ಹನುಮ ಮಾಲಾಧಾರಿಗಳು ಮತ್ತು ಹನುಮ ಭಕ್ತರಿಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನೀರಿನ ಸೇವೆಯನ್ನು ಮತ್ತು ದಾಸೋಹದ ವ್ಯವಸ್ಥೆಯ ಸೇವೆಯನ್ನು ಮಾಡುವ ಮೂಲಕ ಭಗವಾನ್ ಶ್ರೀ ಆಂಜನೇಯನ ಕೃಪೆಗೆ ಪಾತ್ರರಾದರು.
ದೇಶದಾದ್ಯಂತ ವಿವಿಧ ಪ್ರದೇಶಗಳಿಂದ ಗಂಗಾವತಿಯ ಅಂಜನಾದ್ರಿಗೆ ಬಂದ ಹನುಮ ಮಾಲಾಧಾರಿಗಳು ಮತ್ತು ಹನುಮ ಭಕ್ತರಿಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನೀರಿನ ಸೇವೆಯನ್ನು ಮತ್ತು ದಾಸೋಹದ ವ್ಯವಸ್ಥೆಯ ಸೇವೆಯನ್ನು ಮಾಡುವ ಮೂಲಕ ಭಗವಾನ್ ಶ್ರೀ ಆಂಜನೇಯನ ಕೃಪೆಗೆ ಪಾತ್ರರಾದರು. ಆಮ್ ಆದ್ಮಿಯ ಮುಖಂಡರಲ್ಲಿ ಜಿಲ್ಲಾಧ್ಯಕ್ಷ ಹುಸೇನ್ ಸಾಬ್ ಗಂಗನಾಳ, ತಾಲೂಕಾಧ್ಯಕ್ಷರಾದ ಶರಣಪ್ಪ ಸಜ್ಜಿಹೊಲ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಬಸವರಾಜ್ ಮೇಗಳಮನಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಬಸವರಾಜ್, ಜಿಲ್ಲಾ ಖಜಾಂಚಿ ದೊಡ್ಡಬಸಪ್ಪ, ನಗರ ಘಟಕದ ಅಧ್ಯಕ್ಷ ಪರಶುರಾಮ್ ಒಡೆಯರ್, ಗ್ರಾಮೀಣ ಘಟಕದ ರಾಘವೇಂದ್ರ ಕಡೆ ಬಾಗಿಲು, ಬಸವರಾಜ್ ವಿರೂಪಣ್ಣ ಬಸ್ಸಮ್ಮ, ಮಾಧ್ಯಮ ಪ್ರತಿನಿಧಿ ರಾಘವೇಂದ್ರ ಸಿದ್ದಿಕೇರಿ , ಆಟೋ ಘಟಕದ ಚಂದ್ರು ವಗ್ಗ,ಮಂಜುನಾಥ್, ಭೋಗೇಶ್ ಆನೆಗುಂದಿ, ರವಿಕುಮಾರ್, ರಮೇಶ್, ಕುಮಾರ್ , ಹುಲಿಗೇಶ್, ಇತರರು ಭಾಗವಹಿಸಿದ್ದರು.