ಯಲಬುರ್ಗಾ ಪಟ್ಟಣ ಪಂಚಾಯತಿ ಕಟ್ಟಡ ನಿರ್ಮಾಣಕ್ಕೆ 1.50 ಕೋಟಿ ಮಂಜೂರು,,,,,
ಯಲಬುರ್ಗಾ: ಪಟ್ಟಣದಲ್ಲಿ ಹೊಸ ಪಟ್ಟಣ ಪಂಚಾಯತಿ ಕಛೇರಿಯ ಕಟ್ಟಡ ನಿರ್ಮಾಣಕ್ಕೆ 1.50 ಕೋಟಿ ಹಾಗೂ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ 50 ಲಕ್ಷ ಅನುದಾನ ಬಿಡುಗಡೆಯಾಗಿದೆ ಹಾಗೂ ಶೀಘ್ರವೇ ನೂತನ ಕಟ್ಟಡದ ಭೂಮಿ ಪೂಜೆ ಪ್ರಾರಂಭ ಮಾಡುತ್ತೇವೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಹೇಳಿದರು. ಇಲ್ಲಿನ ಪಟ್ಟಣ ಪಂಚಾಯತಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣದ ಹಳೆಯ ಜಿಲ್ಲಾ ಪಂಚಾಯತಿ (ಜೆಡ್ ಪಿ, ಪಿಆರ್ ಇ ಡಿ) ಕಛೇರಿ ಹಾಗೂ ಹಳೆ ಪ್ರವಾಸಿ ಮಂದಿರದ 2 ಎಕರೆ ಜಾಗವನ್ನು ಪಟ್ಟಣ ಪಂಚಾಯತಿ ಹೆಸರಿಗೆ ಜಿಲ್ಲಾಧಿಕಾರಿ ಅನುಮೋದನೆ ನೀಡಿದ್ದಾರೆ. ಈ ಜಾಗದಲ್ಲಿ ಪಪಂ ಕಛೇರಿ ಹೊಸ ಕಟ್ಟಡ ನಿರ್ಮಾಣಕ್ಕೆ ಡಿಸೆಂಬರ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಸಚಿವ ಹಾಲಪ್ಪ ಆಚಾರ ಅವರಿಂದ ಭೂಮಿ ಪೂಜೆ ನೆರವೇರಿಸಲಾಗುವುದು. ಸರ್ವ ಸದಸ್ಯರು ಸಮ್ಮಿತಿಸಬೇಕು ಎಂದು ಸಭೆಯಲ್ಲಿ ತಿಳಿಸಿದರು. ಇದಕ್ಕೆ ಸದಸ್ಯರಾದ ಮಹ್ಮದ್ ಇಬ್ರಾಹಿಂ ಖಾಜಿ, ಹನುಮಂತ ಭಜಂತ್ರಿ ಅವರು ಈ ಹಿಂದೆ ಬೇವೂರು ರಸ್ತೆಯಲ್ಲಿರುವ ಸರ್ವೇ ನಂಬರ್ 326/1,326/2 ನಲ್ಲಿರುವ ಎನ್ಎ ಪ್ಲಾಟ್ ನಲ್ಲಿನ ನಾಗರಿಕ ಸೌಲಭ್ಯ ನಿವೇಶನದಲ್ಲಿ ಪಟ್ಟಣ ಪಂಚಾಯತಿ ಕಛೇರಿ ನಿರ್ಮಾಣ ಮಾಡಲು ತಿರ್ಮಾನಿಸಲಾಗಿತ್ತು. ಇದೇ ಜಾಗದಲ್ಲಿ ಪಪಂ ಕಛೇರಿ ನಿರ್ಮಾಣ ಮಾಡಿ, ಜಿಲ್ಲಾಧಿಕಾರಿಗಳು ನೀಡಿದ ಎರಡು ಎಕರೆ ಜಮೀನಿನಲ್ಲಿ ಅಂಗಡಿಗಳ ಸಂಕೀರ್ಣ ನಿರ್ಮಾಣ ಮಾಡಿದರೇ ಪಪಂ ಕಛೇರಿಗೆ ಆದಾಯವಾಕ್ಕೆ ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು. ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಪ್ರತಿಕ್ರಿಯಿಸಿ ಸರ್ವೇ ನಂಬರ್ 326/1, 326/2 ಸಿ.ಎ ಸೈಟ್ ಪಟ್ಟಣದಿಂದ ಹೊರಗಡೆ ಇದೆ. ಸದ್ಯ ಜಿಲ್ಲಾಧಿಕಾರಿಗಳು ಅನುಮೋದಿಸಿದ 2 ಎಕರೆ ಜಮೀನು ಪಟ್ಟಣದ ಮಧ್ಯ ಭಾಗದಲ್ಲಿ ಇರುವುದರಿಂದ ಅಚ್ಚುಕಟ್ಟಾದ ಪಪಂ ಕಛೇರಿ ನಿರ್ಮಾಣ ಮಾಡುವುದರ ಜೊತೆಗೆ ಹೊಸ ಪಪಂ ಕಛೇರಿಯ ಗೆಟ್ ನಿಂದ ಜಿ.ಪಿ.ಶೆಟ್ಟರ್ ಅಂಗಡಿಯವರೆಗೆ ಹೊಸ ಅಂಗಡಿಗಳ ಸಂಕೀರ್ಣ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಉತ್ತರಿಸಿದರು. ಈ ಸಂದರ್ಭ ಪಪಂ ಉಪಾಧ್ಯಕ್ಷೆ ಶಾಂತಾ ಮಾಟೂರ, ಸದಸ್ಯರಾದ ವಸಂತ ಭಾವಿಮನಿ, ಕಲಾವತಿ ಮರದಡ್ಡಿ, ಶ್ರೀದೇವಿ ಗುರುವಿನ, ಬಸವ್ವ ಬಣಕಾರ, ವಿಜಯಲಕ್ಷ್ಮಿ ಬೇಲೇರಿ, ಜೆಇ ಉಮೇಶ ಬೇಲಿ ಹಾಗೂ ಸಿಬ್ಬಂದಿಗಳು ಇದ್ದರು. ಪಟ್ಟಣದಲ್ಲಿ ಹೊಸ ಪಟ್ಟಣ ಪಂಚಾಯತಿ ಕಛೇರಿ ನಿರ್ಮಾಣ ಮಾಡಲು 1.50 ಕೋಟಿ ಹಾಗೂ ಸಂತೆ ಮಾರುಕಟ್ಟೆ ನಿರ್ಮಾಣ ಮಾಡಲಿಕ್ಕೆ 50. ಲಕ್ಷ ಅನುದಾನ ಬಿಡುಗಡೆಯಾಗಿದೆ. ಜಿಲ್ಲಾಧಿಕಾರಿಗಳು ಅನುಮೋದಿಸಿದ 2 ಎಕರೆ ಜಮೀನಿನಲ್ಲಿ ಹೊಸ ಪಪಂ ಕಛೇರಿ ನಿರ್ಮಾಣ ಹಾಗೂ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಸಚಿವರಿಂದ ಭೂಮಿ ಪೂಜೆ ಸಲ್ಲಿಸಲಾಗುವುದು. ಪಟ್ಟಣದ ಅಭಿವೃದ್ಧಿಗೆ ಎಲ್ಲಾ ಸದಸ್ಯರ ಸಹಕಾರ ಮುಖ್ಯ. ಶಿವಕುಮಾರ್ ಕಟ್ಟಿಮನಿ, ಪಪಂ ಮುಖ್ಯಾಧಿಕಾರಿ.
ವರದಿ – ಹುಸೇನಬಾಷಾ ಮೋತೆಖಾನ್