ಮದ್ಯದ ಅಮಲಿನಲ್ಲಿ ಜುಮಲಾಪೂರ ಕೆರೆಗೆ ಹಾರಿ ಪ್ರಾಣ ಬಿಟ್ಟ ಯುವಕ. = ತಾವರಗೇರಾ ಠಾಣೆಯಲ್ಲಿ ಪ್ರಕರಣ ದಾಖಲು.

Spread the love

ಮದ್ಯದ ಅಮಲಿನಲ್ಲಿ ಜುಮಲಾಪೂರ ಕೆರೆಗೆ ಹಾರಿ ಪ್ರಾಣ ಬಿಟ್ಟ ಯುವಕ. = ತಾವರಗೇರಾ ಠಾಣೆಯಲ್ಲಿ ಪ್ರಕರಣ ದಾಖಲು.

ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿಯ ಜುಮಲಾಪೂರ ಗ್ರಾಮದ ಯುವಕ ಮಹೇಶ ತಂದೆ ಈರಪ್ಪ ಗುಳಗೌಡ್ರು(ಬಾದವಡಗಿ) ಇತನು ವಿಪರೀತ ಕುಡಿತದ ಚಟಗಾರನಾಗಿದ್ದರಿಂದ ಮಂಗಳವಾರ ಬೆಳಿಗ್ಗೆ  ಕುಡಿತದ ಅಮಲಿನಲ್ಲಿ ಕೆರೆಗೆ ಹಾರಿ ಪ್ರಾಣ ಬಿಟ್ಟಿರುವದು ಬೆಳಕಿಗೆ ಬಂದಿದೆ, ಕೆರೆಯ ದಂಡೆಯ ಮೇಲೆ ಚಪ್ಪಲಿ ಮೊಬೈಲ್ ಇರುವದು ಕಂಡು ಗ್ರಾಮಸ್ಥರು ಪೋಲಿಸರಿಗೆ ಮಾಹಿತಿ ನಿಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ತಾವರಗೇರಾ ಠಾಣೆಯ ಅಧಿಕಾರಿಗಳು ಕೂಡಲೇ ಅಗ್ನಿಶಾಮಕ ಸಿಬ್ಬಂದಿಯವರನ್ನು ಕರೆಯಿಸಿ, ಅಗ್ನಿಶಾಮಕ ಸಿಬ್ಬಂದಿಗಳಿಂದ ಶವ ಹುಡುಕುವ ಕಾರ್ಯ ಕೈಗೊಂಡು ಸ್ಥಳೀಯರ ಸಹಕಾರದಿಂದ ಕೆರೆಯಲ್ಲಿ ಬಿದಿದ್ದ ಯುವಕನ ಶವವನ್ನು ಮೇಲಿತ್ತಿದ್ದಾರೆ. ವಿಪರೀತ ಮದ್ಯ ಸೇವಿಸುವದನ್ನು ಕಂಡು ಯುವಕನ ತಾಯಿ ಬೈದಿದ್ದರಿಂದ ಜಿಗುಪ್ಸೆಗೊಂಡು ಕೆರೆಗೆ ಹಾರಿ ಪ್ರಾಣ ಬಿಟ್ಟಿರುವದು ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿದೆ. “ಮದ್ಯಪಾನವೆ   ಮಹೇಶನಿಗೆ  ಮೃತ್ಯು,,

ಸಂಪಾದಕೀಯಾ – ಅಮಾಜಪ್ಪ ಜುಮಲಾಪೂರ

Leave a Reply

Your email address will not be published. Required fields are marked *