ಫ್ರಾನ್ಸಿಸ್ ಡಿಸೋಜರವರಿಂದ ಬುದ್ದಿ ಮಾಧ್ಯಮದವರಿಗೆ ಚಿಕಿತ್ಸೆ ಕೊಡಿಸಲು ಯಶಸ್ವಿಯಾಯಿತು.

Spread the love

ಫ್ರಾನ್ಸಿಸ್ ಡಿಸೋಜರವರಿಂದ ಬುದ್ದಿ ಮಾಧ್ಯಮದವರಿಗೆ ಚಿಕಿತ್ಸೆ ಕೊಡಿಸಲು ಯಶಸ್ವಿಯಾಯಿತು.

ಎಲ್ಲಾರು ಇದ್ದು ಅನಾಥರಾದ ರಾಜು ಎಂಬ ವ್ಯಕ್ತಿ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಸ್ಥಳೀಯರು ಫೋನ್ ಮುಖಾಂತರ ಕರವೇ ತಾಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರಿಗೆ ತಿಳಿಸಿದ ಮೇರೆಗೆ ಆಂಬುಲೆನ್ಸ್ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರ ಸಂತೆ ಹೋಬಳಿ ಸೇರಿದ ಬಿದಿರೂರು ಹೊಸ ಕಾಲೋನಿ ನಿವಾಸಿ ರಾಜು ಎಂಬುವವರು  3 ದಿನಗಳಿಂದ ಆರೋಗ್ಯ ಸರಿಯಿಲ್ಲ ರಸ್ತೆ ಬದಿಯಲ್ಲಿ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ  ಬಿದ್ದಿರುವುದನ್ನು ಕಂಡು ಶನಿವಾರಸಂತೆ ಹೋಟೆಲ್ ಯೋಗಣ್ಣ ರವರು ಕರವೇ ತಾಲೂಕ್ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರಿಗೆ ಫೋನ್ ಮುಖಾಂತರ ಸಂಪರ್ಕಿಸಿ ವಿಷಯ ತಿಳಿಸಿದ ಕಾರಣ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಮಲಗಿದ್ದ  ರಾಜು ಎಂಬ ವ್ಯಕ್ತಿಯನ್ನು ಆಂಬುಲೆನ್ಸ್ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ಸೇರಿಸಲಾಯಿತು. ಸಂಪೂರ್ಣವಾಗಿ ಪ್ರಜ್ಞೆ ಇಲ್ಲದಂತಹ ಸ್ಥಿತಿಯಲ್ಲಿದ್ದಂತಹ ರಾಜು ರವರ ಬಟ್ಟೆ ಸಂಪೂರ್ಣವಾಗಿ ಗಲೀಜಾಗಿತ್ತು ಹಾಗಾಗಿ ಬಟ್ಟೆಯನ್ನು ಸಂಪೂರ್ಣ ಬದಲಾಯಿಸಿ ಬೇರೆ ಬಟ್ಟೆಯನ್ನು ತೊಡಸಿ ಆಸ್ಪತ್ರೆಗೆ ಆಸ್ಪತ್ರೆಗೆ ಸೇರಿಸಲಾಯಿತು ಈ ಸಂದರ್ಭದಲ್ಲಿ ಶನಿವಾರಸಂತೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಉತ್ತಮವಾಗಿ ಚಿಕಿತ್ಸೆ ಕೊಟ್ಟಿರುತ್ತಾರೆ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉತ್ತಮವಾಗಿ ಚಿಕಿತ್ಸೆಗೆ ಸಹಕರಿಸಿರುತ್ತಾರೆ ಅವರಿಗೆಲ್ಲಾಗು ಹೃದಯಪೂರ್ವಕ ಧನ್ಯವಾದಗಳು ಹಾಗೂ ಸರಿಯಾದ ಸಮಯಕ್ಕೆ ಆಂಬುಲೆನ್ಸ್ (108) ಬಂದು ಈ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ಸಹಕರಿಸಿದ ಆಂಬುಲೆನ್ಸ್ ಸಿಬ್ಬಂದಿಗಳಿಗೆ ಧನ್ಯವಾದಗಳು ಅರ್ಪಿಸುತ್ತೇನೆ ಹಾಗೂ ಪ್ರಜ್ಞೆ ಇಲ್ಲದೆ ಮಲಗಿದ್ದ ಸ್ಥಿತಿಯಲ್ಲಿದ್ದ ವ್ಯಕ್ತಿ ಬಗ್ಗೆ ನಮಗೆ ತಿಳಿಸಿ ಹೋಟೆಲ್ ಯೋಗಣ್ಣ ರವರಿಗೆ ಹೃದಯಪೂರ್ವಕ ಧನ್ಯವಾದಗಳು. ಹೊಸ ಬಟ್ಟೆಯನ್ನು ಕೊಟ್ಟಂತಹ ಕೃಷ್ಣ ಯಶಸ್ವಿನಿ ಕಲ್ಯಾಣ ಮಂಟಪ ಇವರಿಗೂ ಹೃದಯಪೂರ್ವಕ ಧನ್ಯವಾದಗಳು ಹಾಗೂ ಈ ವ್ಯಕ್ತಿ ಚಿಕಿತ್ಸೆಗೆ ಸಹಕರಿಸಿದಂತಹ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇವೆ. ಈ ಸಂದರ್ಭದಲ್ಲಿ ಕರವೇ ಫ್ರಾನ್ಸಿಸ್ ಡಿಸೋಜಾ ಹಾಗೂ ಕೃಷ್ಣ ಹಾಗೂ ಮಂಜು ಹಾಗೂ ವೀರೇಶ್ ಇವರೆಲ್ಲರೂ ಸೇರಿ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಹೋಗಿ ಚಿಕಿತ್ಸೆ ಕೊಡಿಸಿರುತ್ತೇವೆ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ಇದೇ ಸಂದರ್ಭದಲ್ಲಿ ಹೇಳುವುದೇನೆಂದರೆ ಯಾವುದೇ ವ್ಯಕ್ತಿಗಳು ಆರೋಗ್ಯ  ಸರಿಯಿಲ್ಲದ ಹಾಗೆ ರಸ್ತೆ ಬದಿಯಲ್ಲಿ ಅಥವಾ ಯಾವುದಾದರೂ ಮನೆಯ ಬದಿಯಲ್ಲಿ ಮಲಗಿದ್ದರೆ ದಯವಿಟ್ಟು ಅವರನ್ನು ಆಸ್ಪತ್ರೆಗೆ ಸೇರಿಸಿ ಇಲ್ಲದೆ ಹೋದರೆ ಕರವೇ ಕಾರ್ಯಕರ್ತರಿಗೆ ತಿಳಿಸಬೇಕೆಂದು ಮನವಿ..ಕರವೇ ಫ್ರಾನ್ಸಿಸ್ ಡಿಸೋಜಾ.. 9449255831 ಮತ್ತು 9686095831

ವರದಿ- ಸೋಮನಾಥ ಹೆಚ್.ಸಂಗನಾಳ

Leave a Reply

Your email address will not be published. Required fields are marked *