ಹೊಳೆಆಲೂರ ಕಲ್ಮೇಶ್ವರ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ.
ಹೊಳೆಆಲೂರ : ಇಲ್ಲಿನ ಶ್ರೀ ಕಲ್ಮೇಶ್ವರ ವಿದ್ಯಾಪ್ರಸಾರಕ ಸಮಿತಿಯ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಬಿ.ಎ, ಬಿ.ಕಾಮ್, ಬಿ.ಎಸ್.ಸಿ ವಿದ್ಯಾರ್ಥಿಗಳ ಸ್ವಾಗತ ಮತ್ತು ಕಲ್ಮೇಶ್ವರ ವಿದ್ಯಾ ಪ್ರಸಾರಕ ಸಮಿತಿಯ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮ ಜರುಗಿತು. ಮಹಾವಿದ್ಯಾಲಯದ ರಜತ ಮಹೋತ್ಸವ ಭವನದಲ್ಲಿ ಸೋಮವಾರ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಬಿ.ಸಿ.ಪಾಟೀಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ.ಎಸ್.ಎಸ್.ಕಾಲೇಜ್ ಗದಗನ ನಿವೃತ್ತ ಪ್ರಾಧ್ಯಾಪಕರಾದ ಶರಣಪ್ಪ ಬ.ಗಾವರವಾಡ,ಅತಿಥಿಗಳಾಗಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ಮಹಾಂತೇಶ್ ಬ್ಯಾಡಗಿ, ಡಿ.ಎಸ್.ಶೆಲ್ಲಿಕೇರಿ ಆಗಮಿಸಿದ್ದರು. ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರೊ.ಗಾವರವಾಡ ಮಾತನಾಡಿ, ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಅಗತ್ಯವಾಗಿವೆ. ದೈಹಿಕ, ಮಾನಸಿಕತೆ ಸದೃಢವಾಗಿದ್ದರೆ ಏನೇಲ್ಲ ಜಯಿಸಬಹುದು. ಪ್ರಥಮ ವರ್ಷ ಪ್ರವೇಶ ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ನಾಲ್ಕು ವರ್ಷದ ಅವಧಿಯಲ್ಲಿ ನೀವು ನಿಮ್ಮಲ್ಲಿನ ಪ್ರತಿಭೆ ವಿವಿಧ ರಂಗಗಳಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗುತ್ತದೆ ಸ್ಪರ್ಧಾತ್ಮಕತೆಯಿಂದ ಓದಿ ಅಂಕಗಳಿಸುವದರ ಜೊತೆಗೆ ಆಟೋಟಗಳಲ್ಲೂ ನಿಮ್ಮ ಪ್ರತಿಭೆ ತೋರಿ. ನಿಮ್ಮಲ್ಲಿ ಸೂಪ್ತವಾಗಿ ಅಡಗಿರುವ ಸಂಗೀತ, ಕಲೆ, ನಾಟ್ಯ, ಅಭಿನಯಗಳನ್ನು ಈ ವೇದಿಕೆಯ ಮೂಲಕ ವ್ಯಕ್ತಪಡಿಸಿ, ನಿಮ್ಮ ಜೀವನವನ್ನು ವಿಕಾಸಗೊಳಿಸಿ ಸಾಮಾಜಿಕ ಕಾರ್ಯಗಳೊಂದಿಗೆ ಯಶಸ್ವಿಯಾಗಿ ಸಾಗಿಸಿದರೆ ನೀವು ಕಲಿತ ವಿದ್ಯೆ, ಕಲಿಸಿದ ಗುರುಗಳ ಶ್ರಮ ಸಾರ್ಥಕ. ನಿಮ್ಮ ಸಂಸ್ಥೆಗೆ, ಗುರುವರ್ಗಕ್ಕೆ ಒಳ್ಳೆಯ ಹೆಸರು ತರುವ ಕೆಲಸ ನೀವೆಲ್ಲ ಮಾಡಿ, ನಿಮ್ಮ ಮುಂದಿನ ಭವಿಷ್ಯದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸಿ, ಜಾನಪದ ಹಾಡುಗಳನ್ನು, ಒಗಟುಗಳನ್ನು ಹೇಳುವ ಮೂಲಕ ರಂಜಿಸಿದರು. ಅತಿಥಿಗಳಾದ ಡಿ.