ಡಿಸೆಂಬರ್ – 06 ರಂದು ಡಾ. ಬಿ ಆರ್ ಅಂಬೇಡ್ಕರ್ ಅವರ 66 ನೇ ಸ್ಮರಣ ದಿನಾಚರಣೆ.

Spread the love

ಡಿಸೆಂಬರ್ – 06 ರಂದು ಡಾ. ಬಿ ಆರ್ ಅಂಬೇಡ್ಕರ್ ಅವರ 66 ನೇ ಸ್ಮರಣ ದಿನಾಚರಣೆ.

“ಪ್ರಗತಿಗೆ ವಿದ್ಯೆಯೇ ಮೂಲ” ಎಂಬ ಮಂತ್ರವನ್ನು ಸಾರಿದ ಭಾರತ ಸಂವಿಧಾನ ಶಿಲ್ಪಿಯಾದ ಹಾಗೂ ಶ್ರೇಷ್ಠ ಮಾನವತಾವಾದಿ ಡಾ. ಬಿಆರ್ ಅಂಬೇಡ್ಕರ್  ರವರು ಸ್ವಾತಂತ್ರ್ಯ ಪೂರ್ವ ಭಾರತದ ರಾಜಕೀಯ  ಉದ್ದಾಮ ವ್ಯಕ್ತಿಯಾಗಿ ,  ಪ್ರತಿಭವನ್ವಿತ ಮುಖಂಡರಾಗಿ ,  ರಾಜಕಾರಣಿಯಾಗಿ , ಮತ್ಸದ್ಧಿಯಾಗಿ ಮತ್ತು ದೇಶಪ್ರೇಮಿಯಾಗಿ ದೇಶದ ವಿಮೋಚನೆಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಚಿರಸ್ಮರಣೇಯರಾಗಿದ್ದವರಲ್ಲಿ ಇವರು ಒಬ್ಬರಾಗಿದ್ದಾರೆ ದೇಶದ ಎಲ್ಲಾ ಸಂಪತ್ತು , ಆಸ್ತಿ ಮತ್ತು ಶಿಕ್ಷಣ ರಾಷ್ಟ್ರೀಕರಣವಾಗಬೇಕೆಂದು ಕನಸು ಕಟ್ಟಿದ ಮಹಾಪುರುಷರಲ್ಲಿ ಒಬ್ಬರಾಗಿದ್ದವರು ಒಟ್ಟಾರೆ ನವಸಮಾಜದ ನಿರ್ಮಾಣಕ್ಕೆ ನಾಂದಿಯಾಗಬಲ್ಲ ಸಂವಿಧಾನವನ್ನು ರೂಪಿಸಿರುವ ಮತ್ತು ಶೋಷಣೆ ರಹಿತ ನವಸಮಾಜದ  ನಿರ್ಮಾಣಕ್ಕೆ ಕರೆ ನೀಡಿರುವ ಮಹಾನ್ ನಾಯಕರು ಡಾ.ಬಿ ಆರ್ ಅಂಬೇಡ್ಕರ್ ಬ್ರಿಟಿಷರ ಆಳ್ವಿಕೆಯಲ್ಲಿ ಇದ್ದಂತಹ ವ್ಯವಸ್ಥೆಗಿಂತ ಕ್ರೂರ ವ್ಯವಸ್ಥೆ ಈಗಿನ ಸಮಾಜದಲ್ಲಿದೆ . ಅಸಮಾನತೆ ,  ದಬ್ಬಾಳಿಕೆ , ಶೋಷಣೆ , ಸುಲಿಗೆ , ಬಡತನ , ಹಸಿವು , ಮೂಢನಂಬಿಕೆ , ದೌರ್ಜನ್ಯ , ಜಾತಿವಾದ , ಕೋಮುವಾದ , ಭ್ರಷ್ಟಾಚಾರ , ಅತ್ಯಾಚಾರ , ಇಲ್ಲದಂತಹ ಸಮಾಜದ ನಿರ್ಮಾಣಕ್ಕಾಗಿ ದುಡಿಯುವ ವರ್ಗದ ಜನತೆ ಸಂಘಟಿತರಾಗಿ ಹೋರಾಟ ಮಾಡುವ ಮೂಲಕ ಡಾ. ಬಿ ಆರ್  ಅಂಬೇಡ್ಕರ್ ಅವರ ಅನುಯಾಯಿಗಳಾಗಿ ಇವರ ಕನಸಾದ ಜಾತಿ ಇಲ್ಲದ ಸಮಾನತೆಯ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕಾಗಿದೆ ಆದರಿಂದ ದಿನಾಂಕ – 06/12/2022 ಮಂಗಳವಾರ ರಂದು ಜಾತಿ ನಿರ್ಮೂಲನ ಚಳುವಳಿ  ವತಿಯಿಂದ ಅಂಬೇಡ್ಕರ್ ಅವರ 66 ನೇ ಸ್ಮರಣ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ವಿದ್ಯಾರ್ಥಿ ಯುವಜನರು ,  ಮಹಿಳೆಯರು , ದಲಿತ ಮುಖಂಡರುಗಳು ಪ್ರಗತಿಪರ ಚಿಂತಕರು ,  ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳಲಾಗುವುದು ಸ್ಥಳ – ಪೆನ್ಷನ್ ಮೊಹಲ್ಲಾ ಅನ್ನಪೂರ್ಣೇಶ್ವರಿ ನಿಲಯದ ಹಿಂಭಾಗ ಚಿಕ್ಕಮಗಳೂರು ಸಂದೀಪ್ ಬಿ ಆರ್  ಸಂಘಟಕರು  ಜಾತಿ ನಿರ್ಮೂಲನ ಚಳುವಳಿ ಚಿಕ್ಕಮಗಳೂರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *