ತಾವರಗೇರಾ ಪಟ್ಟಣದ ಎಎಪಿ ಕಾರ್ಯಕರ್ತರಿಂದ ಇಂದು ಸಂವಿಧಾನ ಸಮರ್ಪಣಾ ದಿನ ಹಾಗೂ 10ನೇ ವಾರ್ಷಿಕೋತ್ಸವವನ್ನು ಸರಳವಾಗಿ ಆಚರಿಸಲಾಯಿತು.
ಎಎಪಿ ತಾವರಗೇರಾ ಕಾರ್ಯಕರ್ತರಿಂದ ಇಂದು 26/11/2022 ಸಂವಿಧಾನ ಸಮರ್ಪಣಾ ದಿನ ಮತ್ತು ಆಮ್ ಆದ್ಮಿ ಪಕ್ಷದ ಸಂಸ್ಥಾಪನಾ ದಿನದ ಪ್ರಯುಕ್ತ ಇಂದು ತಾವರಗೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿಂದು ಹಾಲು/ಹಣ್ಣು ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ಆಚರಿಸಲಾಯಿತು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಎಎಪಿ ಕಾರ್ಯಕರ್ತರಿಂದ ಸಂವಿಧಾನ ಸಮರ್ಪಣಾ ದಿನ ಹಾಗೂ ಆಮ್ ಆದ್ಮಿ ಪಕ್ಷದ 10ನೇ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸ್ವತಂತ್ರ ಭಾರತ ಆಚರಿಸುತ್ತಿರುವ ರಾಷ್ಟ್ರೀಯ ದಿನಾಚರಣೆಗಳಲ್ಲಿ ನವಂಬರ್ 26 ಸಹ ಪ್ರಾಧಾನ್ಯತೆ ಪಡೆದಿರುವುದು, ಭಾರತದ ಸಂವಿಧಾನದ ಬಗ್ಗೆ ಜನಸಾಮಾನ್ಯರಲ್ಲಿರುವ ವಿಶ್ವಾಸ, ನಂಬಿಕೆ ಮತ್ತು ಅಪಾರ ಗೌರವದ ಸಂಕೇತವಾಗಿಯೇ ಕಾಣುತ್ತದೆ. ಸಂವಿಧಾನ ಪೀಠಿಕೆಯನ್ನು ಪ್ರತಿಜ್ಞಾವಿಧಿಯಂತೆ ಸ್ವೀಕರಿಸುವ ಪರಿಪಾಠ ಸಾರ್ವಜನಿಕ ವಲಯದಲ್ಲಿ ವ್ಯವಸ್ಥಿತವಾಗಿ ಬೆಳೆದುಬಂದಿದ್ದು, ಸಂವಿಧಾನದ ಮೂಲ ಆಶಯಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರೂ ಸಹ ಇಂದು ಅನಿವಾರ್ಯತೆಯಿಂದಲೋ, ಅವಶ್ಯಕತೆಗನುಗುಣವಾಗಿಯೋ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿಯನ್ನು ಸ್ವೀಕರಿಸುವ ಸನ್ನಿವೇಶ ಸೃಷ್ಟಿಯಾಗಿದೆ. ಮತಾಚರಣೆಯ ರೀತಿ ಪ್ರತಿಯೊಂದು ಸಭೆ ಸಮಾರಂಭಗಳಲ್ಲೂ ನಡೆಯುತ್ತಿರುವ ಈ ಪ್ರಕ್ರಿಯೆ ಬದಲಾಗುತ್ತಿರುವ ಭಾರತದಲ್ಲಿ ಸಂವಿಧಾನ ಮತ್ತು ಸಾಂವಿಧಾನಿಕ ಆಶಯಗಳು ನಾಗರಿಕರ ನಡುವೆ ಬೇರೂರಬೇಕಾದ ಅವಶ್ಯಕತೆಯನ್ನೂ ಒತ್ತಿ ಹೇಳುತ್ತದೆ. ತಮ್ಮ ಕಣ್ಣೆದುರಿನಲ್ಲೇ ತಾವು ಗೌರವಿಸುವ ಸಂವಿಧಾನದ ಮೂಲ ಆಶಯಗಳು ಸಂವಿಧಾನವನ್ನು