ವಾಜಪೇಯಿ ನಗರ ವಸತಿ ಯೋಜನೆ 2019 – 20 ನೇ ಸಾಲಿನಿಂದ ನೇನೆಗುದ್ದಿಗೆ ಬಿದ್ದಿದ್ದ ಈ ಯೋಜನೆಯಿಂದ ಇಂದು ಮುಕ್ತಿ ಹೊಂದಿದ ತಾವರಗೇರಾ ಪಟ್ಟಣದ ಜನತೆ,
ನಗರ ಪ್ರದೇಶದಲ್ಲಿ ಪ.ಜಾತಿ, ಪ.ಪಂಗಡ, ಸಾಮಾನ್ಯ/ಅಲ್ಪಸಂಖ್ಯಾಂತ ವರ್ಗದ ಜನತೆಗೆ ನೀವೇಶನ ರಹಿತರಿಗೆ, ನಿವೇಶನ ಹಾಗೂ ವಸತಿ ಕಲ್ಪಿಸುವ ಸಲುವಾಗಿ ಈ ಹಿಂದೆ ಅಂದರೆ 2019-20ನೇ ಸಾಲಿನಲ್ಲಿ “ವಾಜಪೇಯಿ ನಗರ ವಸತಿ ಯೋಜನೆ” ನೆನೆಗುದ್ದಿಗೆ ಬಿದ್ದು ಸುಮಾರು 3 ವರ್ಷಗಳ ಕಾಲ ಜಿಗುಪ್ಸೆ ಹೊಂದಿದ ಪಟ್ಟಣದ ಜನತೆ ಇಂದು ಮುಕ್ತಿ ಹೊಂದಿದ್ದಾರೆ. ಪಟ್ಟಣದ ಸರ್ವೇ ನಂಬರ 14/1 11 ಎಕರೆ 25 ಗುಂಟೆ ಜಮೀನು ಸರಕಾರದ ನಿಗಧಿ ಬೇಲೆಗೆ ಖರೀದಿಸಿದ್ದು, ಒಟ್ಟು 351 ನಿವೇಶನ ರಹಿತ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಅನುಷ್ಠಾನಗೊಳಿಸಲಾಗಿದೆ. 351 ನಿವೇಶನಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲು ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ಮಾರ್ಗಸೂಚಿ ಪ್ರಕಾರ ಪ.ಜಾತಿ – 60, ಪ.ಪಂಗಡ – 24, ವಿಕಲಚೇತನ – 18 ಸಾಮಾನ್ಯ – 192 ಅಲ್ಪಸಂಖ್ಯಾತ – 53 ವೃದ್ದರು 04 ಜನ ಸೇರಿ ಒಟ್ಟು 351 ಜನ ಫಲಾನುಭವಿಗಳನ್ನು ಆಯ್ಕೆ ಮಾಡಿ ಗುರಿ ನಿಗದಿಪಡಿಸಲಾಗಿದೆ.ಶ್ರೀ ಅಮರೇಗೌಡ ಎಲ್ ಬಯ್ಯಾಪುರ್ ಮಾನ್ಯ ಶಾಸಕರು/ನಗರ ಆಶ್ರಯ ಸಮಿತಿ ಇವರ ಅಧ್ಯಕ್ಷತೆಯಲ್ಲಿ ತಾವರಗೇರಾ ಪಟ್ಟಣದ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿದರು, ಪಟ್ಟಣದ ಜನತೆಯ ಮುಖದಲ್ಲಿ ಮಂದಹಾಸದ ನಗೇ ಬೀರಿತು. ಆದರೆ ಒಟ್ಟು ಫಲಾನುಭವಿಗಳ ಯಾಧಿಯ ಪ್ರಕಾರ ನೋಡಿದರೆ 351 ಫಲಾನುಭವಿಗಳಿಗೆ ಆಯ್ಕೆಯಾಗಿರುತ್ತದೆ. ಸದ್ಯದ ಆಯ್ಕೆಯಾದ ಪಟ್ಟಿಯಲ್ಲಿ ಸೂಕ್ಷ್ಮವಾಗಿ ವಿಚಾರಿಸಿದಾಗ ಇನ್ನೂ 55 ಜನರ ಪಟ್ಟಿಯನ್ನು ತಡೆ ಹಿಡಿದಿದ್ದಾರೆ. ಕಾರಣ ಕೆಲವರು ಇನ್ನೂ ಸರಿಯಾಗಿ ದಾಖಲೆಗಳು ಸಲ್ಲಿಸಿರುವುದಿಲ್ಲ ಎಂದು ಆಶ್ವಾಸನೆ ನೀಡುತ್ತಿದ್ದಾರೆ. ಇನ್ನೂ ಉಳಿದ 55 ಫಲಾನುಭವಿಗಳಿಗೂ ಸಹ ಆದಷ್ಟು ಬೇಗನೆ ಹಕ್ಕು ಪತ್ರ ಸಿಗುವ ವ್ಯವಸ್ತೆ ಮಾಡುತ್ತೇವೆ ಎಂದು ಮಾನ್ಯ ಶಾಸಕರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾನ್ಯ ತಹಶೀಲ್ದಾರರಾದ ಗುರುರಾಜ ಎಮ್.ಚಲುವಾದಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಜೊತೆಗೆ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಹಾಗೂ ಸರ್ವ ಸಿಬಂದಿ ವರ್ಗಾ, ಹಾಗೂ ಸ್ಥಳಿಯ ಮಟ್ಟದ ಪೋಲಿಸ್ ಅಧಿಕಾರಿಗಳು ಹಾಗೂ ಸರ್ವ ಸಿಬ್ಬಂದಿ ವರ್ಗಾದವರು ಸೇವೆ ಸಲ್ಲಿಸಿದರು. ಇದರ ಜೊತೆ ಜೊತೆಗೆ ಪಟ್ಟಣ ಪಂಚಾಯತಿಯ ಮಾಜಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರು ಪಾಲುಗೊಂಡಿದ್ದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಶ್ರೀ ವಿಕ್ರಮ ರಾಯಕರ್ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು, ಜೊತೆಗೆ ಪಟ್ಟಣ ಪಂಚಾಯತಿಯ ಶ್ಯಾಮೂರ್ತಿ ಹಳ್ಳದಮನಿಯವರಿಗೂ ಸಹ ಸನ್ಮಾನಿಸಿ ಗೌರವಿಸಲಾಯಿತು.