ಸಾರ್ವಜನಿಕ ಸಾಮೂಹಿಕ ಮಹಿಳಾ ಶೌಚಾಲಯ ದಿಢೀರ್ ತೆರವು, ಮಹಿಳೆಯರಿಂದ ವಿನೂತ ಪ್ರತಿಭಟನೆ.

Spread the love

ಸಾರ್ವಜನಿಕ ಸಾಮೂಹಿಕ ಮಹಿಳಾ ಶೌಚಾಲಯ ದಿಢೀರ್ ತೆರವು, ಮಹಿಳೆಯರಿಂದ ವಿನೂತ ಪ್ರತಿಭಟನೆ.

ವಿಜಯನಗರ  ಜಿಲ್ಲೆ ಕೂಡ್ಲಿಗಿ, ಪಟ್ಟಣದ 11ನೇವಾರ್ಡ್ ನಲ್ಲಿದ್ದ, ಸಾರ್ವಜನಿಕ ಸಾಮೂಹಿಕ ಮಹಿಳಾ ಶೌಚಾಯವನ್ನು ಏಕಾ ಏಕಿ ತೆರವುಗೊಳಿಸಿದ್ದು. 9,10,11ನೇ ವಾರ್ಡ್ ಗಳ ಬಹುತೇಕ ಬಡ ಮಹಿಳೆಯರು, 11ನೇವಾರ್ಡ್ ನಲ್ಲಿರುವ ಸದರಿ ಶೌಚಾಲಯವನ್ನೇ ಶೌಚಕ್ಕಾಗಿ ಅವಲಂಬಿಸಿದ್ದರು. ಆದರೆ ಪಪಂ ಅಧಿಕಾರಿ ಅದನ್ನು ದಿಢೀರ್ ತೆರವುಗೊಳಿಸಿದ್ದಾರೆಂದು ಮಹಿಳೆಯರು ದೂರಿದ್ದಾರೆ. ಇದರಿಂದಾಗಿ  ಶೌಚಕ್ಕಾಗಿ ತೀವ್ರ ಪರದಾಡಬೇಕಾಗಿದೆ, ಹಾಗೂ ತಮಗೆ ಬಯಲು ಶೌಚಾಲಯ ಪದ್ದತಿ ಅನಿವಾರ್ಯವಾಗಿದೆ.  ಇದಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ಕಾರಣ ಎಂದು, ಮೂರು ವಾರ್ಡ್ ಗಳ ಹಲವು ಮಹಿಳೆಯರು ದೂರಿದ್ದಾರೆ. ಪ್ರತಿಭಟನಾ ನಿರತ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತೆರವಾದ ವಾರ್ಡ್ ನ ಪಪಂ ಸದಸ್ಯರು ಮಹಿಳೆಯರಾಗಿದ್ದಾರೆ. ಅಷ್ಟೇ ಏಕೆ.? ಅಧ್ಯಕ್ಷರು ಮಹಿಳೆ,ಉಪಾಧ್ಯಕ್ಷರು ಮಹಿಳೆ, ಒಟ್ಟು ಸದಸ್ಯರಲ್ಲಿ ಸಮಪಾಲು ಮಹಿಳಾ ಸದಸ್ಯರಿದ್ದಾರೆ.   ಆದರೆ ಪರಿಶಿಷ್ಟ ಪಂಗಡದ ಬಡ ಕೂಲಿ ರೈತ ಮಹಿಳೆಯರಿರುವ, ಈ ಮೂರು ವಾರ್ಡ್ ಗಳ ಮಹಿಳೆಯರ ಅಳಲನ್ನು ಆಲಿಸಲು. ಒಬ್ಬ ಮಹಿಳಾ ಸದಸ್ಯೆ ಕೂಡ ಮುಂದೆ ಬಾರದಿರುವುದು, ಖಂಡನೀಯ ಹಾಗೂ ಅಮಾನವೀಯ ಸಂಗತಿಯಾಗಿದೆ ಇದನ್ನು ಖಂಡಿಸುತ್ತೇವೆ ಇದು ದುರಂತವೇ ಸರಿ. ಇದು ಮಹಿಳಾ ಸದಸ್ಯರ ಅಸಹಾಯಕತೆಗೆ ಸಾಕ್ಷಿಯಾಗಿದೆ, ಮತ್ತು ಮಹಿಳಾ ಸದಸ್ಯೆಯರ ಹೆಸರಲ್ಲಿ, ಅವರ ಮನೆಯ ಗಂಡಸರೇ ದರ್ಭಾರು ನಡೆಸುತ್ತಿರುವುದಕ್ಕೆ ಭಲವಾದ ಸಾಕ್ಷಿಯಾಗಿದೆ ಎಂದು ಹೋರಾಟದ ಮುಖಂಡರು ಆಕ್ರೋಶ ವ್ಯೆಕ್ತಪಡಿಸಿದ್ದಾರೆ. ಶೌಚಾಲಯವನ್ನು ತೆರವು ಗೊಳಿಸುವ ಮುನ್ನ, ಪಪಂ ಅಧಿಕಾರಿಗಳು ಅನುಸರಿಸಬೇಕಾದ ಕನಿಷ್ಠ ನಿಯಮಗಳನ್ನ ಪಾಲಿಸಿಲ್ಲ ಎಂದು ನೊಂದ ಮಹಿಳೆಯರು ಆರೋಪಿಸಿದ್ದಾರೆ, ವಾರ್ಡ್ ಸಭೆ ನಡೆಸಿ ಮಹಿಳೆಯರ ಸಲಹೆ ಸೂಚನೆ ಆಲಿಸಬೇಕಿತ್ತು. ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕಿತ್ತು, ಬೇರೆಡೆ ಹೊಸದೊಂದು ಮಹಿಳಾ ಸಾರ್ವಜನಿಕ ಶೌಚಾಲಯ ನಿರ್ಮಿಸಿದ ನಂತರವಷ್ಟೇ. ಸದರಿ ಶೌಚಾಲಯ ತೆರವು ಗೊಳಿಸುವಂತೆ ಪಪಂ ಸಭೆಯಲ್ಲಿ, ತೀರ್ಮಾನಿಸಲಾಗಿತ್ತು ಆದರೆ ಇದಾವುದನ್ನೂ ಪಾಲಿಸದೇ ಏಕಾ ಏಕಿ ಪಪಂ ಅಧಿಕಾರಿ ಹಾಗೂ ಕೆಲ  ಜನಪ್ರತಿನಿಧಿಗಳು,ಈ ರೀತಿಯಲ್ಲಿ ತಮ್ಮ ಅಂಧಃ ದರ್ಭಾರು ನಡೆಸುತ್ತಿದ್ದಾರೆ. ಮುಖ್ಯಾಧಿಕಾರಿ ಕೇವಲ  ಬೆದರು ಗೊಂಬೆಯಾಗಿದ್ದಾರೆ, ಅವರು ಕೆಲ ಜನಪ್ರತಿನಿಧಿಗಳ ಕೀಲಿ ಗೊಂಬೆಯಂತೆ ವರ್ತಿಸುತ್ತಿದ್ದಾರೆಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಪಂ ಅವ್ಯವಸ್ಥೆಯ ವಿರುದ್ಧ ಮಾಧ್ಯಮಗಳ ಕಚೇರಿಗೆ ಅಗತ್ಯ ಸಾಕ್ಷಿ ಹಾಗೂ ಪುರಾವೆ ಸಮೇತ ದೂರು ನೀಡಲಾಗುವುದು. ಕೆಲವರು ತಮ್ಮ ಮನೆಯ ಮಹಿಳಾ ಸದಸ್ಯರ ಹೆಸರಲ್ಲಿ ಪಪಂ ಕಚೇರಿಯಲ್ಲಿ, ಮಹಿಳೆಯರ ಬದಲಿಗೆ ಅವರ ಮನೆಯ ಗಂಡಸರು ಪಪಂ ಸದಸ್ಯರಂತೆ ದರ್ಭಾರು ನಡೆಸುತ್ತಿದ್ದಾರೆ. ಈ ಮೂಲಕ ಮಹಿಳೆಯರನ್ನ ಪರೋಕ್ಷವಾಗಿ ಶೋಷಣೆ ಮಾಡಲಾಗುತ್ತಿದೆ.ಇದರ ವಿರುದ್ಡ ಕಾನೂನು ಹೋರಾಟ ನಡೆಸಲಾಗುವುದು.