ಮುಧೋಳ ಗ್ರಾಪಂ ಗೆ ಉಪಾಧ್ಯಕ್ಷರಾಗಿ ಬಾಷುಸಾಬ್ ಆರಬಳ್ಳಿನ ಅವಿರೋಧವಾಗಿ ಆಯ್ಕೆ .
ಯಲಬುರ್ಗಾ : ತಾಲೂಕಿನ ಮುಧೋಳ ಗ್ರಾಮ ಪಂಚಾಯತಿಗೆ ಉಪಾಧ್ಯಕ್ಷರಾಗಿದ್ದ ಚಂದ್ರಬಾಯಿ ಕುದರಿ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಶನಿವಾರ ಚುನಾವಣೆ ಜರುಗಿತು. ಉಪಾಧ್ಯಕ್ಷ ಸ್ಥಾನಕ್ಕೆ ಬಾಷುಸಾಬ ಇಮಾಮಸಾಬ ಆರಬಳ್ಳಿನ ಅವರು ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರು ನಾಮಪತ್ರ ಸಲ್ಲಿಸದೆ ಇರುವುದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮುಧೋಳ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಾದ ಬಾಷುಸಾಬ ಇಮಾಮಸಾಬ ಆರಬಳ್ಳಿನ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಾಲೂಕಿನ ಚುನಾವಣಾ ಅಧಿಕಾರಿಗಳಾದ ಶ್ರೀಶೈಲ ತಳವಾರ್ ಅವರು ತಿಳಿಸಿದರು. ಮುಧೋಳ ಗ್ರಾಮ ಪಂಚಾಯಿತಿಗೆ ಒಟ್ಟು 18 ಜನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಇದ್ದರು. ಇವರಲ್ಲಿ ಮೂರು ಜನ ಸದಸ್ಯರು ಗೈರಾಗಿದ್ದರು ಒಟ್ಟು 15 ಜನ ಸದಸ್ಯರ ಒಮ್ಮತದಿಂದ ಉಪಾಧ್ಯಕ್ಷರ ಸ್ಥಾನಕ್ಕೆ ಬಾಷುಸಾಬ ಆರಬಳ್ಳಿನ ಅವರನ್ನು ಆಯ್ಕೆ ಮಾಡಲಾಯಿತು.ಎಂದು ಹೇಳಿದರು. ಈ ವೇಳೆ ಸಹಾಯಕ ಚುನಾವಣಾ ಅಧಿಕಾರಿಯಾಗಿ ಸಮೀರ್ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರವಿಕುಮಾರ್ ಲಿಂಗಣ್ಣನವರ. ಕರ್ತವ್ಯ ನಿರ್ವಹಿಸಿದರು. ವಿಜಯೋತ್ಸವ : ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷರನ್ನು ಗ್ರಾಮ ಪಂಚಾಯಿತಿ ಸದಸ್ಯರೆಲ್ಲರೂ ಸೇರಿ ಸನ್ಮಾನಿಸಿದರು. ಬಳಿಕ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಇದೆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹನುಮವ್ವ ಎಲ್ಲಪ್ಪ ವಡ್ಡರ. ಗ್ರಾಮ ಪಂಚಾಯಿತಿ ಸದಸ್ಯರಾದ. ಖಾದಿರಭಾಷಾ ತೋಳಗಲ್. ಸುವರ್ಣ ಹರಿಜನ. ಕಳಕಪ್ಪ ಹಿರೇಹಾಳ ಮಹಾದೇವಿ ತಳವಾರ. ಶಿವರಾಜ ಆಡಗುಡಿ. ದುರಗಪ್ಪ ವಡ್ಡರ. ಚಂದ್ರಾಬಾಯಿ ಕುದರಿ. ಮಂಜುಳಾ ನೀಲನಗೌಡರ ಮಮತಾಜಬಿ ಹಿರೇಮನಿ. ನೀಲವ್ವ ಖಂಡೋಜಿ ಅನಿತಾ ಹುನಗುಂದ.ರಮಜಾಬಿ ನದಾಫ್.ಚನ್ನಬಸಯ್ಯ ಪೂಜಾರ. ಹಾಗೂ ಗ್ರಾಮ ಸಹಾಯಕರಾದ ಮಾಂತೇಶ ಪುರ್ತಗೇರಿ. ವೀರಭದ್ರಪ್ಪ ನಿಡಗುಂದಿ.ಮಾಜಿ ಗ್ರಾಂಪಂ ಅಧ್ಯಕ್ಷ ಶರಣಪ್ಪ ಹಿರೇಹಾಳ. ಚತ್ರೇಪ್ಪ ಛಲವಾದಿ. ಲಾಲಾಸಬ್ ಆರಬಳ್ಳಿನ್ ಬಸವರಾಜ್ ಗುದಗಿ.ಗ್ರಾಪಂ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನೂ ಹಲವಾರು ಉಪಸ್ಥಿತರಿದ್ದರು.
ವರದಿ – ಹುಸೇನಬಾಷ ಮೋತೆಖಾನ್