ನಮ್ಮ ದೇಶದ ಸಂವಿಧಾನ ಶಿಲ್ಪಿ, ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಕೋಟಿ, ಕೋಟಿ ನಮನಗಳು. ಗಣೇಶ್ ಕೆ ಯಡಿಹಳ್ಳಿ(ರಾಯಣ್ಣ ಅಭಿಮಾನಿ ದಾವಣಗೆರೆ)
ನಮ್ಮ ದೇಶದ ಮಹಾನ್ ನಾಯಕ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ, ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮಹಾನ್ ಚೇತನ, ಮಹಿಳಾ ಸಮಾನತೆಯ ಹರಿಕಾರ, ಇಂತಹ ಮೇರು ವ್ಯಕ್ತಿತ್ವದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಾಣ ದಿನದಂದು ಅವರನ್ನು ಮನಃಪೂರ್ವಕವಾಗಿ ಸ್ಮರಿಸುತ್ತಾ, ಕೋಟಿ, ಕೋಟಿ ನಮನಗಳನ್ನು ಸಲ್ಲಿಸುತ್ತೇನೆ. ಬಡತನ ಹಾಗೂ ಅಸ್ಪೃಶ್ಯತೆ ನಡುವೆ ಬೆಳೆದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ನಮ್ಮ ದೇಶದ ಮಹಾನ್ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅದೆಷ್ಟೋ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿ ರೂಪಗೊಂಡಿದ್ದಾರೆ. ಸಂವಿಧಾನ ನಮ್ಮ ದೇಶದ ಪವಿತ್ರ ಗ್ರಂಥ. ಈ ಪವಿತ್ರ ಗ್ರಂಥದ ಮೂಲಕ ನಮ್ಮ ದೇಶದ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದರು. ದೇಶದ ನಾಗರಿಕರಲ್ಲಿ ಮೇಲು ಕೀಳೆನ್ನದೇ ಎಲ್ಲರೂ, ನಮ್ಮ ದೇಶದ ಸಂವಿಧಾನದ ಅಡಿಯಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾದವರು, ನಮ್ಮ ಹೆಮ್ಮೆಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು.ನಮ್ಮ ದೇಶದಲ್ಲಿನ ಅಸಮಾನತೆಯನ್ನು ಹೊಡೆದೋಡಿಸಿ, ಸಾಮಾಜಿಕ ಸಮಾನತೆಯನ್ನು ಜಾರಿಗೊಳಿಸುವ ಮೂಲಕ ನಮ್ಮೆಲ್ಲರಲ್ಲಿ ಸ್ಪೂರ್ತಿ ತುಂಬಿದ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಆದರ್ಶವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ. ಈ ಮೂಲಕ ನಮ್ಮ ದೇಶವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಎಲ್ಲರೂ ಕೈಜೋಡಿಸಬೇಕಾಗಿದೆ. ನಮ್ಮ ದೇಶಕಂಡ ಮಹಾನ್ ನಾಯಕರಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಇಂದು ಮತ್ತೊಮ್ಮೆ ಹೃದಯಪೂರ್ವಕವಾಗಿ ಸ್ಮರಿಸುತ್ತಾ ಅವರಿಗೆ ಕೋಟಿ, ಕೋಟಿ, ನಮನಗಳನ್ನು ಸಲ್ಲಿಸುತ್ತೇನೆ ಜೈ ಚನ್ನಮ್ಮ ಜೈ ರಾಯಣ್ಣ.