ತುರ್ವಿಹಾಳ ಪಟ್ಟಣದಲ್ಲಿಂದು ನವಂಬರ 01 ರ ಪ್ರಯುಕ್ತ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವು ನಾಡಕಾರ್ಯಲಯ ಮುಂದೆ ಸರಳವಾಗಿ ಜರುಗಿತು.

Spread the love

ತುರ್ವಿಹಾಳ ಪಟ್ಟಣದಲ್ಲಿಂದು ನವಂಬರ 01 ರ ಪ್ರಯುಕ್ತ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವು ನಾಡಕಾರ್ಯಲಯ ಮುಂದೆ ಸರಳವಾಗಿ ಜರುಗಿತು.

ನವಂಬರ 01 ರ ಪ್ರಯುಕ್ತ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವು ನಾಡಕಾರ್ಯಲಯ ಮುಂದೆ ಸರಳವಾಗಿ ಜರುಗಿತು. ಅಲ್ಲಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರನ್ನ ಕನ್ನಡವನ್ನ ಒಂದುಗೂಡಿಸಿ ಅದಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿದ ಸುದಿನ ಕರ್ನಾಟಕ ರಾಜ್ಯೋತ್ಸವ ದಿನ: ಕರ್ನಾಟಕ ರಾಜ್ಯ ಸಂಸ್ಥಾಪನಾ ದಿನವನ್ನು ಪ್ರತಿವರ್ಷ ನವೆಂಬರ್ 1 ರಂದು‘ರಾಜ್ಯೋತ್ಸವ’ ದಿನವಾಗಿ ಆಚರಿಸಲಾಗುತ್ತದೆ. ಎಂದು ಗ್ರೇಡ್ ಟು ತಹಶೀಲ್ದಾರ್ ಚಂದ್ರಶೇಖರ ಸಿಂಧನೂರ್ ಸ್ಫಷ್ಟವಾಗಿ ವಿವರಣೆ ನೀಡಿದರು. ಜೊತೆಗೆ 1956 ರ ನವೆಂಬರ್ 1 ರಂದು ದಕ್ಷಿಣ ಭಾರತದ ಕನ್ನಡ ಮಾತನಾಡುವ ಪ್ರದೇಶಗಳ ವಿಲೀನದ ಮೂಲಕ ಕರ್ನಾಟಕ ರಾಜ್ಯವನ್ನು ಸ್ಥಾಪಿಸಲಾಯಿತು.  ಇತಿಹಾಸ: ಭಾರತದ ಸ್ವಾತಂತ್ರ್ಯದ ಸಮಯದಲ್ಲಿ, ದಕ್ಷಿಣ ಭಾರತವನ್ನು ಮೈಸೂರು ರಾಜ ಸಂಸ್ಥಾನ, ಹೈದರಾಬಾದಿನ ನಿಜಾಮರು, ಮದ್ರಾಸ್ (ಈಗ ಚೆನ್ನೈ) ಪ್ರೆಸಿಡೆನ್ಸಿ ಮತ್ತು ಬಾಂಬೆ (ಈಗ ಮುಂಬೈ) ಪ್ರೆಸಿಡೆನ್ಸಿ ಆಳುತ್ತಿದ್ದವು. ಉತ್ತಮ ಆಡಳಿತಕ್ಕಾಗಿ, ಸ್ಥಳೀಯರು ಮಾತನಾಡುವ  ಭಾಷೆಯ ಆಧಾರದ ಮೇಲೆ ಪ್ರದೇಶಗಳನ್ನು ಮರು ವ್ಯಾಖ್ಯಾನಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. 1956 ರಲ್ಲಿ, ಮೈಸೂರು ರಾಜ್ಯದ ಗಡಿಗಳನ್ನು ಇತರ ಪಕ್ಕದ ರಾಜ್ಯಗಳ ಕನ್ನಡ ಮಾತನಾಡುವ ಪ್ರದೇಶಗಳನ್ನು ಸೇರಿಸಲು ಮರು ವ್ಯಾಖ್ಯಾನಿಸಲಾಯಿತು. ತೆಲುಗು ಮಾತನಾಡುವ ಪ್ರದೇಶಗಳನ್ನು ಒಳಗೊಂಡ ನೆರೆಹೊರೆಯ ಆಂಧ್ರಪ್ರದೇಶವನ್ನು ಸಹ ಅದೇ ದಿನ ರಚಿಸಲಾಯಿತು. ನವೆಂಬರ್ 1, 1973 ರಂದು ಈ ಹೆಸರನ್ನು ‘ಮೈಸೂರು’ ನಿಂದ ‘ಕರ್ನಾಟಕ’ ಎಂದು ಬದಲಾಯಿಸಲಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ದಿನ ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿ ರಾಜ್ಯೋತ್ಸವ ದಿನದಂದು ಕನ್ನಡ ಮತ್ತು ಕರ್ನಾಟಕಕ್ಕೆ ಪ್ರಮುಖ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಕರ್ನಾಟಕ ಸರ್ಕಾರ ಪ್ರಶಸ್ತಿ ನೀಡುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು: ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಪರಂಪರೆ ಮತ್ತು ಶ್ರೀಮಂತಿಕೆಯನ್ನು ಪ್ರದರ್ಶಿಸಲು ಕರ್ನಾಟಕದಾದ್ಯಂತ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಚರಣೆಗಳು ನಡೆಯುತ್ತವೆ ಎಂದು ಗ್ರೇಡ್ ಟು ತಹಶೀಲ್ದಾರ್ ಚಂದ್ರಶೇಖರ ಸಿಂಧನೂರ್. ಉಪ ತಹಶೀಲ್ದಾರ್ ಮರೇಗೌಡ ನಾಡಕಚೇರಿ ತುರುವಿಹಾಳ ಆನಂದ್ ಸರ್  ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು. ಶಬ್ಬೀರ್ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ನಾಡಕಚೇರಿ ಸಿಬ್ಬಂದಿಗಳು ಪಾಮೇಶ ಸಂಗಮೇಶ ಇತರರು ಉಪಸ್ಥಿತರಿದ್ದರು

ವರದಿ – ಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *