ನಾಣ್ಯಾಪುರ:ಜಿಲ್ಲಾಮಟ್ಟದ ಕ್ರೀಡೆ-ಹಳ್ಳಿಹೈದ ವಿನಾಯಕನ ವಿಜಯ ಪತಾಕೆ, ರಾಜ್ಯಮಟ್ಟಕ್ಕೆ ಆಯ್ಕೆ..
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು, ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಣ್ಯಾಪುರ ಗ್ರಾಮದ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆ.ವಿನಾಯಕ ಏಳನೇ ತರಗತಿ ವಿದ್ಯಾರ್ಥಿ, ಕೆ.ವಿನಾಯಕ ತಂದೆ ವೀರಭದ್ರಪ್ಪ ಎಂಬ ಬಾಲಕನು. ಅಕ್ಟೋಬರ್ 29ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ, ವಿಜಯನಗರ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ ಓಟದ ವಿಭಾಗದಲ್ಲಿ. ಪ್ರಥಮ ಸ್ಥಾನ ಪಡೆಯೋ ಮೂಲಕ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ, ಈ ಮೂಲಕ ಹಳ್ಳಿ ಹೈದ ತನ್ನ ಶಾಲೆಗೆ ಮಾತ್ರವಲ್ಲ, ನಾಣ್ಯಾಪುರ ಗ್ರಾಮಕ್ಕೆ ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾನೆ. ಶಾಲೆಯ ಮುಖ್ಯಗುರುಗಳಾದ ಹೆಚ್. ಶಂಕ್ರಜ್ಜ, ಹಿರಿಯ ಶಿಕ್ಷಕರಾದ ಶ್ರೀನಿವಾಸ ಆಚಾರ್. ಹಾಗೂ ಅಥಿತಿ ಶಿಕ್ಷಕರಾದ. ಹೆಚ್. ಮಂಜುನಾಥ. ಶ್ರೀಮತಿಮಲ್ಲಮ್ಮ. ಗಂಗಮ್ಮ ಟೀಚರ್. ಎಸ್.ಡಿ.ಎಂ. ಸಿ. ಅಧ್ಯಕ್ಷ ಹೆಚ್.ರಮೇಶ್,ಉಪಾಧ್ಯಕ್ಷರಾದ ಎ. ಬೋರಮ್ಮ. ಸದಸ್ಯರುಗಳಾದ ಪಿ. ತಿರುಪತಿ. ಎಸ್. ಕೊಮರಸ್ವಾಮಿ. ತಿಂದಪ್ಪ. ತಿಪ್ಪೇಸ್ವಾಮಿ, ಸಿ.ಬೆನಳಾಮ್ಮ ,ವಂದೇ ಮಾತರಂ ಜಾಗೃತಿ ವೇದಿಕೆ ರಾಜ್ಯ ಮುಖಂಡ ಹಾಗೂ ಪತ್ರಕರ್ತರಾದ ವಿ.ಜಿ.ವೃಷಭಂದ್ರ, ಗ್ರಾಮದ ಯುವ ಮುಖಂಡ ದಿಬ್ಬದಳ್ಳಿ ಮಲ್ಲಪ್ಪ ನಾಸೇರಿದಂತೆ ಸಮಸ್ತ ಗ್ರಾಮಸ್ಥರು ಹಾಗೂ ಗ್ರಾಮದ ಹಿರಿಯರು ಮತ್ತು ಸಂಘ ಸಂಸ್ಥೆಗಳು ಸಾದಕ ಕೆ.ವಿನಾಯಕನಿಗೆ ಹಾಗೂ ಅವರ ಪೋಷಕರಿಗೆ ಮತ್ತು ದೈಹಿಕ ಶಿಕ್ಷಕರಿಗೆ ಅಭಿನಂದನೆ ತಿಳಿಸಿದ್ದಾರೆ. ಸಾಧಕ ವಿದ್ಯಾರ್ಥಿ ವಿನಾಯಕ ಮುಂದಿನ ದಿನಗಳಲ್ಲಿ, ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲಿ ಎಂದು ಅವರು ಹಾರೈಸಿದ್ದಾರೆ. ಹಿರಿಯ ದೈಹಿಕ ಶಿಕ್ಷಕರಾದ ಸಿಮಂಜುನಾಥ ಹಾಗೂ ಶಾಲೆಯ ಅತಿಥಿ ಶಿಕ್ಷಕ ಹೆಚ್. ಮಂಜುನಾಥ ಮಾತನಾಡಿ, ನಮ್ಮ ಹೆಮ್ಮೆಯ ವಿದ್ಯಾರ್ಥಿ ವಿನಾಯಕ ರಾಜ್ಯಮಟ್ಟದ ಕ್ರೀಡೆಯಲ್ಲಿಯೂ ಪ್ರಥಮ ಸ್ಥಾನ ಪಡೆಯಲಿದ್ದಾನೆ,ಈ ನಿಟ್ಟಿನಲ್ಲಿ ಅನುಭವಿ ಶಿಕ್ಷಕರ ಹಾಗೂ ತರಬೇತು ದಾರರ ಮಾರ್ಗದರ್ಶನದಲ್ಲಿ ತಯಾರಿ ಮಾಡಲಾಗುವುದು ಎಂದು ಭರಸೆ ವ್ಯಕ್ತಪಡಿಸಿದ್ದಾರೆ
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