ಮೌಲಭೂತ ಸೌಕರ್ಯ ಒದಗಿಸುವುದಕ್ಕಾಗಿ ಹೋರಾಡುವೆ-AAP ನಾರಿ ಶ್ರೀನಿವಾಸ.
ವಿಜಯನಗರ ಜಿಲ್ಲೆ ಕೂಡ್ಲಿಗಿ, ಪಟ್ಟಣದ 9ನೇವಾರ್ಡ್ ಸೇರಿದಂತೆ ಎಲ್ಲಾ ವಾರ್ಡ್ ಗಳಿಗೆ. ಪಪಂ ನಿಂದ ವದಿಗಿಸಬೇಕಾಗಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು, ಸಮರ್ಪಕವಾಗಿ ಒದಗಿಸಿ ಕೊಡುವ ನಿಟ್ಟಿನಲ್ಲಿ ಹೋರಾಟ ನಡೆಸಲಾಗುವುದು. ಕೆಲವು ಅಗತ್ಯ ಸೌಕರ್ಯಗಳನ್ನು ತಾವೇ ಸ್ವತಃ ಪಕ್ಷದಿಂದ, ಕೂಡಲೇ ಒದಗಿಸಿಕೊಡಲಾಗುವುದು ಎಂದು. ಆಮ್ಆದ್ಮಿ ಪಕ್ಷದ ಮುಖಂಡ, ಹಾಗೂ ಕೂಡ್ಲಿಗಿ ಕ್ಷೇತ್ರದ ಶಾಸಕ ಸ್ಥಾನದ ಚುನಾವಣೆಯ. ಎಎಪಿ ಪಕ್ಷದ ಸ್ಪರ್ಧಾಳಾಗಿರುವ, ನಾರಿ ಶ್ರೀನಿವಾಸರವರು ನುಡಿದಿದ್ದಾರೆ. ಅವರು ಕೂಡ್ಲಿಗಿ ಪಟ್ಟಣದ 9ನೇ ವಾರ್ಡ್ ನಲ್ಲಿ,ಸಾರ್ವಜನಿಕರನ್ನು ಸಂದರ್ಶಿಸಿ ಅಹವಾಲು ಆಲಿಸಿದ ನಂತರ ಮಾತನಾಡಿದರು. ತಾವು ಪಟ್ಟಣ ಸೇರಿದಂತೆ ತಾಲೂಕಿನ ಪ್ರತಿ ಗ್ರಾಮಕ್ಕೆ ತೆರಲಿದ್ದು ಈಗಾಗಲೇ ಬಹುತೇಕ ಗ್ರಾಮಗಳಿಗೆ ಭೇಟ್ಟಿ ನೀಡಿರುವುದಾಗಿ ತಿಳಿಸಿದರು. ಎಎಪಿ ತಂಡ ತಾಲೂಕಿನಾಧ್ಯಂತ ಸಂಚಾರ ನಡೆಸಿದ್ದು, ಸಾರ್ವಜನಿಕರಿಂದ ಅಹವಾಲು ಸ್ವೀಕರಸಲಾಗುತ್ತಿದೆ. ಅಗತ್ಯ ಸೌಕರ್ಯಗಳಿಗೆ ಒತ್ತು ನೀಡಿ ಸಂಬಂಧಿಸಿದ ಇಲಾಖೆಗಳಿಂದ ನೊಂದವರಿಗೆ ನ್ಯಾಯ ವದಗಿಸಲು ಶ್ರಮಿಸುತ್ತಿರುವುದಾಗಿ ಅವರು ತಿಳಿಸಿದರು. ಬಡ, ಕೂಲಿ ಕಾರ್ಮಿಕರ,ರೈತರ,ಮಹಿಳೆಯರ,ವಿಕಲಚೇತನರ,ವೃದ್ಧರ,ಮಕ್ಕಳು ಸೇರಿದಂತೆ ಯುವಕರು ಹಾಗೂ ಎಲ್ಲಾ ವಯೋಮಾನದವರಿಗೆ. ಅಗತ್ಯ ಸರ್ಕಾರಿ ಸೌಲಭ್ಯಗಳನ್ನು ವದಿಗಿಸಿಕೊಡುವಲ್ಲಿ ತಾವು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ನಾರಿ ಶ್ರೀನಿವಾಸ್ ತಿಳಿಸಿದರು. ಈ ಸಂದರ್ಭದಲ್ಲಿ ಎಎಪಿ ತಾಲೂಕು ಮುಖಂಡರು ಮತ್ತು ಮಹಿಳಾ ಹೋರಾಟಗಾರರು,ಹಾಗೂ ಪಕ್ಷದ ಕಾರ್ಯಕರ್ತರು ನಾಗರೀಕರು ಇದ್ದರು.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