ಸಂಗೀತದಿಂದ ನೆಮ್ಮದಿ ಸಾಧ್ಯ: ಶರಣೆ ಗೌಡ ಪಾಟೀಲ್.

Spread the love

ಸಂಗೀತದಿಂದ ನೆಮ್ಮದಿ ಸಾಧ್ಯ: ಶರಣೆ ಗೌಡ ಪಾಟೀಲ್.

ಕುಷ್ಟಗಿ : ಒತ್ತಡದ ಜೀವನದಲ್ಲಿ ಸಂಗೀತವನ್ನು ಆಲೋಚಿಸಿದಾಗ ನೋವನ್ನು ದೂರ ಮಾಡಲು ಸಾಧ್ಯ ಎಂದು ಶರಣೆ ಗೌಡ ಪಾಟೀಲ್ ಉದ್ಘಾಟಿಸಿ ಮಾತನಾಡಿದರು. ತಾವರಗೇರಾ ಸಮೀಪದ ನವಲಹಳ್ಳಿ ಶ್ರೀ ದುರ್ಗಾ ದೇವಿ ದೇವಸ್ಥಾನದಲ್ಲಿ  ಗಾನಯೋಗಿ ಸಂಗೀತ ಕಲಾ ಸಂಘ ರಿ ಲಿಂಗನಬಂಡಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ/ಬೆಂಗಳೂರು ಇವರ ಸಹಯೋಗದಲ್ಲಿ 2022/23ನೇ ಸಾಲಿನ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರುಗಿತು.ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ ಮಾತನಾಡಿ ಸಂಗೀತದಿಂದ ಮನಸ್ಸಿಗೆ ನೆಮ್ಮದಿ ತರುವುದರ ಜೊತೆಗೆ ವಿವಿಧ ಕಾಯಿಲೆಯನ್ನು ಗುಣಪಡಿಸುವ ಶಕ್ತಿಯಿದೆ , ಜೊತೆಗೆ ಭಾರತೀಯ ಸಂಸ್ಕೃತಿಯಲ್ಲಿ ಸಂಗೀತಕ್ಕೆ ವಿಶೇಷ ಸ್ಥಾನಮಾನವಿದೆ . ಇತ್ತಿಚೆಗೆ ಸಂಗೀತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹ ಸಿಗುತ್ತಿದೆ, ಮಕ್ಕಳು ಸಂಗೀತ ಅಭ್ಯಾಸಕ್ಕೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಶಾಸ್ತ್ರೀಯ ಸಂಗೀತ ಗಾಯಕರಾದ ಡಿ.ಹನುಮಂತ ಕುಮಾರ್ ಲಿಂಗನಬಂಡಿ ಹಾಗೂ ಹಾರ್ಮೋನಿಯಂ ಸಾಥ್ ಹನುಮಂತ ನರೇಗಲ್ ತಬಲಾ ಸಾಥ್ ಪ್ರತಾಪ್ ಕುಮಾರ್ ಹಿರೇಮಠ್, ಸುಗಮ ಸಂಗೀತ ಹೊಳಿಯಪ್ಪ ಹುಲಿಹೈದರ, ವಚನ ಸಂಗೀತ ಶರಣು ಕುಮಾರ್ ಚನ್ನದಾಸರ,ವಿಶೇಷ ಸಂಗೀತ ಹನುಮಂತ ಎಸ್ ನರೇಗಲ್ ಸಂಗೀತ ಶಿಕ್ಷಕರು ಹಿರೇವಂಕಲಕುಂಟಾ, ಮುಖ್ಯ ಅತಿಥಿಗಳಾದ ಪರಸಪ್ಪ ಚಿಟಗಿ,ಹಿರೇ ಮುದುಕಪ್ಪ ಬಂಡೆರ್, ಶ್ರೀ ಮತಿ ಹಂಪಮ್ಮ ಕೋರಿ, ಶ್ರೀ ಮತಿ ಗಂಗಮ್ಮ ಕಂದಗಲ್, ಬಸವರಾಜ ಮಹಾಂತ,ಶಾಂತನಂದ ಲಿಂಗನಬಂಡಿ ಹಾಗೂ ಊರಿನ ಗ್ರಾಮಸ್ಥರು ಗುರು ಹಿರಿಯರು ಪಾಲ್ಗೊಂಡಿದ್ದರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *