ದಲಿತರ ಹಕ್ಕುಗಳ ರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಹಲವು ಬೇಡಿಕೆಗಳ ಹಿಡೆರೀಕೆಗಾಗಿ ತಹಸೀಲ್ದಾರ ರವರಿಗೆ ಮನವಿ…
ತಿಡಿಗೋಳ,ನಿಡಿಗೋಳ ಗ್ರಾಮದ ದಲಿತರು ಸಿಂಧನೂರ ತಹಸೀಲ್ದಾರ ಕಚೇರಿಯ ಮುಂಭಾಗ ಬೆಳಿಗ್ಗೆಯಿಂದ ರಾತ್ರಿ 8.30 ವರಿಗೆ ಧರಣಿ ನಡೆಸಿದರು.ತಹಸೀಲ್ದಾರು,ಇತರೆ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಜನರು ತಾಳ್ಮೆ ಕಳೆದುಕೊಂಡು ಸಂಜೆ 6 ಕ್ಕೆ ರಸ್ತೆ ತಡೆಗೆ ಮುಂದಾಗಿದ್ದರು. ಪೋಲಿಸ ಅಧಿಕಾರಿಗಳ ಪ್ರಯತ್ನದಿಂದ ಎಲ್ಲಾ ಅಧಿಕಾರಿಗಳು ರಾತ್ರಿ 7.30 ಧರಣಿ ಟೆಂಟಿಗೆ ಬಂದು ಚರ್ಚೆ ನಡೆಸಿದರು. ದಲಿತ ಮಹಿಳೆಯರ ಸೌಚಾಲಯಕ್ಕೆ ಸಂಬಂಧಿಸಿ ನಿಡಿಗೋಳ ಗ್ರಾಮದಲ್ಲಿ ಕಳೆದ ಒಂದು ತಿಂಗಳ ಹಿಂದೆ ಜಾತಿ ಜಗಳ ನಡೆದಿತ್ತು. ಈ ಕಾರಣದಿಂದ ಗ್ರಾಮದ ದೊಡ್ಡ ಭೂ ಮಾಲಿಕರು ದಲಿತ ಜನರನ್ನು ಕೂಲಿ ಕೆಲಸದಿಂದ ಬಹಿಷ್ಕಾರ ಮಾಡಿದ್ದರಂತೆ. ಮಧ್ಯಮ ವರ್ಗದ ರೈತರಿಗೂ ಕಂಡಿಶನ್ ಹಾಕಿ ದಲಿತರನ್ನು ಕೂಲಿ ಕೆಲಸಕ್ಕೆ ಕರೆಯಬಾರದೆಂದು ಹೇಳಿದ್ದಾರಂತೆ.ಈ ಹಿನ್ನೆಲೆಯಲ್ಲಿ ದಲಿತ ಜನರು ಆಕ್ರೋಶಗೊಂಡಿದ್ದಾರೆ. ಉದ್ಯೋಗ ಖಾತ್ರಿ ಕೆಲಸದ ದಿನಗಳನ್ನು 150 ಕ್ಕೆ ಹೆಚ್ಚಿಸುವುದರ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಅಧಿಕಾರಿಗಳು ಒಪ್ಪಿಕೊಂಡರು.ಸಾರ್ವಜನಿಕ ಸೌಚಾಲಯಕ್ಕೆ ಸಂಬಂಧಿಸಿ ಒಂದು ವಾರದ ಹಿಂದೆಯೇ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ. 10 ದಿನಗಳಲ್ಲಿ DPR ತಯಾರಿಸಿ ಕಟ್ಟಡ ಪ್ರಾರಂಭಿಸಲು ಒಪ್ಪಿಕೊಂಡರು. ದೊಡ್ಡ ಶ್ರೀಮಂತರು ಕೂಲಿ ಕೆಲಸಕ್ಕೆ ಬಹಿಷ್ಕಾರ ಆಕಿದ ಕುರಿತು Dysp, ಸರ್ಕಲ್ ಇನ್ಸ್ಪೆಕ್ಟರ್ ಇತರೆ ಪೋಲಿಸ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಗೈಗೊಳ್ಳುವುದಾಗಿ ತಹಸೀಲ್ದಾರರು ತಿಳಿಸಿದರು. ನಿರ್ಧಿಷ್ಟ ದಿನಗಳಲ್ಲಿ ಬೇಡಿಕೆಗಳ ಪರಿಹಾರಕ್ಕೆ ವಿಶ್ವಾಸಾರ್ಹ ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ಧರಣೆ ಹೋರಾಟ ವಾಪಾಸ ಪಡೆಯಲಾಯಿತು. ಕರ್ನಾಟಕ ರೈತ ಸಂಘ (AIKKS) ದ ಅನೇಕ ಸಂಗಾತಿಗಳು ಧರಣಿಗೆ ಬೆಂಬಲಿಸಿ ಭಾಗವಹಿಸಿದ್ದರು. ಪ್ರಕಟಣೆ/ಕರೆ. ಸಂಚಾಲಕರು. ದಲಿತರ ಹಕ್ಕುಗಳ ರಕ್ಷಣಾ ಹೋರಾಟ ಸಮಿತಿ ಸಿಂಧನೂರ.
ಸಂಪಾದಕೀಯಾ