ಪತ್ರಿಕೆಗಳ ವಿತರಣೆಯನ್ನು ಮಾಡುತ್ತಿದ್ದರು. ಇದು ಅವರ ಬಾಲ್ಯದಲ್ಲಿನ ನಿಸ್ವಾರ್ಥ ಸೇವೆಯನ್ನು ತಿಳಿಯಬಹುದು. ಇಂದಿನ ಕಾಲದ ಮಕ್ಕಳಿಗೆ ಜೀವನದ ಕಷ್ಟದ ಅರಿವೇ ಇಲ್ಲದೇ ಜೀವಿಸುವರಿಗೆ ಇಂತಹವರನ್ನು ಅನುಸರಿಸುವುದು ಉತ್ತಮ ಅಲ್ಲದೆ ಹಣಕಾಸನ್ನೇ ನಂಬದೆ ತಮ್ಮ ಓದಿನ ಕಡೆಗೂ ಗಮನ ಹರಿಸುವುದು ಬಹಳ ವಿರಳ ಮಂದಿ ಮಾತ್ರ ಮುಂಜಾನೆ ೪:೦೦ ಘಂಟೆಗೆ ಎದ್ದು ದಿನದ ಪಾಠಗಳನ್ನು ಓದಿ ಶಾಲೆಗೆ ಹೋಗುತ್ತಿದ್ದರು. ಶಾಲೆಯಲ್ಲಿ ಚುರುಕಾಗಿಮತ್ತುಕಠಿಣಪರಿಶ್ರಮದಮೂಲಕ ಉತ್ತಮ ಅಂಕಗಳನ್ನು ಪಡೆಯುವ ವಿಧ್ಯಾರ್ಥಿಯಾಗಿದ್ದರು.  ಆದರೆ ಗಣಿತದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು ಗಣಿತವನ್ನು ದೀರ್ಘಗಂಟೆಗಳ ಕಾಲ ಅಧ್ಯಯನವನ್ನು  ನಡೆಸುತ್ತಿದ್ದರು ನಂತರ ರಾಮನಾಥಪುರಂ ಶ್ವಾರ್ಟ್ಜ್ ಮೆಟ್ರಿಕ್ಯುಲೇಷನ್ಶಾ ಶಾಲೆಯಲ್ಲಿ ಶಿಕ್ಷಣ ಮುಗಿಸಿ  ತಿರುಚಿರಾಪಳ್ಳಿಯಲ್ಲಿನ ಕಲಾಂ ಸೇಂಟ್ ಜೋಸೆಫ್ಸ್ ಕಾಲೇಜಿಗೆ ಸೇರಿಕೊಂಡು ೧೯೫೪ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು.ಆದರೆ ಈವಿಷಯದ ಬಗ್ಗೆ ಉತ್ಸಾಹ ಕಡಿಮೆಯಾಗುತ್ತಾ ಬಂತು ಮತ್ತು ವಿಷಯವನ್ನು ನಾಲ್ಕು ವರುಷಗಳ ಕಾಲ ಅಧ್ಯಯನ ಮಾಡಿದಕ್ಕೆ ಆಮೇಲೆ ಪಶ್ಚಾತಾಪ ಪಟ್ಟಿದುಂಟು  ಇದು ಸಹ ನಮ್ಮ ಯುವ ಪೀಳಿಗೆಯವರು ಇಂಜಿನಿಯರಿಂಗ್‌ ಮಾಡಿ ಕೃಷಿಗೆ ಮನಸೋತು ತಮ್ಮ ಜೀವನದಲ್ಲಿ ಉತಮ ಕೃಷಿಕರಾಗಿ ಇತರರಿಗೆ ಮಾರ್ಗದರ್ಶವಾಗಿದ್ದಾರೆ ಹಾಗೆಯೇ ಅವರು  ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ಓದಲು ಮದ್ರಾಸ್ ಗೆ ತೆರಳಿದಾಗ ಅಲ್ಲಿ ಹಿರಿಯ ವರ್ಗದ ಯೋಜನೆಯ ಪ್ರಗತಿ ಬಗ್ಗೆ ಡೀನ್ ಕೆಲಸದ ಬಗ್ಗೆ ಅತೃಪ್ತಿಯನ್ನು ವ್ಯಕ್ತಪಡಿಸಿದಾಗ ಇನ್ನೂ ಮೂರು ದಿನಗಳಲ್ಲಿ ಯೋಜನೆಯನ್ನು ಮುಗಿಸದಿದ್ದರೆ,  ವಿದ್ಯಾರ್ಥಿವೇತನವನ್ನು ರದ್ದು ಮಾಡುವುದಾಗಿ  ಬೆದೆರಿಕೆಯನ್ನು  ಹಾಕಿದರು. ಇದು ಅವರ ಜೀವನದಲ್ಲಿನ ತಿರುವು ಕೊಟ್ಟಿತು, ಕೊನೆಗೆ ಡೀನ್ ಕೊಟ್ಟ ಗಡುವಿನಲ್ಲಿ ಯೋಜನೆಯನ್ನು ಪೂರೈಸಿ ಅವರಿಂದ ಪ್ರಶಂಸೆಯನ್ನು ಗಳಿಸಿದರು “ನಾನು ನಿನ್ನ ಮೇಲೆ ಹೆಚ್ಚು ಒತ್ತಡ ಹಾಕಿ ಕಠಿಣವಾದ ಗಡುವಿನಲ್ಲಿ ಕೆಲಸ ಪೂರೈಸಲು ಹೇಳಿದ್ದೆ” ಎಂದು ಹೇಳಿದರು ೨೦೦೨ ರಲ್ಲಿ ೧೧ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿ ಐದು ದಶಕಗಳ ಕಾಲವೂ ಸಾರ್ವಜನಿಕ ಸೇವೆಯಲ್ಲಿದ್ದುಬಹಳ ಕಡಿಮೆ ಮಾಲೀಕತ್ವವನ್ನು ಹೊಂದಿದ್ದ ಇವರ ಬಳಿ ಯಾವುದೇ ಸ್ಥಿರಾಸ್ತಿ, ದೂರದರ್ಶನ, ರೆಫ್ರಿಜರೇಟರ್, ವಾಹನ ಅಥವಾ ಹವಾನಿಯಂತ್ರಣ ಇರಲಿಲ್ಲ, ಅದರ ಬದಲಾಗಿ  2,500 ಪುಸ್ತಕಗಳು, ಆರು ಶರ್ಟ್‌ಗಳು, ಒಂದು ಜೊತೆ ಶೂಗಳು, ಕೈಗಡಿಯಾರಗಳು, ನಾಲ್ಕು ಪ್ಯಾಂಟ್‌ಗಳು ಮತ್ತು ಮೂರು ಸೂಟ್‌ಗಳು ಮಾತ್ರ ಇದ್ದವು. ಇನ್ನೂಂದು ವ್ಯಕ್ತಿತ್ವವೆಂದರೆ ಪುಸ್ತಕಗಳನ್ನು ಹೊರತುಪಡಿಸಿ, ಅವರು ಎಂದಿಗೂ ಇತರರಿಂದಲೂ ಉಡುಗೊರೆಗಳನ್ನು ತೆಗೆದುಕೊಳ್ಳಲಿಲ್ಲ. ಅಲ್ಲದೆ ರಾಷ್ಟ್ರದ ಒಳಗೆ ಅಥವಾ ಹೊರಗೆ ಅವರು ನೀಡಿದ ಯಾವುದೇ ಮಾತುಕತೆಗಳಿಗೆ ಅವರು ಎಂದಿಗೂ ಶುಲ್ಕವನ್ನು ವಿಧಿಸಲಿಲ್ಲ.ಇನ್ನೂ ಊಟದ ವಿಷಯದಲ್ಲಿ ಸಂಪೂರ್ಣವಾಗಿ ಸಸ್ಯಾಹಾರಿಯಾಗಿದ್ದರು ಆಡಂಬರದ ಆಹಾರವನ್ನು ಎಂದಿಗೂ ನಿರೀಕ್ಷಿಸಲಿಲ್ಲ ಬದಲಾಗಿ ಯಾರೇ ಯಾವುದೇ ಕೊಟ್ಟ ಆಹಾರದಿಂದ ಯಾವಾಗಲೂ ತೃಪ್ತನಾಗಿದ್ದರು ಅಲ್ಲದೆ  “ಆಫೀಸ್ ಆಫ್ ಪ್ರಾಫಿಟ್ ಬಿಲ್” ಗೆ ಸಹಿ ಮಾಡುವುದು ಮಾತ್ರ ಅತ್ಯಂತ ಕಷ್ಟಕರವಾದ ಕೆಲಸವಾಗಿತ್ತು. ಹೀಗಾಗಿ ಕಲಾಂ ಅವರಿಗೊಂದು ಸಲಾಮ್ ಹೇಳಲೇಬೇಕೆನಿಸಿತು. ತದನಂತರದಲ್ಲಿ ಮುಂದೆ ಕೆಲವು ನಿರ್ಧಾರಗಳಿಂದಾಗಿ ಅವರು ಅನೇಕ ಟೀಕೆಗಳನ್ನು ಸಹ ಎದುರಿಸಬೇಕಾಯಿತು. ಒಮ್ಮೆ ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಶಿಫಾರಸ್ಸು ಮಾಡಿ ವಿವಾದಕ್ಕೀಡಾಗಿದ್ದರು. ಅಲ್ಲದೆ ಕ್ಷಮಾದಾನ ಅರ್ಜಿಗಳ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದಿದ್ದಾಗ ಟೀಕೆಯನ್ನು ಎದುರಿಸಿ, ಅದರಲ್ಲಿ 21 ಕ್ಷಮಾದಾನ ಅರ್ಜಿಗಳಲ್ಲಿ 1ಕ್ಕೆ ಮಾತ್ರ ಸಹಿ ಹಾಕುವ ಮೂಲಕ ಟೀಕಾಪ್ರಹಾರಕ್ಕೆ ಒಳಗಾದರು.ಈ ದೇಶದ ರಾಜಕಾರಣ ಯಾರನ್ನು ಸಹ ಟೀಕಿಸದೇ ಬಿಡುತ್ತದೆ ಏನು..? ಪ್ರಜಾಪ್ರಭುತ್ವದಲ್ಲಿ ಸರ್ವರು ಸಮಾನರು ಎನ್ನುವ ತತ್ವಕ್ಕೆ ನಾವೆಲ್ಲೂರು ಕಂಕಣ ಬದ್ಧರಾಗೋಣ ಅಲ್ಲವೆ. ಈ ದಿನವನ್ನು ವಿದ್ಯಾರ್ಥಿಗಳು ತುಂಬು ಮನದಿಂದ ಸಂಭ್ರಮದ ಆಚರಣೆಯನ್ನು ಮಾಡಲಿ ಎಂಬೀ ಇಂಗಿತ.

ವಿಶೇಷ ಲೇಖನ :- ಜ್ಯೋತಿ ಜಿ. ಮೈಸೂರು

Leave a Reply

Your email address will not be published. Required fields are marked *