ಸರ್ದಾರ್ ವಲ್ಲಭಭಾಯ್ ಪಟೇಲರ ಜನ್ಮದಿನಾಚರಣೆ.
ಚಿಟಗುಪ್ಪ: ಆಡಳಿತದಲ್ಲಿ ಅತ್ಯಂತ ನಿಷ್ಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಂಡು ದೇಶಕ್ಕೆ ಮಾದರಿಯಾದವರು ಸರ್ದಾರ್ ವಲ್ಲಭಭಾಯ್ ಪಟೇಲ್ ರವರು. ಅವರ ಈ ಜನ್ಮದಿನದ ಸಂದರ್ಭದಲ್ಲಿ ಅವರನ್ನು ಸ್ಮರಣೆ ಮಾಡಿಕೊಂಡು,ಗೌರವ ನಮನಗಳು ಸಲ್ಲಿಸುತ್ತೇವೆ ಎಂದು ಸಾಹಿತಿ, ಪತ್ರಕರ್ತ, ಸಂಚಾಲಕ ಸಂಗಮೇಶ ಎನ್ ಜವಾದಿ ನುಡಿದರು.ನಗರದ ಪ್ರಗತಿ ಕೇಂದ್ರದಲ್ಲಿ ಜರುಗಿದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜಿಸಿದ್ದ ಸರ್ದಾರ್ ವಲ್ಲಭಭಾಯ್ ಪಟೇಲರ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆಧುನಿಕ ಅಖಿಲ ಭಾರತ ಸೇವೆಗಳ ವ್ಯವಸ್ಥೆಯನ್ನು ಸ್ಥಾಪಿಸಿದ್ದಕ್ಕಾಗಿ ಅವರು ಭಾರತದ ನಾಗರಿಕ ಸೇವಕರ ಪೋಷಕ ಸಂತ ಹಾಗೂ ಭಾರತದ ಏಕೀಕರಣ ನೇತಾರ ಎಂದೂ ಕರೆಯಲಾಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಗತಿ ಕೇಂದ್ರದ ಮಾತಾಜಿ ಶೀಲಾದೇವಿ ಪಾಟೀಲ ಮಾತನಾಡಿ ಸರ್ದಾರ್ ವಲ್ಲಭಭಾಯ್ ಪಟೇಲರ ಆದರ್ಶ ಜೀವನ ನಮ್ಮೆಲ್ಲರಿಗೂ ಮಾರ್ಗದರ್ಶನ ಹಾಗೂ ಪ್ರೇರಣೆಯಾಗಿದೆ. ಇವರ ನೀತಿಯ ತತ್ವದ ಮೇಲೆ ನಾವೆಲ್ಲರೂ ಸಾಗಬೇಕೆಂದರು. ಸಂಗೀತಾ ಪಂಚಾಳ ಸ್ವಾಗತಿಸಿ,ನಿರೂಪಿಸಿದರು. ಜಗದೇವಿ ಮೇತ್ರೇ, ಸರಸ್ವತಿ ಝರೇಪ್ಪ, ಮತ್ತು ಶಶಿಕಲಾ ಚವ್ಹಾಣ ಸೇರಿದಂತೆ ಮಹನೀಯರು ಹಾಗೂ ಮುದ್ದು ಮಕ್ಕಳು ಭಾಗವಹಿಸಿದ್ದರು.
ವರದಿ – ಸಂಗಮೇಶ ಎನ್ ಜವಾದಿ