ಐತಿಹಾಸಿಕ ಕೋಟೆ, ವೀರನ ದುರ್ಗಕ್ಕೆ  ಕಲ್ಲು ಗಣಿ ಕಳ್ಳರ ಕನ್ನ.!?-

Spread the love

ಐತಿಹಾಸಿಕ ಕೋಟೆ, ವೀರನ ದುರ್ಗಕ್ಕೆ  ಕಲ್ಲು ಗಣಿ ಕಳ್ಳರ ಕನ್ನ.!?-

ವಿಜಯನಗರ  ಜಿಲ್ಲೆ ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ, ಐತಿಹಾಸಿಕ ಕೋಟೆ ವೀರನದುರ್ಗ. ಸ್ಥಳೀಯ ಕಲ್ಲು ಗಣಿಕಳ್ಳರ ಕನ್ನಕ್ಕೆ ಬಲಿಯಾಗುತ್ತಿದೆಯಾ.!? ಎಂಬ ಆತಂಕದ ಪ್ರೆಶ್ನೆ. ಅಲ್ಲಿ ಗೋಚರಿಸುವ ದುರಂತ ಸನ್ನಿವೇಶಗಳಿಂದ, ಎಂತಹವರಲ್ಲಿಯೂ ಮೂಡದೇ ಇರದು. ಕಾರಣ ಪಾಳೇಗಾರರ ಆಳ್ವಿಕೆ ಇತಿಹಾಸವನ್ನು ಸಾರುವ. ವೀರದುರ್ಗ ಹಾಗೂ ಕೋಟೆ ಈಗ ಅಳಿವಿನಂಚಿನಲ್ಲಿದೆ, ಅಕ್ರಮ ಕಲ್ಲು ಗಣಿಗಾರಿಕೆಯಿಂದ ನಶಿಸುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಭವ್ಯ ಇತಿಗಾಸವನ್ನು ಸಾಧರ ಪಡಿಸುವ ವೀರನ ದುರ್ಗ ಅಕ್ರಮ ಕಲ್ಲು ಗಣಿ ಕಳ್ಳರ ಕನ್ನಕ್ಕೆ, ಸಂಪೂರ್ಣ ಹಾನಿಯಾಗಿದೆ ಅವರೊಂದಿಗೆ ಸ್ಥಳೀಯ ಆಡಳಿತ ಪರೋಕ್ಷ ಮೌನ ಸಮ್ಮತಿ ನೀಡಿದೆ ಎಂದು ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೆಲ ವರ್ಷಗಳಿಂದ   ವೀರನ ದುರ್ಗಕ್ಕೆ ಅಂಟಿಕೊಂಡಂತಿರುವ ಕಲ್ಲು ಕ್ವಾರಿಗೆ,  ಪರವಾನಗಿ ಪಡೆದ ಕ್ವಾರಿ ಮಾಲೀಕರು. ನಿಯಗಳನ್ನ ಗಾಳಿಗೆ ತೂರಿ ವೀರನ ದುರ್ಗಕ್ಕೆ ಲಗ್ಗೆ ಹಾಕಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿದ್ದಾರೆಂದು ಗ್ರಾಮದ ಹಿರಿಯರು ಹಾಗೂ ಕೆಲ ಸಂಘಟನೆಗಳ ಹೋರಾಟಗಾರರು ದೂರಿದ್ದಾರೆ. ಸಂಬಂಧಿಸಿದಂತೆ ಹಲವು ವರ್ಷಗಳಿಂದ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ವೀರನ ದುರ್ಗವನ್ನು ಸಂರಕ್ಷಣೆ ಮಾಡಬೇಕು ಮತ್ತು ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಕ್ರಮಕ್ಕಾಗಿ ಜಿಲ್ಲಾಡಾಳಿತಕ್ಕೆ ಒತ್ತಾಯಿಸಿದ್ದರು.  ಪರಿಣಾಮ ಇತ್ತೀಚೆಗಷ್ಟೇ ಕ್ವಾರಿ ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ಜಿಲ್ಲಾಡಳಿತ ಆದೇಶಿಸಿತ್ತು, ಅಂತೆಯೇ ತಾಲೂಕಾಡಳಿತ ಕ್ವಾರಿ ಸ್ಥಗಿತಗೊಳಿಸಿ ಕ್ರಮ ಜರುಗಿಸಿತ್ತು. ಆದ್ರೆ ಮತ್ತೆ ಕ್ವಾರಿ ಕಾಮಗಾರಿ ಮತ್ತೆ ಪ್ರಾರಂಭಿಸಲಾಗಿದೆ, ತಹಶಿಲ್ದಾರರ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಕಾರಣ ಸಂಬಂಧಿಸಿದಂತೆ ರಾಜ್ಯಪಾಲರಲ್ಲಿ ಹಾಗೂ ಎಸಿಬಿ, ಮತ್ತು