ನಾವು ಚರಿತ್ರೆಯ ಒಂದು ಅಮೂಲ್ಯ ಗ್ರಂಥ ಎಂದು ಭಾವಿಸಿರುವುದು ಸಹಜವೇ. ಆದರೆ ಇದಕ್ಕಿಂತಲೂ ಮಿಗಿಲಾಗಿ ಅದು ಭವಿಷ್ಯ ಭಾರತದ ದಿಕ್ಸೂಚಿ ಗ್ರಂಥ ಎನ್ನುವುದನ್ನೂ ಮನಗಾಣಬೇಕಿದೆ. ಸಂವಿಧಾನವನ್ನು ಭೂತದಲ್ಲಿಟ್ಟು ನರ್ತಿಸುವುದಕ್ಕಿಂತಲೂ ಹೆಚ್ಚಾಗಿ, ಭವಿಷ್ಯದತ್ತ ಮುಖ ಮಾಡಿರುವ ಭಾರತೀಯ ಸಮಾಜದ ದಿಕ್ಸೂಚಿಯಂತೆ ಭಾವಿಸುವುದು ಇಂದಿನ ತುರ್ತು ನವಂಬರ್ 26ರಂದು ದೇಶಾದ್ಯಂತ ಪಠಿಸಲಾಗುವ “ ಸಂವಿಧಾನ ಪೀಠಿಕೆ ”ಯಲ್ಲಿನ ಪ್ರತಿಯೊಂದು ಅಕ್ಷರದ ಹಿಂದೆ ಒಂದು ಧ್ಯೇಯವಿದೆ. ಪ್ರತಿಯೊಂದು ಆಶಯ ವಾಕ್ಯದ ಹಿಂದೆಯೂ ಭಾರತದ ಭವಿಷ್ಯ ಅಡಗಿದೆ. ಸಮ ಸಮಾಜದ ಕನಸು ಹೊತ್ತು ರೂಪಿಸಲಾಗಿರುವ ಭಾರತದ ಸಂವಿಧಾನವನ್ನು ಎದೆಗೊತ್ತಿಕೊಳ್ಳುವ ಪ್ರತಿಯೊಬ್ಬ ಭಾರತದ ಪ್ರಜೆಯೂ, ಆಳುವ ವ್ಯವಸ್ಥೆಯ ಪ್ರತಿಯೊಬ್ಬ ಪ್ರತಿನಿಧಿಯೂ, ಸಂವಿಧಾನದ ಈ ಆಶಯಗಳನ್ನು ಸಾಕಾರಗೊಳಿಸಲು ಶ್ರಮಿಸಿದರೆ ಮಾತ್ರವೇ ನವಂಬರ್ 26ರ ಆಚರಣೆ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಇಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಹಾಗೂ 16ನೇ ವಾರ್ಡಿನ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಜೊತೆಗೆ ಸಂವಿಧಾನ ಸಮರ್ಪಣಾ ದಿನ ಹಾಗೂ ಆಮ್ ಆದ್ಮಿ ಪಕ್ಷದ 10ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಮಾನ್ಯ ಡಾ॥ಜಿ.ಎಸ್.ಪಾಟೀಲ್ ರವರು ಹಾಗೂ ನರ್ಸಗಳು ಜೊತೆಗೆ 13 ನೇ ಅಂಗನವಾಡಿ ಕೇಂದ್ರದ ಶಿಕ್ಷಕಿಯಾದ ಶ್ರೀಮತಿ ಲಕ್ಷ್ಮಿ ದೇವಿ ಸಿದ್ದಾಪೂರ ಎಎಪಿ ಕಾರ್ಯಕರ್ತರಾದ ರವಿಕುಮಾರ ಹೊಸಮನಿ ತಾಲೂಕ ಅಧ್ಯಕ್ಷರು. ಬಾಲರಾಜ ಯಾದವ್ ತಾಲೂಕ ಪ್ರಧಾನ ಕಾರ್ಯದರ್ಶಿ. ಹಾಗೂ ಯಮನೂರಪ್ಪ ಬಿಳೆಗುಡ್ಡ ತಾವರಗೇರಾ ಹೋಬಳಿ ಘಟಕದ ಅಧ್ಯಕ್ಷರು. ಜೊತೆಗೆ ಎಎಪಿ ಕಾರ್ಯಕರ್ತರು ಪಾಲುಗೊಂಡಿದ್ದರು. ಹಾಗೂ ಸಮಾಜ ಸೇವಕರು. ಸ್ವತಂತ್ರ ಹೋರಾಟಗಾರರು ಉಪಸ್ಥಿತರಿದ್ದರು.
ವರದಿ :- ಸಂಪಾದಕೀಯಾ