ಕರ್ನಾಟಕ ಪತ್ರಕರ್ತರ ಸದಸ್ಯತ್ವ ಕಾರ್ಡಗಳ ಪಡೆಯಲು ಮುಂದಾಗಿ : ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್.
ಯಲಬುರ್ಗಾ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪತ್ರಕರ್ತರದ ಸಭೆ ಕರೆಯಲಾಯಿತು ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್ ಮಲ್ಲೀಕಾರ್ಜುನ ಹೊಸ್ಕೇರಾ ಮಾತನಾಡಿ ಕರ್ನಾಟಕ ಪತ್ರಕರ್ತರ ಸಂಘವು ಇಡೀ ರಾಜ್ಯಾದ್ಯಂತ ಪತ್ರಕರ್ತರಿಗೆ ಒಳ್ಳೆಯ ರೀತಿಯ ಸಹಾಯ ಸಹಕಾರ ನೀಡುತ್ತಾ ಬಂದಿದೆ ಈಗಾಗಲೇ ದೇಶಾದ್ಯಂತ ಕರ್ನಾಟಕ ಪತ್ರಕರ್ತರು ಮತ್ತು ಪತ್ರಿಕಾ ವಿತರಕರು ನಮ್ಮ ಸಂಘದ ಸದಸ್ಯತ್ವ ಪಡೆಯುವಲ್ಲಿ ಮುಂಚುಣಿಯಲ್ಲಿದ್ದಾರೆ. ಕರ್ನಾಟಕ ಪತ್ರಕರ್ತರ ಸಂಘ ರಾಜ್ಯದಲ್ಲಿ ಅಷ್ಟೇ ಅಲ್ಲ ನಮ್ಮ ಸಂಘಟನೆ ದೇಶಾದ್ಯಂತ ಇದೆ ಪತ್ರಕರ್ತರಿಗೆ ಸಹಾಯ ಸಹಕಾರ ನೀಡುವುದರಿಂದ ನಮ್ಮ ಸಂಘವು ದೇಶದಲ್ಲಿ ಪತ್ರಕರ್ತರು ಸದಸ್ಯತ್ವ ಪಡೆದು ಕೊಳ್ಳುತಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸದಸ್ಯರನ್ನೋಳಗೊಂಡು ಎರಡನೇ ಸ್ಥಾನ ಪಡೆದಿದೆ ಎಂದು ಹೇಳಿದರು. ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾಗ ಅಥವಾ ಪ್ರಯಾಣದ ವೇಳೆ ಏನಾದರು ಅನಾಹುತ ಸಂಭವಿಸಿದರೆ ಚಿಕಿತ್ಸೆಗೆ ಸಹಾಯಧನವನ್ನು ನೀಡುತ್ತದೆ ಈಗಾಗಲೆ ರಾಜ್ಯಾದ್ಯಂತ 70 ಜನ ಪತ್ರಕರ್ತರಿಗೆ ಪ್ರೋತ್ಸಾಹದನ ನೀಡಿದೆ ಇಂತಹ ಸೌಲಭ್ಯ ಯಾವುದೇ ಪತ್ರಕರ್ತರ ಸಂಘಗಳಲ್ಲಿ ಇಲ್ಲವೆಂದು ಹೇಳಿದರು. ದಿನನಿತ್ಯ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ಮತ್ತು ಪತ್ರಿಕಾ ವಿತರಕರಿಗೆ ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರು ಕಾರ್ಯನಿರ್ವಹಿಸುವ ಸಮಯದಲ್ಲಿ ಅಥವಾ ಅಪಘಾತವಾದರೆ ಚಿಕಿತ್ಸೆಗಾಗಿ 4 ಲಕ್ಷ ರೂಪಾಯಿ ಜಿವ ವಿಮೆ ಯೋಜನೆ ಜಾರಿಗೆ ತಂದಿದೆ, ಪತ್ರಕರ್ತರು ನಮ್ಮ ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯತ್ವ ಪಡೆಯಲು ಮುಂದಾಗಬೇಕು ವಿವಿಧ ಸೌಲಭ್ಯ ಪಡೆದು ಕೊಳ್ಳಬೇಕು ಎಂದರು. ಇದೇ ವೇಳೆ ಸಂಘದ ವತಿಯಿಂದ ಪತ್ರಕರ್ತರಿಗೆ ನವೀಕರಣಗೊಂಡ ಕಾರ್ಡ್ ವಿತರಣೆ ಮಾಡಲಾಯಿತು. ನಂತರ ಪತ್ರಕರ್ತ ಶರಣಬಸಪ್ಪ ದಾನಕೈ ಅವರು ನಮ್ಮ ಕರ್ನಾಟಕ ಪತ್ರಕರ್ತರ ಸಂಘದ ನೂತನ ಸದಸ್ಯತ್ವ ಪಡೆದುಕೊಂಡರು ಕರ್ನಾಟಕ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷರ ಖಾಜಾವಲಿ ಜರಕುಂಟಿ, ಪ್ರಧಾನ ಕಾರ್ಯದರ್ಶಿ ಮಲ್ಲೀಕಾರ್ಜುನ ಹಡಪದ,ಸಂಘಟನಾ ಕಾರ್ಯದರ್ಶಿ ಶ್ರೀ ಕಾಂತಗೌಡ ಮಾಲಿಪಾಟೀಲ, ಸದಸ್ಯರುಗಳಾದ ಚನ್ನಬಸಪ್ಪ ಇಟಗಿ, ಹುಸೇನ್ ಸಾಬ ಮೋತೆಖಾನ್, ಗುರುಬಸಯ್ಯ ಜಡಿಮಠ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ – ಹುಸೇನಬಾಷ ಮೋತೆಖಾನ್