ಈಚಲಬೊಮ್ಮನಹಳ್ಳಿ:ಬೆಂಕಿಗೆ ಹೊಲದಲ್ಲಿದ್ದ ಕಬ್ಬು ಭಸ್ಮ.

Spread the love

ಈಚಲಬೊಮ್ಮನಹಳ್ಳಿ:ಬೆಂಕಿಗೆ ಹೊಲದಲ್ಲಿದ್ದ ಕಬ್ಬು ಭಸ್ಮ.

ವಿಜಯನಗರ  ಜಿಲ್ಲೆ ಕೂಡ್ಲಿಗಿ ತಾಲೂಕು ಈಚಲಬೊಮ್ಮನಹಳ್ಳಿ ಗ್ರಾಮದಲ್ಲಿ, ನ7ರಂದು ಮಧ್ಯಾಹ್ನ ಆಕಸ್ಮಿಕ ಬೆಂಕಿಗೆ ಸುಟ್ಟು ಭಸ್ಮವಾಗಿದೆ.  3.50 ಎಕರೆ ಹೊಲದಲ್ಲಿ ಕಟಾವು ಹಂತದಲ್ಲಿದ್ದ ಕಬ್ಬು ಬೆಳೆಯ ಹಾದು ಮೇಲ್ಬಾಗದಲ್ಲಿ,  ಹೋಗಿರುವ ವಿದ್ಯುತ್ ತಂತಿಯಲ್ಲಿ ಉಂಟಾದ ಕಿಡಿ ಯಿಂದಾಗಿ ಅಗ್ನಿ ಸಂಭವಿಸಿರಬಹುದೆಂದು ತಿಳಿಯಲಾಗಿದೆ. ಈಚಲಬೊಮ್ಮನಹಳ್ಳಿ ಗ್ರಾಮದ ಶ್ರೀಮತಿ ಸುಮಿತ್ರ ರವರಿಗೆ ಸೇರಿದ ಹೊಲದಲ್ಲಿ ಬೆಳೆದು ನಿಂತಿದ್ದ, 3.5ಲಕ್ಷರೂ ವೆಚ್ಚದ ಕಬ್ಬು ಬೆಂಕಿಗೆ  ಸಂಪೂರ್ಣ ಭಸ್ಮವಾಗಿದೆ. ಬೆಂಕಿ ತಗುಲಿರುವುದನ್ನರಿತ ಶ್ರೀಮತಿ ಸುಮತ್ರರವರು ನೆರೆ ಹೊರೆ ರೈತರೊಡಗೂಡಿ, ಬೆಂಕಿ ನಂದಿಸುವ ಹರಸಾಹಸ ಮಾಡಿದ್ದರಾದರೂ ಪ್ರಯೋಜನವಾಗಿಲ್ಲ. ಬೆಂಕಿ ಬಿದ್ದ ಕೂಡಲೇ ಕೂಡ್ಲಿಗಿ  ಆಗ್ಮಿ ಶಾಮ ಟಾಣೆಗೆ ಕರೆ ಮಾಡಿ ತಿಳಿಸಿದ್ದು, ಅಗ್ನಿ ಶಾಮಕ ಸಿಬ್ಬಂದಿ  ಸ್ಥಳಕ್ಕಾಗಮಿಸುವಷ್ಟರಲ್ಲಿ ಹೊಲದ್ದ ಕಬ್ಬು ಬೆಂಕಿಗೆ ಸಂಪೂರ್ಣ ಭಸ್ಮವಾಗಿತ್ತು. ಧಗ ಧಗ ಉರಿಯುತ್ತಿದ್ದ ಬೆಂಕಿಯನ್ನು  ನಂದಿಸಿ ಹೆಚ್ಚಿನ ಅನಾಹುತ ತಡೆದಿದ್ದಾರೆ, ಅವಘಡ ಸಂಭವಿಸಿದ ವಿಷಯವನ್ನು  ಕಂದಾಯ ಇಲಾಖೆಗೆ  ಹಾಗೂ ಕೃಷಿ ಇಲಾಖೆಗೆ ತಿಳೊಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವರದಿ – ವಂದೇ ಮಾತರಂ ವಿ.ಜಿ.ವೃಷಭೇಂದ್ರ

Leave a Reply

Your email address will not be published. Required fields are marked *