ಕೊಪ್ಪಳ ಜಿಲ್ಲಾ ವಕ್ಫ ಮಂಡಳಿ/ರಬ್ಬಾನಿ ಖಬರಸ್ಥಾನ ಕಮೀಟಿ ವತಿಯಿಂದ ತಾವರಗೇರಾ ಪಟ್ಟಣದ ಕಡು/ಬಡವರಿಗೆ ವಿತರಣೆ ಮಾಡಿದ ಕಿಟ್.
ಕೊಪ್ಪಳ ಜಿಲ್ಲಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ವಕ್ಫ್ ಭೋರ್ಡ ಮಂಡಳಿ/ರಬ್ಬಾನಿ ಖಬರಸ್ಥಾನ ಕಮೀಟಿ ವತಿಯಿಂದ ರಂಜಾನ್ ಹಾಗೂ ಕೋವಿಡ್ 19 ರ ಲಾಕ್ ಡೌನ್ ಒಡೆತಕ್ಕೆ ಕಡು/ಬಡವರು ನಲುಗಿದ್ದು, ಇದರ ಅಂಗವಾಗಿ ತಾವರಗೇರಾ ಪಟ್ಟಣದ ವಕ್ಫ್ ಬೋರ್ಡ ಕಮೀಟಿ ಹಾಗೂ ಮಂಡಳಿ/ರಬ್ಬಾನಿ ಖಬರಸ್ಥಾನ ಕಮೀಟಿ ಒಗ್ಗೂಡಿ ಜಿಲ್ಲೆಯ ಉಸ್ತುವಾರಿಯಾದ ವಕ್ಫ್ ಬೋರ್ಡ ಇಲಾಖೆಯಿಂದ ಸುಮಾರು 100 ಬಡ ಹಾಗೂ ನಿಗರ್ತಿಕ ಕುಟುಂಬಗಳಿಗೆ ಅಂದರೆ ಒಂದು ಕುಟುಂಬಕ್ಕೆ 1100 ರೂ/ಗಳಂತೆ ಕಿರಾಣಿ ಮಾಲ್ (ಸಾಮಾನು) ಗಳನ್ನು ಕುಡಿಕರಣ ಮಾಡಿ ಸುಮಾರು 50 ಮುಸ್ಲೀಂ ಬಡ ಕುಟುಂಬಗಳಿಗೆ ಜೊತೆಗೆ 50 ಹಿಂದು ಬಡ ಕುಟುಂಬಗಳಿಗೆ ಕಿರಾಣಿ ಮಾಲ್ (ಸಾಮಾನು) ಗಳ ಕಿಟ್ ವಿತರಣೆ ಮಾಡಲು ಮುಂದಾಗಿ ಜಿಲ್ಲೆಯ ವಕ್ಫ್ ಬೋರ್ಡ ಅಧಿಕಾರಿಗಳ ಆದೇಶದಂತೆ ಬಡ ಹಾಗೂ ನಿಗರ್ತಿಕ ಕುಟುಂಬಗಳಿಗೆ ಈ ಕಿಟ್ ತಲುಪಲಿ ಎಂದು ತಮ್ಮ ವಕ್ಫ್ ಬೋರ್ಡ ಇಲಾಖೆಯಿಂದ ಸುಮಾರು ಒಂದು ಲಕ್ಷ 10 ಸಾವಿರಾ ರೂ/ಗಳು ನೀಡುವ ಮೂಲಕ ಮಾನವಿಯತೆಗೆ ಹೆಸರಾಗಿದ್ದು. ಜಿಲ್ಲಾ ವಕ್ಫ್ ಬೋರ್ಡ ಇಲಾಖೆಯ ಸಹಕಾರದಿಂದು ಇಂದು ತಾವರಗೇರಾ ಪಟ್ಟಣದ ನಾನಾ ಭಾಗದಲ್ಲಿ 4ನೇ ವಾರ್ಡ, 10ನೇ, 14,15,16,17 ನೇ ವಾರ್ಡಗಳಲ್ಲಿ. ಒಂದು ವಾಹನದ ಮೂಲಕ ಬಡ ಹಾಗೂ ನಿಗರ್ತಿಕ ಕುಟುಂಬಗಳ ಮನೆ/ಮನೆಗೆ ಹೋಗುವ ಮೂಲಕ ಜೊತೆಗೆ ಬಡ ಹಾಗೂ ನಿಗರ್ತಿಕ ಕುಟುಂಬಗಳ ಕುಟುಂಬಸ್ಥರನ್ನು ಒಂದು ಕಡೆಗೆ ಬರ ಮಾಡಿಕೊಂಡು,
ಈ ನಿಗರ್ತಿಕ ಕುಟುಂಬಗಳಿಗೆ ಕಿರಾಣಿ ಮಾಲ್ (ಸಾಮಾನು) ಗಳ ಕಿಟ್ ವಿತರಣೆ ಮಾಡಲು ಮುಂದಾಗಿದ್ದು. ತಾವರಗೇರಾ ಪಟ್ಟಣದ ವಕ್ಫ್ ಬೋರ್ಡ ಮಂಡಳಿ/ರಬ್ಬಾನಿ ಖಬರಸ್ಥಾನ ಕಮೀಟಿಯು ಜಿಲ್ಲೆಗೆ ಮಾದರಿಯ ರೂಪದಲ್ಲಿ ಕಂಗಳಿಸುತ್ತಿದ್ದು, ನಿಜಕ್ಕೂ ನಿಜವಾದ ಬಡ ಹಾಗೂ ನಿಗರ್ತಿಕ ಕುಟುಂಬಗಳು ಈ ಕೋವಿಡ್ 19 ರ ಲಾಕ್ ಡೌನ್ ಒಡೆತಕ್ಕೆ ನಲುಗಿದ್ದು, ಈ ಕುಟುಂಬಗಳಿಗೆ ಒಣಗಿದ ಸಸ್ಸಿಗಳಿಗೆ ನೀರು ಬಿಟ್ಟಂತ್ತಾಗಿದೆ. ಈ ವಿತರಣೆ ಕಾರ್ಯಕ್ರಮದಲ್ಲಿ ರಬ್ಬಾನಿ ಖಬರಸ್ಥಾನ ಕಮೀಟಿಯ ಮಾಜಿ ಕಾರ್ಯದರ್ಶಿಗಳಾದ ರಾಜಾನಾಯಕ, ಯಮನೂರಪ್ಪ ಬಿಳೆಗುಡ್ಡ, ಶರಣಪ್ಪ ಕಲಾಲ್, ಶ್ಯಾಮೀದಸಾಬ ಮೆಣೇದಾಳ, ಮಂಜುನಾಥ್ ಎಸ್.ಕೆ. ಶಾಬುದ್ದೀನ್, ಹುಸೇನ್ ಎಲಿಗಾರ್, ಇತರರು ಪಾಲುಗೊಂಡಿದ್ದರು.
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ.