ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾವರಗೇರಾ ಇವರಿಂದ ಮಾನ್ಯ ಉಪಾ-ತಹಶೀಲ್ದಾರರವರಿಗೆ ಮನವಿ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಯಿಂದ ಮಾನ್ಯ ಉಪಾ-ತಹಶೀಲ್ದಾರ ತಾವರಗೇರಾ ಇವರಿಗೆ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳಿಂದ ಹಾಗೂ ಪ್ರಾಂಶುಪಾಲರಿಂದ ಮನವಿ ಸಲ್ಲಿಸಲಾಯಿತು. ಉಪಾ-ತಹಶೀಲ್ದಾರರವರಿಂದ ಉನ್ನತ ಶಿಕ್ಷಣ ಸಚಿವರು ಡಾ. ಸಿ ಅಶ್ವಥ್ ನಾರಾಯಣ್ ಕರ್ನಾಟಕ ಸರ್ಕಾರ ಇವರಿಗೆ ಪ್ರಭಾರಿ ಪ್ರಾಂಶುಪಾಲರನ್ನು ಮುಂದುವರೆಸುವ ಬಗ್ಗೆ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸ್ತುತ ಪಟ್ಟಣ ಹಾಗೂ ಗ್ರಾಮಾಂತರ ಭಾಗದ 600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಹಿಂದೆ ಶ್ರೀಮತಿ ಅರುಣಕುಮಾರಿ ಟಿ ಸಹಾಯಕ ಪ್ರಾಧ್ಯಾಪಕರು ಅರ್ಥಶಾಸ್ತ್ರ ವಿಭಾಗ ಇವರು ಪ್ರಭಾರಿ ಪ್ರಾಂಶುಪಾಲರಾಗಿ ಈ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು, ಇವರ ಜಾಗಕ್ಕೆ ಸ್ಥಳೀಯ ರಾಜಕೀಯ ನಾಯಕರು ಸ್ವಜನ ಪಕ್ಷಪಾತದಿಂದ ಹಾಗೂ ರಾಜಕೀಯ ಹಿತಾಸಕ್ತಿಯಿಂದ ಸಿಂಧನೂರು ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಬಸವರಾಜ್ ತಡಕಲ್‌ರವರನ್ನು ಅನ್ಯ ಕಛೇರಿ ಕಾರ್ಯ ನಿಮಿತ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಾವರಗೇರಾ ಇಲ್ಲಿಗೆ ಪ್ರಭಾರಿ ಪ್ರಾಂಶುಪಾಲರನ್ನಾಗಿ ನೇಮಿಸಿದ್ದಾರೆ. ಆದರೆ ಶ್ರೀಮತಿ ಅರುಣಕುಮಾರಿ ಟಿ ರವರು ತುಂಬ ಆದರ್ಶವುಳ್ಳ ವ್ಯಕ್ತಿಯಾಗಿದ್ದು, ಎಲ್ಲಾ ವಿದ್ಯಾರ್ಥಿಗಳ ಅಚ್ಚು/ಮೆಚ್ಚಿನ ಪ್ರಾಂಶುಪಾಲರಾಗಿದ್ದು, ಹಾಗೂ ಸಂಸ್ಥೆಯನ್ನು ಉತ್ತಮವಾಗಿ ಮುನ್ನಡೆಸುವ ಯುಕ್ತಿ ಉಳ್ಳವರಾಗಿದ್ದರು. ಜೊತೆಗೆ ಕೇವಲ ಮೂರು ತಿಂಗಳ ಅವಧಿಯಲ್ಲಿ ಪ್ರಾಂಶುಪಾಲರಾಗಿ ಕಾಲೇಜಿನಲ್ಲಿ ಅನೇಕ ಬದಲಾವಣೆಗೆ ಕಾರಣಿ ಭೂತರಾಗಿದ್ದರು, ಈ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಶ್ರೀಮತಿ ಅರುಣಾ ಕುಮಾರಿ ಟಿ ರವರನ್ನು ಪ್ರಾಂಶುಪಾಲರಾಗಿ ಇರಬೇಕೆಂದು ಒತ್ತಾಯಿಸುತ್ತಿದ್ದಾರು, ಹಾಗಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಬಸವರಾಜ್ ತಡಕಲ್‌ರವರಿಗೆ ಸಂಬಂಧಿಸಿದ ಆದೇಶವನ್ನು ಶ್ರೀಮತಿ ಅರುಣಕುಮಾರಿ ಟಿ.ರವರನ್ನು ಪ್ರಾಂಶುಪಾಲರಾಗಿ ಮುಂದುವರೆಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಗ್ರಹಿಸುತ್ತದೆ, ಒಂದು ವೇಳೆ ಆದೇಶ ಹಿಂಪಡೆಯದೆ ಇದ್ದಲ್ಲಿ, ಎಬಿವಿಪಿ ಬೃಹತ್ ಮಟ್ಟದಲ್ಲಿ ಜಿಲ್ಲೆಯ ಎಲ್ಲಾ ಶಾಖೆಗಳಲ್ಲಿ ಹೋರಾಟ ಮಾಡುತ್ತೆವೆ ಎಂದು ವಿದ್ಯಾರ್ಥಿಗಳ ಮೂಲಕ ಮನವಿಯನ್ನು ಮಾನ್ಯ ಉಪ ತಹಸಿಲ್ದಾರ್ ಶರಬಸವ ಸರ್ ಕೆಎಸ್ ವರ್ಕರ್ ಶ್ರೀಶೈಲ ಮಲ್ಲಿಕಾರ್ಜುನ ಇವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕಾಲೇಜು ಪ್ರಾಂಶುಪಾಲರು ಉಪಸ್ಥಿತರಿದ್ದರು.
ವರದಿ – ಸೋಮನಾಥ ಹೆಚ್ ಎಮ್