*ಆಮ್ ಆದ್ಮಿ ಪಾರ್ಟಿಯ ಎಸ್ ಟಿ ಘಟಕದ ಅಧ್ಯಕ್ಷರಾಗಿ ಶರಣು ನಾಯಕ ನೇಮಕ*
ಆಮ್ ಆದ್ಮಿ ಪಾರ್ಟಿಯ ಗಂಗಾವತಿ ತಾಲೂಕ ಎಸ್ ಟಿ ಘಟಕದ ಅಧ್ಯಕ್ಷರನ್ನಾಗಿ ಶರಣ ನಾಯಕ್ ಹೇಮಗುಡ್ಡ ಇವರನ್ನು ನೇಮಕ ಮಾಡಲಾಗಿದೆ ಎಂದು ತಾಲೂಕ ಅಧ್ಯಕ್ಷ ಶರಣಪ್ಪ ಸಜ್ಜೀಹೊಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶರಣು ನಾಯಕ್ ಮಾತನಾಡಿ ಆಮ್ ಆದ್ಮಿ ಪಕ್ಷ ನನ್ನಂಥ ಸಾಮಾನ್ಯ ಯುವಕನಿಗೆ ತಾಲೂಕ ಎಸ್ ಟಿ ಘಟಕದ ಅಧ್ಯಕ್ಷ ಹುದ್ದೆಯಂತಹ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಕ್ಕೆ ಧನ್ಯವಾದಗಳು ನಾನು ಪಕ್ಷವನ್ನು ಗಂಗಾವತಿಯಲ್ಲಿ ಅಧಿಕಾರಕ್ಕೆ ತರಲು ನಿರಂತರವಾಗಿ ಶ್ರಮಿಸುವೆ ಮತ್ತು ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳುವೆ ಎಂದು ಅಧಿಕಾರ ಪುತ್ರ ಸ್ವೀಕರಿಸಿ ಶರಣು ನಾಯಕ್ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗಾಳ ವಕೀಲರಾದ ಹನುಮೇಶ್, ಬೋಗೆಶ್ ಆನೆಗುಂದಿ ರಾಘು ಕಡೆ ವಾಗಿಲು, ಬಸವರಾಜ್, ರಾಘವೇಂದ್ರ ಸಿದ್ದಿಕೆರೆ, ಬೇವಿನಾಳಪ್ಪ ಇತರರು ಇದ್ದರು.
ವರದಿ – ಸಂಪಾದಕೀಯಾ