ಕ್ಷಿಪ್ರವಾಗಿ ಸ್ಪಂದನೆ – ಪಾರ್ಶ್ವವಾಯು ಪೀಡಿತ 102 ವರ್ಷದ ವ್ಯಕ್ತಿಗೆ ಟ್ರಸ್ಟ್‌ವೆಲ್‌ ಆಸ್ಪತ್ರೆಯಿಂದ ಯಶಸ್ವಿ ಚಿಕಿತ್ಸೆ…

Spread the love

ಕ್ಷಿಪ್ರವಾಗಿ ಸ್ಪಂದನೆ – ಪಾರ್ಶ್ವವಾಯು ಪೀಡಿತ 102 ವರ್ಷದ ವ್ಯಕ್ತಿಗೆ ಟ್ರಸ್ಟ್‌ವೆಲ್‌ ಆಸ್ಪತ್ರೆಯಿಂದ ಯಶಸ್ವಿ ಚಿಕಿತ್ಸೆ…

‘ಅಮೂಲ್ಯ ಸಮಯ’ ವಿಷಯದೊಂದಿಗೆ ಪಾರ್ಶ್ವವಾಯು ಕುರಿತು ಜಾಗೃತಿ ; ಟ್ರಸ್ಟ್ ವೆಲ್ ಆಸ್ಪತ್ರೆ ಬೆಂಗಳೂರು, ಅಕ್ಟೋಬರ್ 29,2022: ಪಾರ್ಶ್ವವಾಯುವಿಗೆ ತುತ್ತಾದರೆ ಜೀವನವೇ ಮುಗಿದಂತೆ! ಮತ್ತೆ ಆ ವ್ಯಕ್ತಿ ಎಲ್ಲರಂತೆ ಎದ್ದು ನಿಲ್ಲಲು, ತಮ್ಮ ಕೆಲಸವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಭಯವೇ ಎಲ್ಲರ ಎದೆಯಲ್ಲಿ ನಡುಕ ಹುಟ್ಟಿಸಿಬಿಡುತ್ತದೆ. ಆದರೆ ಇಲ್ಲಿ ಪಾರ್ಶ್ವವಾಯುವಿಗೆ ತುತ್ತಾದ 102 ವರ್ಷದ ಹಿರಿಯರೊಬ್ಬರು ಕುಳಿತು ಭಜನೆ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಟ್ರಸ್ಟ್ ವೆಲ್ ಆಸ್ಪತ್ರೆ! 102 ವರ್ಷದ ವ್ಯಕ್ತಿಯೊಬ್ಬರು ಎಂಬುವರು ಮಧ್ಯಾಹ್ನ ಊಟ ಸೇವಿಸುತ್ತಿರುವಾಗ ಅವರ ಬಲಕೈ ಸ್ವಾಧೀನ ಕಳೆದುಕೊಂಡಿರುವುದು ತಿಳಿಯಿತು. ಮನೆಯವರು ಗಾಬರಿಗೊಂಡು ಆ ಕ್ಷಣಕ್ಕೆ ತಜ್ಞ ವೈದ್ಯರ ಸಲಹೆಯ ಮೇರೆಗೆ ಟ್ರಸ್ಟ್ ವೆಲ್ ಆಸ್ಪತ್ರೆಗೆ ಅರ್ಧ ಗಂಟೆಯೊಳಗಡೆ ಅವರನ್ನು ಸೇರಿಸಲಾಯಿತು. ಟ್ರಸ್ಟ್ ವೆಲ್ ಆಸ್ಪತ್ರೆ ಸಿಬ್ಬಂದಿಗಳೂ ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡಿದ ಪರಿಣಾಮ, ಪಾರ್ಶ್ವವಾಯುವಿಗೆ ತುತ್ತಾದ ಹಿರಿಯರು ಆಸ್ಪತ್ರೆ ಸೇರಿದ ಅರ್ಧ ಗಂಟೆಯೊಳಗಡೆ ಶೇಕಡಾ 50 ರಷ್ಟು ತಮ್ಮ ಕೈಯನ್ನು ಎತ್ತುವಷ್ಟು ಸಮರ್ಥರಾದರು. ಹಾಗೆಯೇ, ಒಂದು ಗಂಟೆಯೊಳಗಡೆ ಶೇಕಡಾ 90ರಷ್ಟು ತಮ್ಮ ಕೈಯನ್ನು ಎತ್ತಿ  ಅಪಾಯದಿಂದ ಪಾರಾದರು.“ಯಾರಾದರೂ ಪಾರ್ಶ್ವವಾಯುವಿಗೆ ತುತ್ತಾದರೆ ಪ್ರತಿ ಸೆಕೆಂಡ್ ಕೂಡ ಬಹಳ ಮಹತ್ವದಾಗಿರುತ್ತದೆ. ಸೂಕ್ತ ಸಮಯದಲ್ಲಿ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಯಿಂದ ಚಿಕಿತ್ಸೆ ದೊರಕಿದರೆ ಅಪಾಯದಿಂದ ಪಾರಾಗಬಹುದು. ಟ್ರಸ್ಟ್ ವೆಲ್ ಆಸ್ಪತ್ರೆಯು ಬೆಂಗಳೂರಿನ ಅತ್ಯುತ್ತಮ ನರವಿಜ್ಞಾನ ಮತ್ತು ನರಶಸ್ತ್ರಚಿಕಿತ್ಸಾ ವಿಭಾಗಗಳಲ್ಲಿ ಒಂದಾಗಿದೆ. ಮೆದುಳು ಹಾಗೂ ಬೆನ್ನುಮೂಳೆಯ ಅಸ್ವಸ್ಥತೆಗಳಿಗೆ ಸೂಕ್ತ ಆರೈಕೆ ಮಾಡುವುದರ ಜೊತೆಗೆ ಇತ್ತೀಚಿನ ತಂತ್ರಜ್ಞಾನದಿಂದ ಬೆಂಬಲಿತ ವೈದ್ಯರ ತಂಡವನ್ನು ಹೊಂದಿರುವ ಸಮಗ್ರ ಸ್ಟ್ರೋಕ್‌ ರೆಡಿ ಸಂಸ್ಥೆಯಾಗಿದೆ” ಎಂದು‌ ಆಸ್ಪತ್ರೆಯ ಮುಖ್ಯ ನ್ಯೂರೋಸರ್ಜನ್ ಹಾಗೂ ಟ್ರಸ್ಟ್‌ವೆಲ್‌ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಎಚ್.ವಿ ಮಧುಸೂದನ್ ತಿಳಿಸಿದರು. “ಮೆದುಳಿನ ಪಾರ್ಶ್ವವಾಯು ಸಾವಿಗೆ ದೂಡುವ ಎರಡನೇ ಪ್ರಮುಖ ಕಾರಣವಾಗಿದೆ ಮತ್ತು ಅಂಗವೈಕಲ್ಯದ ಮೂರನೇ ಪ್ರಮುಖ ಕಾರಣವಾಗಿದೆ. ಪ್ರತಿ ವರ್ಷ ಸುಮಾರು 18 ಲಕ್ಷ ಜನರು ಸ್ಟ್ರೋಕ್ ಗೆ ಒಳಗಾಗುತ್ತಾರೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರಕಿದರೆ ವ್ಯಕ್ತಿಯು ಪ್ರಾಣಾಪಾಯದಿಂದ ಪಾರಾಗಬಹುದು. ಟ್ರಸ್ಟ್ ವೆಲ್ ಸಂಸ್ಥೆಯು ಅರ್ಹವಾದ ನರಶಸ್ತ್ರಚಿಕಿತ್ಸಕರು, ನ್ಯೂರೋ ಇಂಟರ್ವೆನ್ಷನಿಸ್ಟ್ ಗಳು, ನ್ಯೂರೋ-ಅನಸ್ಥೆಟಿಸ್ಟ್ ಗಳು, ಕ್ರಿಟಿಕಲ್ ಕೇರ್ ತಜ್ಞರ ತಂಡವನ್ನು ಹೊಂದಿದೆ ಜೊತೆಗೆ ಮೆದುಳು, ಬೆನ್ನುಮೂಳೆಯ ಅಘಾತಕಾರಿ ಗಾಯ, ನರರೋಗಶಾಸ್ತ್ರ ನ್ಯೂರೋ ಸರ್ಜರಿ, ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಮೀಸಲಾದ ಕೇಂದ್ರಗಳನ್ನು ಹೊಂದಿದೆ” ಎಂದು ನ್ಯೂರಾಲಜಿ ಸೀನಿಯರ್‌ ಕನ್ಸಲ್ಟೆಂಟ್‌ ಡಾ. ರಾಜೇಶ್ ಕೆ.ಎನ್ ತಿಳಿಸಿದರು. ಪ್ರತಿ ವರ್ಷ ಅಕ್ಟೋಬರ್ 29ರಂದು ವಿಶ್ವ ಸ್ಟ್ರೋಕ್ ದಿನವನ್ನು ಆಚರಿಸಲಾಗುತ್ತದೆ. ಹೊಸದೊಂದು ವಿಷಯದ ಮೂಲಕ ಪ್ರತಿ ವರ್ಷ ಪಾರ್ಶ್ವವಾಯು ಕುರಿತು ಜನರಿಗೆ ಅರಿವು ಮೂಡಿಸುತ್ತಿರುವ ವಲ್ಡ್ ಸ್ಟ್ರೋಕ್ ಆರ್ಗನೈಸೇಶನ್ (ಡಬ್ಲ್ಯುಎಸ್ಒ) ಈ ಬಾರಿ ‘ಅಮೂಲ್ಯ ಸಮಯ’ ಥೀಮ್ ನೊಂದಿಗೆ ವಿಶ್ವ ಪಾರ್ಶ್ವವಾಯು ದಿನದ ಜಾಗೃತಿಯನ್ನು ಉತ್ತೇಜಿಸಲಿದೆ. ವಾರ್ಶ್ವವಾಯು ತುತ್ತಾದವರಿಗೆ ತ್ವರಿತ ಗತಿಯಲ್ಲಿ ಸರಿಯಾದ ಚಿಕಿತ್ಸೆ ನೀಡಿದರೆ ಅಪಾಯದಿಂದ ಪಾರಾಗಬಹುದು ಎಂಬುದು ಈ ಥೀಮ್ ನ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.  ಈ ನಿಟ್ಟಿನಲ್ಲಿ ಪಾರ್ಶ್ವವಾಯುವಿನ ಬಗ್ಗೆ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಜೆ.ಸಿ ರಸ್ತೆಯಲ್ಲಿರುವ ಟ್ರಸ್ಟ್ ವೆಲ್ ಆಸ್ಪತ್ರೆಯಿಂದ ಅಕ್ಟೋಬರ್ 29ರಂದು “ಸ್ಟ್ರೋಕ್ ಜಾಗೃತಿ ವಾಕಾಥಾನ್”ಆಯೋಜಿಸಲಾಗಿದೆ. ಈ ವಾಕಥಾನ್ ಗೆ ಪಾರ್ಶ್ವವಾಯುವಿಗೆ ತುತ್ತಾಗಿ ಯಶಸ್ವಿ ಚಿಕಿತ್ಸೆ ಪಡೆದುಕೊಂಡಿರುವ 102 ವರ್ಷದ ಹಿರಿಯರು ಚಾಲನೆ ನೀಡಿದರು.

ವರೆದಿ- ಹರೀಶ ಶೇಟ್ಟಿ ಬೆಂಗಳೂರು

Leave a Reply

Your email address will not be published. Required fields are marked *