ಲೋಕಾಯುಕ್ತ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳಲ್ಲಿ ದೂರು ನೀಡಲಾಗುವುದು. ಅದಕ್ಕಾಗಿ ತಾವು ಅಗತ್ಯ ದಾಖಲು ಪುರಾವೆಗಳೊಂದಿಗೆ, ಉನ್ನತಾಧಿಕಾರಿಗಳ ಮೂಲಕ ಮತ್ತು ಮಾಧ್ಯಮಗಳ ಮೂಲಕ ದೂರು ನೀಡಲು ಸಿದ್ಧರಾಗಿರುವುದಾಗಿ ಹೋರಾಟಗಾರರು ತಿಳಿಸಿದ್ದಾರೆ. ವೀರನ ದುರ್ಗದ ಉಳಿವಿಗಾಗಿ ತಾವು  ಕಾನೂನಿನ ಅಡಿಯಲ್ಲಿ, ಹೋರಾಟ ಮಾಡಲು  ಸರ್ವರೀತಿಯಲ್ಲಿ ಸನ್ನದ್ಧರಾಗಿರಿವುದಾಗಿ ಹೋರಾಟಗಾರರು ಹೇಳಿಕೆ ನೀಡಿದ್ದಾರೆ.  ಅಕ್ರಮ ಕಲ್ಲು ಗಣಿ ಕಳ್ಳರಿಗೆ ಬುದ್ದಿ ಕಲಿಸಬೇಕು ಹಾಗೂ ವೀರನ ದುರ್ಗ ಉಳಿಯಬೇಕಿದೆ, ಅದಕ್ಕಾಗಿ ತಾವು ಹೋರಾಟ ಮಾಡುವುದು ಖಚಿತ ಎಂದು ಹೋರಾಟಗಾರರು ನುಡಿದಿದ್ದಾರೆ. ರಾಜ್ಯ ಮಟ್ಟದಲ್ಲಿ, ಕಾನುನಾತ್ಮಕವಾಗಿ ಹಂತ ಹಂತವಾಗಿ ತಾವು ಹೋರಾಟ ಮಾಡಲು ಸಿದ್ಧರಿದ್ದು. ಅದಕ್ಕಾಗಿ ಸಂಬಂಧಿಸಿದ ಇಲಾಖೆಗಳ ರಾಜ್ಯ ಮಟ್ಟದ ಅಧಿಕಾರಿಗಳ ನೆರವಿನೊಂದಿಗೆ, ಮಾಧ್ಯಮಗಳು ಹಾಗೂ ನ್ಯಾಯಾಲಯದ ಮೊರೆ ಹೋಗುವುದಾಗಿ ಹೋರಾಟಗಾರರು ತಿಳಿಸಿದ್ದಾರೆ.  ಸ್ಪಷ್ಟನೆ-ಸಂಬಂಧಿಸಿದಂತೆ ಕಲ್ಲು ಗಣಿ ಕ್ವಾರಿ ಮಾಲೀಕರನ್ನು ಸಂಪರ್ಕಿಸಿದಾಗ, ತಮ್ಮದೇನು ತಪ್ಪಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸಂಬಂಧಿಸಿದಂತೆ ಸಂಬಂಧಿಸಿದ ಸ್ಥಳೀಯ ಆಡಳಿತಗಳಿಂದ, ಹಾಗೂ ಸಂಬಂಧಿಸಿದ ಎಲ್ಲಾ ಇಲಾಖೆಗಳಿಂದ  ಅಗತ್ಯ  ಪರವಾನಗಿ ಪಡೆಯಲಾಗಿದೆ. ಯಾವುದೆ ಪುರಾತನ ಸ್ಥಳಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಮಾಡಿಲ್ಲ, ಕಾನೂನಿನ ನಿಯಮಗಳನ್ವಯ ಕಲ್ಲು ಕ್ವಾರಿ ನಡೆಸಲಾಗುತ್ತಿದೆ. ಸಂಬಂಧಿಸಿದಂತೆ ತಾಲೂಕಾಡಳಿತಾಧಿಕಾರಿಗಳು ಸ್ಥಳ ಪರಿಶೀಲಿಸಿದ್ದು, ಕಾನೂನಾತ್ಮಕವಾಗಿ ಕಲ್ಲು ಕ್ವಾರಿ ಗಣಿಗಾರಿಕೆಯನ್ನ ನಡೆಸಲು ಅನುಮತಿ ಪಡೆಯಲಾಗಿದೆ. ತಮ್ಮ ಕ್ವಾರಿ ಕಲ್ಲು ಗಣಿಗಾರಿಕೆಯಿಂದ ಈವರೆಗೂ ವೀರನ ದುರ್ಗಕ್ಕೆ ಹಾಗೂ ಕೋಟೆಗೆ, ಯಾವುದೇ ರೀತಿಯಲ್ಲಿ ಕಿಂಚಿತ್ತು ತೊಂದರೆ ಆಗಿಲ್ಲ. ಸರ್ವ ಅನುಮತಿ ಗಳ ಹಾಗೂ ಪರವಾನಗಿ ಹೊಂದಿ, ಕ್ವಾರಿ ಕಲ್ಲು ಗಣಿ ಗಾರಿಕೆ ನಡೆಸಲಾಗುತ್ತದೆ ಎಂದು ಮಾಲೀಕರು ಮಾಧ್ಯಮಕ್ಕೆ ಸ್ಪಷ್ಟಪಡುಸಿದ್ದಾರೆ.

ವರದಿ – ವಂದೇ ಮಾತರಂ ವಿ.ಜಿ.ವೃಷಭೇಂದ್ರ

Leave a Reply

Your email address will not be published. Required fields are marked *