ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ – ಸಿಂಧನೂರು

Spread the love

ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟಸಿಂಧನೂರು

ಸಿಂಧನೂರು : ಮಳವಳ್ಳಿ ಬಾಲಕೀಯ ಸಾವಿಗೆ ಕಾರಣರಾದವರನ್ನು ಗಲ್ಲಿಗೇರಿಸಿ ! ಹೆಚ್.ಡಿ.ಕೋಟೆ ಆದಿವಾಸಿ ಕರಿಯಪ್ಪನನ್ನು ಹೊಡೆದು ಕೊಂದ ಅರಣ್ಯಾಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಲಿ ! ಎಂಬ ಬೇಡಿಕೆಗಳನ್ನು ಇಟ್ಟುಕೊಂಡು ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟದಿಂದ ತಹಶಿಲ್ದಾರರ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಸಂಚಾಲಕ ಎಂ.ಗಂಗಾಧರ ಮಾತನಾಡಿ, ಮಂಡ್ಯ ತಾಲೂಕಿನ ಮಳವಳ್ಳಿಯಲ್ಲಿ 4ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯನ್ನು ಶಿಕ್ಷಕನೊಬ್ಬ ಅತ್ಯಾಚಾರ ಎಸಗಿ ಕೊಲೆಗೈದಿರುವುದು ಇಡೀ ಮಾನವ ಕುಲ ತಲೆತಗ್ಗಿಸುವಂತ , ನಾಚಿಕೆಪಡುವಂತ ವಿಷಯವಾಗಿದೆ . ಕಾಮುಕ ಶಿಕ್ಷಕನ ಟ್ಯೂಷನ್ ಹೇಳುವ ನೇಪದಲ್ಲಿ ವಿದ್ಯಾರ್ಥಿಗೆ ಚಾಕಲೇಟ್ ಕೊಡುತ್ತೇನೆಂದು ಪುಸಲಾಯಿಸಿ , ಕರೆದು ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಕೊರತನದ ವಿಕೃತಿಯ ಪರಮಾವಧಿಯಾಗಿದೆ . ಈ ಪ್ರಕರಣವನ್ನು ನಮ್ಮ ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ ತೀವ್ರವಾಗಿ ಖಂಡಿಸಿ ವಿದ್ಯಾರ್ಥಿಗೆ ನ್ಯಾಯ ಸಿಗಲೇಬೇಕೆಂದು ಒಕ್ಕೂಟ ಹೋರಾಡುತ್ತದೆ . ಹಾಗೆಯೇ ಅನಧಿಕೃತ ಟ್ಯೂಷಣೆಗಳನ್ನು ಓಪನ್ ಮಾಡಿ , ಮುಗ್ದ ಮಕ್ಕಳ ಜೊತೆ ಕಾಮದಾಟವಾಡಿ , ಏನು ಅರಿಯದ ಕಂದಷ್ಟು ದಿವ್ಯಳ ಸಾವಿಗೆ ಕಾರಣನಾದ, ಶಿಕ್ಷಕರನ್ನು ಗಲ್ಲಿಗೆರಿಸಬೇಕೆಂದು ನಮ್ಮ ಒಕ್ಕೂಟದ ಒತ್ತಾಯವಾಗಿದೆ . ಹಾಗೆಯೇ ವಿದ್ಯಾರ್ಥಿಯ ಕುಟುಂಬದವರಿಗೆ 1 ಕೋಟಿ ರೂ . ಪರಿಹಾರ , ಹಾಗೂ ಸರಕಾರಿ ಉದ್ಯೋಗವನ್ನು ನೀಡಬೇಕೆಂದು ಹೇಳಿದರು. ನಂತರ ಡಿ.