4ನೇ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖಾತ್ಯ ಜಾನಪದ ಗಾಯಕ ಶ್ರೀ ದೇವೇಂದ್ರಗೌಡ ಎಸ್ ಪೂಜಾರ ಮ್ಯಾದಿನೇರಿ ಆಯ್ಕೆ…..
ಇಟಗಿ ಉತ್ಸವದ ಸಾಂಸ್ಕೃತಿಕ ಸಮಿತಿಯಿಂದ ಬರುವ 2022 ಡಿಸೆಂಬರ್ 24 ಮತ್ತು 25ರಂದು 19 ನೇ ಬಾರಿಗೆ ನಡೆಯುವ ಇಟಗಿ ಉತ್ಸವದಲ್ಲಿ 24 ರಂದು ನಡೆಯುವ 4 ನೇ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಶ್ರೀ ದೇವೇಂದ್ರಗೌಡ ಎಸ್ ಪೂಜಾರ ಮ್ಯಾದಿನೇರಿ ಅವರನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು….ಇಂದು ಕೊಪ್ಪಳದಲ್ಲಿ ನಡೆದ ಉತ್ಸವದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಶ್ರೀ ದೇವೇಂದ್ರಗೌಡ ಎಸ್ ಪೂಜಾರ ಮ್ಯಾದಿನೇರಿ ಅವರು ಸುಗಮ ಸಂಗೀತ ತತ್ವಪದ ಜನಪದ ಗೀತೆಗಳ ಗಾಯನದ ಮೂಲಕ ಜನಪದ ಕ್ಷೇತ್ರದಲ್ಲಿ ತಮ್ಮನ್ನು ತೋಡಗಿಸಿಕೊಂಡು ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ ಇಟಗಿ ಉತ್ಸವ. ಕೊಪ್ಪಳ ಜಿಲ್ಲಾ ಉತ್ಸವ ಉತ್ಸವ ಆನೆಗುಂದಿ ಉತ್ಸವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಹುತೇಕ ಕಾರ್ಯಕ್ರಮಗಳಲ್ಲಿ ತಮ್ಮ ಗಾಯನದ ಮೂಲಕ ಪ್ರಖ್ಯಾತಿಯನ್ನು ಪಡೆದಿದ್ದಾರೆ ಇವರು ರಾಜ್ಯಮಟ್ಟದ ಅಂತರಾಷ್ಟ್ರೀಯ ಮಟ್ಟದ ಉತ್ಸವಗಳಲ್ಲಿ ತತ್ವಪದ ಹಾಗೂ ಜನಪದ ಗಾಯನದ ಮೂಲಕ ಹೆಸರುವಾಸಿಯಾಗಿದಾರೆ ಪ್ರತಿ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನೇಕ ಕಾರ್ಯಕ್ರಮಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೊರನಾಡು ಉತ್ಸವ ಮಾದಿನೂರು ಗ್ರಾಮೀಣ ಉತ್ಸವ.ಕೊಪ್ಪಳ ಜಿಲ್ಲಾ ಉತ್ಸವ ಅಡೂರು ಗ್ರಾಮೀಣ ಸಾಂಸ್ಕೃತಿಕ ಉತ್ಸವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಜನಪದ ಗಾಯನದ ಮೂಲಕ ಗ್ರಾಮೀಣ ಸೊಗಡಿನ ಈ ಜಾನಪದ. ತತ್ವಪದ ಉಳಿವಿಗಾಗಿ ಗ್ರಾಮೀಣ ಮಟ್ಟದಲ್ಲಿ ಇದ್ದುಕೊಂಡು ಈ ಗಾಯನ ಕಲೆಯನ್ನು ನೀಡುತ್ತಾ ಬಂದಿದ್ದಾರೆ ಸುಮಾರು 32ಕ್ಕೂ ಹೆಚ್ಚು ಕ್ಯಾಸೆಟ್ ಗಳಿಗೆ ಸಾಹಿತ್ಯ ರಚನೆಯನ್ನು ಮಾಡಿಕೊಟ್ಟ ಕೀರ್ತಿ ಇವರದು ಕಲಿಯುಗ ಪಾಂಡವರು ಕಿರು ಚಲನಚಿತ್ರದ ಮೂಲಕ ಚಲನಚಿತ್ರ ನಟರಾಗಿ ಗ್ರಾಮೀಣ ಪ್ರದೇಶದಲ್ಲಿ ನಾಟಕ ಆಡುವ ಮೂಲಕ ರಂಗಭೂಮಿ ನಟರಾಗಿ ನಾಟಕಗಳಿಗೆ ಸಂಗೀತ ಮತ್ತು ಸಾಹಿತ್ಯ ರಚನೆ ಗಳ ಮೂಲಕ ಗ್ರಾಮೀಣ ರಂಗಭೂಮಿಗೆ ಕೊಡುಗೆ ನೀಡಿದ್ದಾರೆ ಇವರ ಗಾಯನ ಕ್ಷೇತ್ರದ ಸೇವೆಗಾಗಿ ರಾಷ್ಟ್ರೀಯ ಅಂಬೇಡ್ಕರ್ ಫೆಲೋಶಿಪ್ ಕರ್ನಾಟಕ ಕಲಾ ರತ್ನ ಪ್ರಶಸ್ತಿ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ. ಸಿದ್ದಯ್ಯ ಪುರಾಣಿಕ ಪ್ರಶಸ್ತಿ. ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ. ಕರ್ನಾಟಕ ವಿಕಾಸ ಪ್ರಶಸ್ತಿ. ಕುವೆಂಪು ರಾಷ್ಟ್ರೀಯ ಸನ್ಮಾನ ಪ್ರಶಸ್ತಿ ಸಮಾಜ ಸೇವಾ ರತ್ನ ಪ್ರಶಸ್ತಿ ಶ್ರೀಕೃಷ್ಣದೇವರಾಯ ಪ್ರಶಸ್ತಿ ಇನ್ನು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಯಲಬುರ್ಗಾ ಕಲಾ ಸಂಘದ ಅಧ್ಯಕ್ಷರಾಗಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷರಾಗಿ ಅನೇಕ ಕಲಾಸಂಘಗಳಿಗೆ ಪದಾಧಿಕಾರಿಯಾಗಿ ಕಲಾವಿದರ ಪರವಾಗಿ ದುಡಿಯುತ್ತಿದ್ದಾರೆ ಇವರ ಜನಪದ ಗಾಯನ ಹಾಗೂ ಸುಗಮ ಸಂಗೀತ ಕ್ಷೇತ್ರದ ಅವರ ಸೇವೆಯನ್ನು ಪರಿಗಣಿಸಿ ಇಟಗಿ ಉತ್ಸವದಲ್ಲಿ ನಡೆಯುವ 4ನೇ ಜಾನಪದ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲಾಯಿತು. ಸೋಮವಾರದಂದು ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಶ್ರೀ ಮಹೇಶ್ ಬಾಬು ಸುರ್ವೆ ಅವರ ಅಧ್ಯಕ್ಷತೆಯಲ್ಲಿ ಈ ಆಯ್ಕೆಯನ್ನು ಮಾಡಲಾಯಿತು ಮಂಜುನಾಥ್ ಅಂಗಡಿ ಉಮೇಶ್ ಪೂಜಾರ ಸುಶೀಲಾ ಎಂ ಎಸ್ ಮಲ್ಲಯ್ಯ ಕೂಮಾರಿ. ಶರಣಪ್ಪ ಹಾದಿ ಗೋವಿಂದ ಮರಾಠಿ ಇತರರು ಭಾಗವಹಿಸಿದ್ದರು ಎಂದು ಪ್ರಕಟನೆಯಲ್ಲಿ ಮಹೇಶ್ ಬಾಬು ಸುರ್ವೆ ತಿಳಿಸಿದ್ದಾರೆ.
ವರದಿ – ಸಂಪಾದಕೀಯಾ