ಕುಷ್ಟಗಿ ಪಟ್ಟಣ ಸಿಲ್ ಡೌನ್ ಮಾಡಬಹುದ ಇದಕ್ಕ ಸಂಪೂರ್ಣ ಮಾಹಿತಿ ನೀಡಿದ್ದಾರೆ ತಹಶೀಲ್ದಾರ ಎಂ.ಸಿದ್ದೇಶರವರು.
ಕರೋನಾ ಎರಡನೇ ಅಲೆ ಕುಷ್ಟಗಿ ಪಟ್ಟಣದಲ್ಲಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಪುರಸಭೆಯಲ್ಲಿ ಪುರಸಭೆ ಅಧ್ಯಕ್ಷರು, ಎಂ.ಎಲ್.ಎ. ತಹಸೀಲ್ದಾರರು, ಹಾಗೂ ಸಿಪಿಐ ಅವರ ನೇತೃತ್ವದಲ್ಲಿ ಸಭೆ ನಡೆಸಿದ್ದರು ಸಭೆಯಲ್ಲಿ ಎಲ್ಲಾ ಪುರಸಭೆ ಸದಸ್ಯರು ಕುಷ್ಟಗಿ ಪಟ್ಟಣವನ್ನು ಸಿಲ್ ಡೌನ್ ಮಾಡಬೇಕೆಂದು ಆಗ್ರಹಿಸಿದ್ದರು. ಸದರಿ ವಿಚಾರದಲ್ಲಿ ಕುಷ್ಟಗಿ ತಹಸೀಲ್ದಾರರು ಕೊಪ್ಪಳ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿ ಸದರಿ ವಿಷಯ ಪ್ರಸ್ತಾಪಿಸಿದಾಗ ಜಿಲ್ಲಾಧಿಕಾರಿಯವರು ಹಾಗೆ ಏಕಾಏಕಿ ಸಿಲ್ ಡೌನ್ ಮಾಡಲು ಬರುವುದಿಲ್ಲ ರಾಜ್ಯದಲ್ಲಿ ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಗೈಡ್ ಲೈನ್ ಹೊರಡಿಸಿದ್ದು. ಕುಷ್ಟಗಿ ಪಟ್ಟಣಕ್ಕಾಗಿ ಬೇರೆ ನಿಯಮಾವಳಿಗಳನ್ನು ರೂಪಿಸಲು ಬರುವುದಿಲ್ಲ ಎಂದು ಮೌಖಿಕವಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ ಅಲ್ಲದೆ ಸರ್ಕಾರ ಲಾಕ್ ಡೌನ್ ವಿಚಾರದಲ್ಲಿ ಏನು ನಿಯಮಾವಳಿಗಳನ್ನು ಮಾಡಿದೆ ಅದೇ ನಿಯಮಾವಳಿಗಳು ಕುಷ್ಟಗಿ ಪಟ್ಟಣಕ್ಕೂ ಅನ್ವಯಿಸುತ್ತವೆ ಎಂದಿದ್ದಾರೆ ಹಾಗಾಗಿ ಕುಷ್ಟಗಿ ಪಟ್ಟಣವನ್ನು ಸಿಲ್ ಡೌನ್ ಮಾಡುವ ಪ್ರಕ್ರಿಯೆ ಕೈ ಬಿಡಲಾಗಿದೆ ಎಂದು ಕುಷ್ಟಗಿ ತಹಸೀಲ್ದಾರರಾದ ಎಂ ಸಿದ್ದೇಶ್ ಅವರು ತಿಳಿಸಿದ್ದಾರೆ.
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