ತಿಮ್ಮಲಾಪುರ ಮತ್ತು ಅಮ್ಮನಕೇರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ,,
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ತಿಮ್ಮಲಾಪುರ ಗ್ರಾಮ,ಶ್ರೀಮೊರಾರ್ಜಿ ವಸತಿ ಶಾಲೆಯಲ್ಲಿ. ಸ್ಫೂರ್ತಿ ಮಹಿಳಾ ಸೇವಾ ಟ್ರಸ್ಟ್(ರಿ) ವತಿಯಿಂದ, ಮಕ್ಕಳ ದಿನಾಚರಣೆ ಪ್ರಯುಕ್ತ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಪಿ.ಸೋನಿಯಾ, ದ್ವಿತೀಯ ಬಹುಮಾನ ಹೆಚ್.ಸೃಷ್ಟಿ, ತೃತೀಯ ಬಹುಮಾನ ಪಿ.ಜಿ.ಅಶ್ವಿನಿ. ಹಾಗೂ ಸಮಾಧಾನಕರ ಬಹುಮಾನ ಮಮತಾ ಮತ್ತು ಭೂಮಿಕ ಪಡೆದಿರುತ್ತಾರೆ. ಟ್ರಸ್ಟ್ ಅಧ್ಯಕ್ಷೆ ಈ ಎಲ್ಲಾ 5 ವಿಜೇತ ಹೆಣ್ಣುಮಕ್ಕಳಿಗೆ ಆರ್.ಈರಮ್ಮ ರವರು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಪ್ರಾಂಶುಪಾಲರಾದ ರೇಖಾ ಅರಳಿಕಟ್ಟಿ ವಹಿಸಿಕೊಂಡಿದ್ದರು. ವಸತಿ ಶಾಲೆ ಶಿಕ್ಷಕ ವೃಂದದವರು, ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷೆ ಆರ್. ಈರಮ್ಮರವರನ್ನು, ವಸತಿ ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಅಮ್ಮನಕೇರಿ: ಶಾಲೆಯಲ್ಲಿ ಮಕ್ಕಳ ದಿನಾಚರಣೆ- ಸ್ಪೂರ್ತಿ ಮಹಿಳಾ ಸೇವಾ ಟ್ರಸ್ಟ್ ವತಿಯಿಂದ, ಅಮ್ಮನಕೇರಿ ಬಾಪೂಜಿ ಪ್ರೌಢ ಶಾಲೆಯಲ್ಲಿ, ಮಕ್ಕಳ ದಿನಾಚರಣೆ ಪ್ರಯುಕ್ತ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ ಯಶಸ್ವಿನಿ, ದ್ವಿತೀಯ ಜಯಮ್ಮ, ತೃತೀಯ ಏಶ್ವರ್ಯ ಪಡೆದರು. ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಶಿಕ್ಷಕ ಶಿವಪ್ರಕಾಶ ವಹಿಸಿದ್ದರು, ವಿದ್ಯಾರ್ಥಿನಿಯರಾದ ತನುಜಾ, ಉಷಾ, ಗೀತಾ ಪ್ರಾರ್ಥಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಚೇತರಾದ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮಹಿಳಾ ಟ್ರಸ್ಟ್ ಅಧ್ಯಕ್ಷೆ ಆರ್.ಈರಮ್ಮರವರು ಬಹುಮಾನ ವಿತರಿಸಿದರು. ಅವರು ಕಾರ್ಯಕ್ರಮನ್ನುದ್ದೇಶಿಸಿ ಮಾತನಾಡಿದರು, ಮಕ್ಕಳ ದಿನಾಚರಣೆ ಕುರಿತು ಹಾಗೂ ಕಾನೂನು ಅರಿವು ಮೂಡಿಸುವ ನಿಟ್ಟಿನಲ್ಲಿ ಮಾತನಾಡಿ, ಮಕ್ಕಳಲ್ಲಿ ಜಾಗ್ರತೆ ಮೂಡಿಸಿದರು. ಪ್ರೌಢಶಾಲೆಯ ಕಾರ್ಯದರ್ಶಿ ರಾಜೇಂದ್ರ ವರ್ಮ ಮಾತನಾಡಿ, ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನ ಮೈಗೂಡಿಸಿಕೊಳ್ಳಬೇಕಿದೆ, ಸ್ಪರ್ಧಾತ್ಮಕ ಮನೋಭಾವವನ್ನು ಮಕ್ಕಳು ಅನಿವಾರ್ಯ ಹೊಂದಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕ ಅಬ್ದುಲ್ ಭಾಷಾ ಸ್ವಾಗತಿಸಿದರು, ಶಿಕ್ಷಕ ಯರಿಸ್ವಿ ವಂದಿಸಿದರು, ಶಿಕ್ಷಕ ಮಹಾದೇವಪ್ಪ, ಉಪಸ್ಥಿತರಿದ್ದರು.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