ಎಸ್.ಶೆಲ್ಲಿಕೇರಿ ಮತ್ತು ಪ್ರಾಚಾರ್ಯ ಡಾ.ಎಂ.ಎನ್.ಕಡಪಟ್ಟಿಯವರು ವಿದ್ಯಾರ್ಥಿಗಳನ್ನು ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು. ಪ್ರಥಮ ವರ್ಷದ ಅಂಧವಿದ್ಯಾರ್ಥಿ ಭೀಮಸಿ ಕಬಾಡ ಯೋಗವನ್ನು ಪ್ರದರ್ಶಿಸಿದರು. ವೇದಿಕೆಯ ಮೇಲೆ ಪ್ರಾಚಾರ್ಯ ಡಾ.ಎಂ.ಎನ್.ಕಡಪಟ್ಟಿ, ಮಹಾವಿದ್ಯಾಲಯದ ಪ್ರಧಾನಕಾರ್ಯದರ್ಶಿ ಕುಮಾರ ನಾಗರಾಜ ಹುಡೇದ, ಮಹಿಳಾ ಪ್ರತಿನಿಧಿ ಕುಮಾರಿ ಅನ್ನಪೂರ್ಣ ಪಾಟೀಲ ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಕಲ್ಮೇಶ್ವರ ವಿದ್ಯಾ ಪ್ರಸಾರಕ ಸಮಿತಿಯ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಫಲಪುಷ್ಪಗಳೊಂದಿಗೆ ಶಾಲುಹೊದಿಸಿ ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸ್ವಾಗತವನ್ನು ನಿಸರ್ಗ ಜಾಲಿಹಾಳ ಮಾಡಿದರೆ , ಅಕ್ಷತಾ ಮಣ್ಣೂರ ,ಪೂಜಾ ಬೆಳವಲ ಪ್ರಾರ್ಥಿಸಿದರು. ನೂತನ ವಿಭಾಗಗಳ ಕಾರ್ಯಾಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪರಿಚಯವನ್ನು ರೇಷ್ಮಾ ಟಕ್ಕೇದ ನಡೆಸಿಕೊಟ್ಟರು. ಕೊನೆಯಲ್ಲಿ ಮಹಾದೇವಿ ಗೋಲಗೌಡ್ರ ವಂದಿಸಿದರು. ಅಶ್ವಿನಿ ಹರಪನಹಳ್ಳಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವಿಭಾಗದ ಚೇರಮನ್ ವಿಶ್ವನಾಥ ಪಾಟೀಲ, ಪ್ರಾಧ್ಯಾಪಕರಾದ ಡಾ.ಪ್ರಕಾಶ ಕಣವಿ, ಡಾ.ಎಸ್.ಬಿ.ಸಜ್ಜನರ, ಎನ್.ಆರ್.ಹಿರೇಸಕ್ಕರಗೌಡರ , ಮಂಜುನಾಥ ಬಸರಕೋಡ, ಸಂತೋಷ ಮಾಳವಾಡ, ಮಂಜುಳಾ ಬೆಳವಣಕಿ, ಜಯಶ್ರೀ ಪಾಟೀಲ, ಅಲ್ತಾಪ ನಧಾಪ, ಮಲ್ಲಿಕಾರ್ಜುನ ಬೇವೂರ, ವಿ.ಬಿ.ಜಾಲಿಹಾಳ,ಎಲ್.ಬಿ.ಕಪ್ಪಲಿ,ಎಸ್.ಆರ್.ಮುಂದಿನಮನಿ, ಆನಂದ ಕೆಂಚನಗೌಡ್ರ, ಎಸ್.ಆರ್.ನಾಯಕ, ಕೆ.ಬಿ.ಅತ್ತಾರ, ಶೇಖಪ್ಪ ಮಾಳವಾಡ,ಕನ್ನಡ ಸ್ನಾತಕೋತ್ತರಕೇಂದ್ರದ ಸಂಯೋಜಕ ಡಾ.ಪ್ರಭು ಗಂಜಿಹಾಳ, ಎನ್ ಎಸ್ ಎಸ್ ಯೋಜನಾಧಿಕಾರಿಗಳಾದ ಪ್ರೊ. ಎಸ್.ವಾಯ್.ಪೂಜಾರ, ಡಾ.ಕುಮಾರ ಹಂಜಗಿ, ದೈಹಿಕ ನಿರ್ದೇಶಕ ಮಂಜುನಾಥ ಸೋಮನಕಟ್ಟಿ, ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ: ಡಾ.ಪ್ರಭು ಗಂಜಿಹಾಳ.ಮೊ-9448775346