ಸಂಬಂಧಿಸಿದ ಇಲಾಖೆಯ ಉನ್ನತಾಧಿಕಾರಿಗಳಲ್ಲಿ, ಮಾಧ್ಯಮಗಳ ಕೇಂದ್ರ ಕಚೇರಿಗಳಿಗೆ ಅಗತ್ಯ ಸಾಕ್ಷಾಧಾರಗಳ ಸಮೇತ ದೂರು ನೀಡಲಾಗುವುದು. ಇದಕ್ಕೆ ಸಹಕರಿಸುತ್ತಿರುವ ಅಧಿಕಾರಿಯ ವಿರುದ್ಧ ,ರಾಜ್ಯ ಮಟ್ಟದ ಮೇಲಾಧಿಕಾರಿಗಳಲ್ಲಿ ದೂರು ನೀಡಲಾಗುವುದೆಂದು ಪ್ರತಿಭಟನಾಕರರು ತಿಳಿಸಿದ್ದಾರೆ.    ಈ ದುರಾವ್ಯವಸ್ಥೆಯನ್ನ ಗಮನಹರಿಸಿ, ಪುನಃ ತೆರವುಗೊಳಿಸಿದಂತಹ ಸ್ಥಳದಲ್ಲಿಯೇ ಶೌಚಾಲಯವನ್ನು ನಿರ್ಮಾಣ ಮಾಡಿಕೊಡಬೇಕೆಂದು. ಮಹಿಳೆಯರು ವೃದ್ಧರು  ಹಕ್ಕೊತ್ತಾಯ ಮಾಡಿದ್ದಾರೆ. ಪಪಂ ವತಿಯಿಂದ ತೆರವಾಗಿದ್ದ ಸ್ಥಳದಲ್ಲಿಯೇ  ಶೌಚಾಲಯವನ್ನು, ಶೀಘ್ರದಲ್ಲಿ ಮರುಸ್ಥಾಪನೆ ಮಾಡದಿದ್ದರೆ. ಸಿಐಟಿಯು ,ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಹಾಗೂ ವಿವಿದ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ. ತಾಲೂಕು ಆಡಳಿತ ಸೌಧ ಆವರಣದಲ್ಲಿ,ಹಾಗೂ ಪಟ್ಟಣ ಪಂಚಾಯ್ತಿ ಕಚೇರಿ ಆವರಣದಲ್ಲಿ.  ಹೋರಾಟ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ. ಸಿಐಟಿಯು ಅಧ್ಯಕ್ಷ ಗುನ್ನಳ್ಳಿ ರಾಘವೇಂದ್ರ ಹಾಗೂ ಪದಾಧಿಕಾರಿಗಳು, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಸಂಚಾಲಕಿ ಭಾಗ್ಯಮ್ಮ ಹಾಗೂ ಪದಾಧಿಕಾರಿಗಳಾದ ವೇದಾವತಿ, ವನಜಾಕ್ಷಿ ,ಅನಿತಾ ರುಕ್ಮಿಣಿ ,ನೇತ್ರಾವತಿ ,ಗಂಗಮ್ಮ ,,,ಅಂಜಿನಮ್ಮ ,ರಂಗಮ್ಮ ,ಭಾಗ್ಯ,ಅನುಶ್ರೀ ಸೇರಿದಂತೆ ಮತ್ತಿತರರು. ತಹಶಿಲ್ದಾರರಾದ ಟಿ. ಜಗದೀಶ್ ರವರಿಗೆ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಕ್ಕೊತ್ತಾಯ ಪತ್ರ ನೀಡಿದರು.

ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.

Leave a Reply

Your email address will not be published. Required fields are marked *