ಮರಿಯಪ್ಪ ಜಾಲಿಹಾಳ ಮಾತನಾಡಿ, ಆದಿವಾಸಿ , ದಲಿತ ಹಾಗೂ ಹಿಂದುಳಿದ ಮತ್ತು ಇತರೆ ಸಮುದಾಯಗಳ ಮಹಿಳೆಯರು ಅದರಲ್ಲೂ ಅಪ್ರಾಪ್ತ ಬಾಲಕೀಯರ ಹಾಗೂ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ , ಹತ್ಯೆಗಳು ಜರುಗುತ್ತಿದ್ದರೂ ಗೃಹ ಇಲಾಖೆ ಹಾಗೂ ರಾಜ್ಯದ ಬಿಜೆಪಿ ಸರಕಾರದ ಕಾನೂನು ಸುವ್ಯವಸ್ಥೆ ದಿನದಿನಕ್ಕೆ ಹದಗೆಡುತ್ತಿದೆ. ಕೂಡಲೇ ರಾಜ್ಯದ ಗೃಹ ಮಂತ್ರಿಯವರು ನೈತಿಕ ಹೊಣೆಹೊತ್ತು ರಾಜೀನಾಮೆಯನ್ನು ನೀಡಬೇಕೆಂದು ಸರಕಾರವನ್ನು ಆಗ್ರಹಿಸಿದರು.  ಹಾಗೆಯೇ ಹೆಚ್.ಡಿ.ಕೋಟೆ ತಾಲೂಕಿನ ಬೆಗೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಹಾಡಿಯ ಅದಿವಾಸಿ ಕರಿಯಪ್ಪನನ್ನು ಜಿಂಕೆ ಮಾಂಸ ಕದ್ದು ತಿಂದಿದ್ದಾನೆಂದು ಅನುಮಾನಿಸಿ, ಅಮಾನುಷವಾಗಿ ಎಳೆದೊಯ್ದು ಚಿತ್ರಹಿಂಸೆ ನೀಡಿ ಕೊಲೆಗೈದ ನಾಗರ ಹೊಳೆ ಅಭಾಯಾರಣ್ಯದ ಗುಂಡ್ರ ಅರಣ್ಯಾಧಿಕಾರಿಗಳ ಮೇಲೆ ಕಾನೂನು ಕಠಿಣ ಕ್ರಮ ಜರುಗಿಸಲು ಹಾಗೂ ತಬ್ಬಲಿಯಾದ ತಾಯಿಗೆ ಸರಕಾರದಿಂದ 50 ಲಕ್ಷ ಪರಿಹಾರ ನೀಡಿ, ಕುಟುಂಬಕ್ಕೆ ಸರಕಾರಿ ಉದ್ಯೋಗವನ್ನು ನೀಡಬೇಕೆಂದು ನಮ್ಮ ಒಕ್ಕೂಟದ ಒತ್ತಾಯವಾಗಿದೆ.  ಅರಣ್ಯ ರಕ್ಷಕರಾದ, ಆದಿವಾಸಿಗಳ, ಮೇಲಿನ ದೌರ್ಜನ್ಯಗಳು ಮತ್ತು ಅವರ ಹಾಡಿಯಿಂದ ಒಕ್ಕಲೆಬ್ಬಿಸುವುದನ್ನು ಕೂಡಲೇ ನಿಲ್ಲಿಸಬೇಕೆಂದು ಪ್ರಮುಕ ಬೇಡಿಕೆಗಳ ಮನವಿ ಪತ್ರವನ್ನು ಶಿರೆಸ್ತೇದಾರ್ ಮೂಲಕ ಮಾನ್ಯ ಮುಖ್ಯಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಸಂಚಾಲಕರು ಹಾಗೂ ಸದಸ್ಯರಾದ, ವಿಜಯಕುಮಾರ್, ಹೆಚ್.ಆರ್.ಹೊಸಮನಿ, ನಾಗರಾಜ ಸಾಸಲಮರಿ, ಶಿವರಾಜ ಉಪ್ಪಲದೊಡ್ಡಿ, ಸಂಗಮೇಶ ಮೂಳ್ಳುರು,ಯಲ್ಲಪ್ಪ ಜವಳಗೇರಾ, ಈರಣ್ಣ ಸುಲ್ತಾನಪೂರ, ಮುತ್ತುರಾಜ ಸಾಗರಕ್ಯಾಂಪ್, ಹುಲುಗಪ್ಪ ಜಾಲಿಹಾಳ, ಹನುಮೇಶ ಮೈತ್ರಿ, ಹನುಮೇಶ ಜಾಲಿಹಾಳ, ರುಕ್ಮಿಣೇಮ್ಮ, ಅಂಬಮ್ಮ, ವೆಂಕಟೇಶ, ಅಮರೇಶ,ನೂರಪ್ಪ ಕಟ್ಟಿಮನಿ, ಅಶೋಕ ಸಾಗರ, ಪರುಶುರಾಮ ದೀನಸಮುದ್ರ, ಹನುಮಂತ ವಿರುಪಾಪುರ, ಉಮೇಶ ಬಾಲಿ, ಚಿಟ್ಟಿಬಾಬು ಸೇರಿದಂತೆ ಅನೇಕರಿದ್ದರು. ಎಂ.ಗಂಗಾಧರ  ಸಂಚಾಲಕರು ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ-ಸಿಂಧನೂರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *