ಕೂಡ್ಲಿಗಿ:ಶೀಘ್ರವೇ ಶೌಚಾಲಯ ನಿರ್ಮಿಸಿ–ಮಹಿಳೆಯರ ಆಗ್ರಹ.
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ, ಪಟ್ಟಣದ 11ನೇ ವಾರ್ಡ್ ನಲ್ಲಿ, ಪಟ್ಟಣ ಪಂಚಾಯ್ತಿ ಯಿಂದ ಇತ್ತೀಚೆಗಷ್ಟೇ ತೆರವುಗೊಂಡ. ಸಾಮೂಹಿಕ ಮಹಿಳಾ ಶೌಚಾಲಯವನ್ನು, ಪುನಃ ಅದೇ ಸ್ಥಳದಲ್ಲಿಯೇ ಶೀಘ್ರವೇ ಶೌಚಾಲಯಗಳನ್ನು ನಿರ್ಮಿಸಬೇಕೆಂದು. 9,10,11ನೇ ವಾರ್ಡ್ ಗಳ ಹಲವು ಮಹಿಳೆಯರು, ಸ್ಥಳೀಯ ಆಡಳಿತಕ್ಕೆ ಈ ಮೂಲಕ ಆಗ್ರಹಿಸಿದ್ದಾರೆ. ಅವರು ಮಾತನಾಡಿದ್ದಾರೆ, ಶೌಚಾಲಯ ತರೆವುಗೊಳಿಸಿರುವ ಸ್ಥಳದಲ್ಲಿಯೇ ಪುನಃ ನಿರ್ಮಾಣ ಮಾಡುವವರೆಗೂ, ತಮ್ಮ ಹೋರಾಟ ಹಾಗೂ ಪ್ರತಿಭಟನೆ ನಿಲ್ಲದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಂಬಂಧಿಸಿದಂತೆ ಮೂರು ವಾರ್ಡ್ ಗಳ ನೂರಾರು ಬಡ ಮಹಿಳೆಯರು, ಸಮಾಜವಾದಿ ಮಹಿಳಾ ಸಂಘಟನೆ ಹಾಗೂ ಸಿಐಟಿಯು ಸಂಘಟನೆ ಸಹಯೋದೊಂದಿಗೆ, ಶೌಚಾಲಯ ಸೇವೆ ದೊರೆಯುವವರೆಗೂ ಹೋರಾಟ ಮಾಡುವುದಾಗಿ ಮಹಿಳೆಯರು ತಿಳಿಸಿದ್ದಾರೆ. ಸಮಾಜವಾದಿ ಮಹಿಳಾ ಸಂಘಟನೆ ಜಿಲ್ಲಾ ಸಂಚಾಲಕರಾದ ಸರ್ಧಾರ್ ಹುಲಿಗೆಮ್ಮ, ತಾಲೂಕು ಮುಖಂಡರು ಪದಾಧಿಕಾರಿಗಳು ಹಾಗೂ ಕೆಲ ಮಹಿಳೆಯರು ಮಾತನಾಡಿದರು. ಸಿಐಟಿಯು ಮುಖಂಡರಾದ ಗುನ್ನಳ್ಳಿ ರಾಘವೇಂದ್ರ, ಸಂಘಟನೆಯ ವಿವಿದ ಗ್ರಾಮಗಳ ಪದಾಧಿಕಾರಿಗಳು. ಜನವಾದಿ ಮಹಿಳಾ ಸಂಘಟನೆ ಪದಾಧಿಕಾರಿಗಳು. ಮೂರು ವಾರ್ಡ್ ಹಲವು ಮಹಿಳೆಯರು, ವಿಕಲಚೇತನ ಮಹಿಳೆಯರು, ವೃದ್ಧೆಯರು,ಬಾಲೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428