ಶಿಘ್ರವೆ ರೈತರಿಗೆ ಬೆಳೆ ಪರಿಹಾರ ನೀಡುವ ಕುರಿತು ಪಟ್ಟಣದ ನಾಡ ಕಚೇರಿ ಅಧಿಕಾರಿಗಳ ಮುಖಾಂತರ ಶ್ರೀಮ್ಯಾನ ಜಿಲ್ಲಾಧಿಕಾರಿಗಳಿಗೆ ಕ.ನ.ನಿ.ಸೇನೆ ವತಿಯಿಂದ ಮನವಿ.
ಕರ್ನಾಟಕ ನವನಿರ್ಮಾಣ ಸೇನೆ ಹೋಬಳಿ ಘಟಕ ತಾವರಗೇರಾ ತಾ ಕುಷ್ಟಗಿ ಜಿ ಕೊಪ್ಪಳ ಇವರವತಿಯಿಂದ ಇಂದು ತಾವರಗೇರಾ ಹೋಬಳಿಯಲ್ಲಿ ಅತಿ ಹೆಚ್ಚು ಅಕಾಲಿಕ ಮಳೆ ಹಾಗಿದ್ದು. ರೈತರ ಜಮೀನುಗಳಿಗೆ ಮಳೆ ನೀರು ನುಗ್ಗಿ, ಎಲ್ಲಾ ಬೆಳೆಗಳು ಹಾಳಾಗಿದ್ದು 60% ರಷ್ಟು ಮಳೆಯಿಂದ ತೋಗರಿ, ಸೂರ್ಯಕಾಂತಿ, ಹತ್ತಿ ಇನ್ನೂ ಹಲವಾರು ಬೆಳೆಗಳು ಹಾಳಾಗಿದ್ದು ಇರುತ್ತದೆ. ಆದ್ದರಿಂದ ಈ ಕೊಡಲೆ ಸಂಬಂದಪಟ್ಟ ಅಧಿಕಾರಿಗಳುನ್ನು ರೈತರ ಜಮೀನುಗಳಿಗೆ ಕಳಿಸಿ, ಬೆಳೆ ಹಾನಿ ಒಳಗಾಗಿರುವ ರೈತರಿಗೆ ಸೂಕ್ತ ಬೆಳೆ ಪರಿಹಾರ ನೀಡಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳುನ್ನು ಈ ಕೂಡಲೆ ರೈತರ ಜಮೀನಿಗೆ ಕಳಿಸಿ ಸರ್ವೇ ಮಾಡಿಸಿ ರೈತರಿಗೆ ಬೆಳೆ ಪರಿಹಾರ ಒದಗಿಸಬೇಕಾಗಿ ವಿನಂತಿ ಮೂಲಕ ಶಾಂತರೀತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕ.ನ.ನಿ.ಸೇನೆ ಸಂಘದ ಅಧ್ಯಕ್ಷರಾದ ಸಿದ್ಧನಗೌಡ ಪುಂಡಗೌಡ್ರು ನಬಿ ಸಾಬ್ ನವಲಿ, ಮೌನೇಶ್, ಹನುಮನಗೌಡ, ಕುಮಾರ್ ರವಿ ಆರೇರ್, ಸಂತೋಷ, ಹನುಮೇಶ, ಶರಣಬಸವ, ವಿಜಯಕುಮಾರ್ ಇತರರು ಪಾಲುಗೊಂಡಿದ್ದರು
ವರದಿ – ಸಂಪಾದಕೀಯಾ