ಪತ್ರಕರ್ತರಿಗೆ ಬೆಧರಿಕೆ–ಕ.ಕಾ.ಪ.ಧ್ವನಿ ಖಂಡನೆ..
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಪದಾಧಿಕಾರಿಗಳು, ಕೂಡ್ಲಿಗಿ ಘಟಕದ ಅಧ್ಯಕ್ಷ ಎಲೆ ನಾಗರಾಜ ನೇತೃತ್ವದಲ್ಲಿ. ಇತ್ತೀಚೆಗಷ್ಟೇ ಮುದ್ದೇಬಿಹಾಳ್ ಶಾಸಕ ಎ. ಎಸ್ ಪಾಟೀಲ್ ನಡಹಳ್ಳಿ, ವರದಿಗಾರ ನಾರಾಯಣ ಮಾಯಾಚಾರಿಗೆ ಫೋನ್ ಸಂಭಾಷಣೆ ಮೂಲಕ ಜೇವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಖಂಡಿಸಿದರು. ಪತ್ರಕರ್ತರು ಮಾತನಾಡಿ, ಮುಖ್ಯಮಂತ್ರಿಗಳು ಶಾಸಕನ ರಾಜೀನಾಮೆ ಪಡೆಯಬೇಕೆಂದು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರಿಗೆ ಒತ್ತಾಯಿಸಿದರು. ಅವರು ಮುಖ್ಯಮಂತ್ರಿಗಳಿಗೆ ತಮ್ಮ ಹಕ್ಕೊತ್ತಾಯ ಪತ್ರ ಸರ್ಕಾರಕ್ಕೆ ರವಾನಿಸಿದರು, ಹಕ್ಕೋತ್ತಾಯ ಪತ್ರವನ್ನು ತಹಸೀಲ್ದಾರ್ ಟಿ. ಜಗದೀಶ್ ನೀಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಕಾರ್ಯಧ್ಯಕ್ಷ ಬಾಣದ ಶಿವ ಮೂರ್ತಿ, ಅನಿಲ್ ಕುಮಾರ್ ಬಿ. ರಾಘವೇಂದ್ರ. ಸೋವೇನಹಳ್ಳಿ ಈಶ್ವರಪ್ಪ, ಬಿ. ಬಸವರಾಜ್. ಮೀನು ಕೇರಿ ತಿಪ್ಪೇಸ್ವಾಮಿ, ಸಾಲು ಮನಿ ರಾಘವೇಂದ್ರ, ಜಿ. ನಾರಾಯಣ, ಬಣಕಾರ್ ಮೂಗಪ್ಪ, ಶಿವಪುರ ಮಂಜುನಾಥ ಸೇರಿದಂತೆ ಮತ್ತಿತರೆ ಪತ್ರಕರ್ತರು ಇದ್ದರು..