ಕೂಡ್ಲಿಗಿ:ಮಿತಿ ಮೀರಿದ ಬೀದಿ ನಾಯಿಗಳ ಹಾಗೂ ಹಂದಿಗಳ ಹಾವಳಿ-ಸಾರ್ವಜನಿಕರ ಆಕ್ರೋಶ….

Spread the love

ಕೂಡ್ಲಿಗಿ:ಮಿತಿ ಮೀರಿದ ಬೀದಿ ನಾಯಿಗಳ ಹಾಗೂ ಹಂದಿಗಳ ಹಾವಳಿಸಾರ್ವಜನಿಕರ ಆಕ್ರೋಶ….

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ, ಬೀದಿ ನಾಯಿಗಳ ಹಾಗೂ ಹಂದಿಗಳ ಹಾವಳಿ ಮಿತಿ ಮೀರಿದೆ ಎಂದು ಸಾರ್ವಜನಿಕರು ತೀವ್ತ ಆಕ್ರೋಶ ವ್ಯೆಕ್ತಪಡಿಸಿದ್ದಾರೆ. ಸದಾ ಹಾದಿ ಬೀದಿಯ ರಸ್ಥೆಯಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ, ನಾಯಿಗಳು ತುಂಬಿಕೊಂಡಿರುತ್ತವೆ. ಸಂಚರಿಸುವ ವಾಹನ  ಹಾಗೂ ನಾಗರೀಕರಿಗೆ ಕಿರಿ ಕಿರಿ ಉಂಟು ಮಾಡುತ್ತಿವೆ. ಇದರಿಂದಾಗಿ ವಾಹನ ಅಪಘಾತಕ್ಕೆ ಕಾರಣ ವಾಗಿವೆ, ಕೆಲವು ಬಾರಿ ಆಹಾರ ಪೊಟ್ಟಣವನ್ನಿಡಿದಿರುವ ವರ ಮೇಲೆ ಎರಗಿ ಗಾಯಗೊಳಿಸಿರುವ ಪ್ರಕರಣಗಳಿವೆ. ಮಕ್ಕಳ ಮೇಲೆ ದಾಳಿ ಮಾಡಿರುವ ಸಾಕಷ್ಟು ಘಟನೆಗಳು ಜರುಗಿದ್ದು, ನಾಗರೀಕರಿಂದ ಕ್ರಮಕ್ಕಾಗಿ ಪಪಂ ಅಧಿಕಾರಿಗೆ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಗಳ ಮದ್ಯ ಮಲಗುವ ಹತ್ತಾರು ನಾಯಿಗಳು ರಭಸದಿಂದ ಅಡ್ಡಾ ದಿಡ್ಡಿ ಓಡಾಡುವುದರಿಂದ, ಮತ್ತು ಪರಸ್ಪರ ಕಚ್ಚಾಡಿಕೊಳ್ಳುತ್ತಾ ವಾಹನ ಸಂಚಾರಕ್ಕೆ ತಿರ್ವ ತೊಂದರೆಯುಂಟು ಮಾಡುತ್ತಿವೆ ಎಂದು ನೊಂದ ನಾಗರೀಕರು ದೂರಿದ್ದಾರೆ. ಹಂದಿಗಳ ಹಾವಳಿ ಮೀರಿವೆ ಎಂದು ಸಾರ್ವಜನಿಕರು ದೂರಿದ್ದಾರೆ, ಪಟ್ಟಣದಲ್ಲಿ ಹಂದಿಗಳು ಮತ್ತು ಸೊಳ್ಳೆಗಳ ಹಾವಳಿ ಮಿತಿ ಮೀರಿದೆ. ಇದು ಸಾಂಕ್ರಾಮಿಕ ರೋಗಗಳನ್ನು ಹರಡುವ ಭೀತಿಯನ್ನ ಸೃಷ್ಟಿಸಿದೆ. ಯಾವ ಗಲ್ಲಿಯಲ್ಲಿ ನೋಡಿದರೂ ಪುಂಕಾನು ಪುಂಕ ಹಂದಿಗಳು, ಪಟ್ಟಣದ ಬಹುತೇಕ  ರಸ್ತೆ ಹಾಗೂ ತುಂಬಿ ಹರಿಯುತ್ತಿರುವ ಕೊಳೆತು ನಾರುತ್ತಿರುವ, ಚರಂಡಿಳಲ್ಲಿ ಮನೆ ಮಾಡಿವೆ. ಆಹಾರವನ್ನು ಹುಡುಕಿಕೊಂಡು ಹಂದಿಗಳು ಮನೆಯ ಒಳಗೂ ನುಸುಳಿರುವ ಪ್ರಕರಣಗಳು ಹತ್ತಾರು ಇವೆ, ಪಟ್ಟಣದ ಕೆಲವೆಡೆಗಳಲ್ಲಿ ಹಂದಿಗಳು ಮಕ್ಕಳ ಮೇಲೆರಗಿ ದಾಳಿ ಮಾಡಿರು ಘಟನೆಗಳು ಜರುಗಿವೆ. ಈ ಎಲ್ಲಾ ಸಮಸ್ಯೆಗಳ ಕುರಿತು ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್ ರವರಲ್ಲಿ, ಕ್ರಮಕ್ಕಾಗಿ ಒತ್ತಾಯಿಸಿದ್ದು ಪ್ರಯೋಜನವಾಗಿಲ್ಲ ಎಂದು ವಂದೇಮಾತರಂ ಜಾಗೃತಿ ವೇದಿಕೆ ಸೇರಿದಂತೆ ವಿವಿದ ಕಾರ್ಮಿಕ ಸಂಘಟನೆಗಳು ದೂರಿವೆ. ಸಂಬಂಧಿಸಿದಂತೆ ಅಧಿಕಾರಿಯಲ್ಲಿ ವಿಚಾರಿಸಿದರೆ, ಕೂಡಲೇ ಕ್ರಮ ಜರುಗಿಸುವುದಾಗಿ ಭರವಸೆ ನೀಡುತ್ತಾರಾದರೂ ಏನೂ ಪ್ರಯೋಜನವಾಗಿಲ್ಲ, ಇದು ಹೀಗೆ ಮುಂದುವರೆದಲ್ಲಿ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ನೀಡಲಾಗುತ್ತದೆ ಎಂದು ವಂದೇಮಾತರಂ ಜಾಗೃತಿ ವೇದಿಕೆ ಎಚ್ಚರಿಸಿದೆ. ಪಪಂ ಕಚೇರಿ ಆವರಣದಲ್ಲಿಯೇ ಹತ್ತಾರು ಬೀದಿ ನಾಯಿಗಳಿದ್ದು, ರಸ್ತೆಯಲ್ಲಿ ಆಡ್ಡಾ ದಿಡ್ಡಿ ಓಡಾಡಿಕೊಂಡು ರಸ್ತೆ ತುಂಬೆಲ್ಲ ಮಲಗಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಸಾಕಷ್ಟು ತೊಂದರೆ ಮಾಡುತ್ತಿವೆ. ಆದರೂ ಪಪಂ ಅವರು ಕ್ರಮ ಜರುಗಿಸಿಲ್ಲ, ಇದನ್ನು ಯಾವೊಬ್ಬ ಜನಪ್ರತಿನಿಧಿ ಪ್ರಶ್ನಿಸು ಧೈರ್ಯಮಾಡಿಲ್ಲ.

ಪಪಂ ಆಡಳಿತದ ಜನಪರ ಕಾಳಜಿ ಕಾರ್ಯಕ್ಕೆ, ಇದಕ್ಕಿಂತ  ಸಾಕ್ಷಿ ಮತ್ತೊಂದು ಬೇಕಾ.!? ಎಂದು ಸಾರ್ವಜನಿಕರು ಆಕ್ರೋಶ ವ್ಯೆಕ್ತಪಡಿಸಿದ್ದಾರೆ. ಇಂತಹ ಜ್ವಲಂತ ಸಮಸ್ಯೆಗಳ ಕುರಿತು  ಪಟ್ಟಣದ ಪಪಂ ಸದಸ್ಯರು ಧ್ವನಿ ಎತ್ತಬೇಕಿದೆ ಈ ಮೂಲಕ ಅವರು ತಮ್ಮ ಕನಿಷ್ಠ ಜವಾಬ್ದಾರಿ ನಿರ್ವಹಿಸಬೇಕಿದೆ. ಬದಲಿಗೆ ಅವರು ಮೌನವಾಗಿದ್ದರೆ ಸಾರ್ವಜನಿಕ ವಲಯದಲ್ಲಿ, ಅವರ ಬಗ್ಗೆ ತಪ್ಪು ಅಭಿಪ್ರಾಯ ಮೂಡೋ ಸಾಧ್ಯತೆ ಹೆಚ್ಚಿದೆ ಎಂದು ಪ್ರಜ್ಞಾವಂತರು ಈ ಮೂಲಕ ಅವರಿಗೆ ಎಚ್ಚರಿಸಿದ್ದಾರೆ. ಇದು ಕೇವಲ ಒಂದು ವಾರ್ಡಿನ ಸಮಸ್ಯೆ ಮಾತ್ರವಲ್ಲ, ಪಟ್ಟಣದ ಬಹುತೇಕ ವಾರ್ಡ್ ಗಳಲ್ಲಿನ ಸಮಸ್ಯೆಯಾಗಿದೆ. ಹಂದಿ ಹಾಗೂ ಬೀದಿ ನಾಯಿಗಳ ಹಾವಳಿ ಪಟ್ಟಣದ ಗಲ್ಲಿ ಗಲ್ಲಿ ಗಳಲ್ಲಿದ್ದು, ನಾಗರೀಕರು ತಮ್ಮ ದೂರುಗಳನ್ನು ಸಾಕಷ್ಟು ಬಾರಿ ಪಟ್ಟಣ ಪಂಚಾಯ್ತಿ ಗೆ ನೀಡಿದ್ದರಾದರೂ ಪ್ರಯೋಜನವಾಗಿಲ್ಲ ಎಂದು ನೊಂದ ಸಾರ್ವಜನಿಕರು ಆರೋಪಿಸಿದ್ದಾರೆ. ಬೀದಿ ನಾಯಿಗಳ ಮಿತಿ ಮೀರಿದ ಹಾವಳಿಯಿಂದಾಗಿ ನಾಗರೀಕರು ತೀವ್ರ ಆತಂಕ ದಿಂದ ಜೀವಿಸುವಂತಾಗಿದೆ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಫೀರೋಜ್ ಖಾನ್ ನಿರ್ಲಕ್ಷ್ಯ ಮನೋಭಾವ ತೋರುತ್ತಿದ್ದಾರೆ,  ಇದು ಪಪಂ ಅಮಾನವೀಯ ನಡೆಯಾಗಿದೆ ಎಂದು ನಾಗರೀಕರು ಕಠೋರವಾಗಿ ಖಂಡಿಸಿದ್ದಾರೆ.ಇದು ಹೀಗೆ ಮುಂದುವರೆದಲ್ಲಿ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗುವುದು, ಹಾಗೂ ನ್ಯಾಯಾಲಯದಲ್ಲಿ ನಾಗರೀಕ ಹಿತಾಸಕ್ತಿ ಖಾಸಗೀ ದೂರು ದಾಖಲಿಸಲಾಗುವುದೆಂದು ಕೆಲ ಸಂಘಟನೆಗಳ ಹೋರಾಟಗಾರರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಗುನ್ನಳ್ಳಿ ರಾಘವೇಂದ್ರ, ವಾಲ್ಮೀಕಿ ಮುಖಂಡರಾದ ಕಡ್ಡಿ ಮಂಜುನಾಥ, ಬಾಣದ ಶಿವಶಂಕರ, ಈಶಪ್ಪ, ನಾಗರಾಜ, ವೀರಣ್ಣ, ವಂದೇ ಮಾತರಂ ಜಾಗೃತಿ ವೇದಿಕೆ ಜೂಗುಲರ ಸೊಲ್ಲೇಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ –   ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Leave a Reply

Your email address will not be published. Required fields are marked *